ಯಡಿಯೂರಪ್ಪನ ಮಗ ಅಂತ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ : ಬಿವೈ ವಿಜಯೇಂದ್ರ

BY Vijayendra : ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡೊ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗ್ತೇನೆ ಎಂದು ನೂತನ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Written by - Krishna N K | Last Updated : Nov 10, 2023, 09:34 PM IST
  • ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಪೋಸ್ಟ್ ಕೊಟ್ಟಿಲ್ಲ.
  • ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ.
  • ಪಕ್ಷ ಬೀಡೊ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗ್ತೇನೆ .
ಯಡಿಯೂರಪ್ಪನ ಮಗ ಅಂತ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ : ಬಿವೈ ವಿಜಯೇಂದ್ರ title=

ಬೆಂಗಳೂರು : ನನ್ನನ್ನು ಬಿ.ಎಸ್‌. ಯಡಿಯೂರಪ್ಪ ಅವರ ಮಗ ಎಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ, ಅವರ ಮಗ ಎನ್ನುವ ಹೆಮ್ಮೆ ನನಗಿದೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಿಳಿಸಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಶುಕ್ರವಾರ ಶಾಸಕಾಂಗ ಸಭೆ ನಡೆಯಲಿದೆ. ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ. ಯಡಿಯೂರಪ್ಪ ಅವರು ನಡ್ಡಾ ಜೊತೆ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಆ ಮೆಗಾ ಹೀರೋ ಸಿನಿಮಾವನ್ನು 3 ಬಾರಿ ತಿರಸ್ಕರಿಸಿದ ಅನುಷ್ಕಾ, ಕಾರಣ ಏನು..?

ಇದೇ ವೇಳೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದ ಕುರಿತು ಮಾತನಾಡಿದ ಅವರು, ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡೊ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗ್ತೇನೆ ಎಂದು ಹೇಳಿದರು. ಅಲ್ಲದೆ, ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಸೋಮಣ್ಣ, ಅಶೋಕ್, ಯತ್ನಾಳ್, ಬೊಮ್ಮಾಯಿ ಸೇರಿದಂತೆ‌ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

ಇನ್ನು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಹಿನ್ನೆಲೆ ಅಥಣಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಮಾಜಿ ಶಾಸಕ ಕುಮಠಳ್ಳಿ, ಹಾಗೂ ಕುಡಚಿ ಮಾಜಿ ಶಾಸಕ ಪಿ ರಾಜೀವ್ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಸಹ ಕಮಲ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News