Bangalore Crime : ಹಣಕ್ಕಾಗಿ ಪ್ರೇಯಸಿಯನ್ನೇ ಕೊಂದ ಪ್ರಿಯಕರ‌‌‌‌!

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ. 24 ವರ್ಷದ ಯುವತಿ ಕೊಲೆಯಾಗಿರುವುದು ಬುಧವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Written by - Channabasava A Kashinakunti | Last Updated : Dec 17, 2021, 04:50 PM IST
  • ಯೋಗ ತರಬೇತಿ ಶಿಕ್ಷಕನಿಂದ ಪ್ರಿಯತಮೆ ಹತ್ಯೆ
  • ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌
  • 24 ವರ್ಷದ ಯುವತಿ ಕೊಲೆಯಾಗಿರುವುದು ಬುಧವಾರ ರಾತ್ರಿ ನಡೆದ ಘಟನೆ
Bangalore Crime : ಹಣಕ್ಕಾಗಿ ಪ್ರೇಯಸಿಯನ್ನೇ ಕೊಂದ ಪ್ರಿಯಕರ‌‌‌‌! title=

ಬೆಂಗಳೂರು : ಯೋಗ ತರಬೇತಿ ಶಿಕ್ಷಕನಿಂದ ಪ್ರಿಯತಮೆ ಹತ್ಯೆ ಮಾಡಿದ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ. 24 ವರ್ಷದ ಯುವತಿ ಕೊಲೆಯಾಗಿರುವುದು ಬುಧವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಯುವತಿ ಯೋಗ ತರಬೇತಿ ಶಿಕ್ಷಕ(Yoga Training Teacher) ಶ್ಯಾಮು (27) ಎಂಬಾತನ ಬಳಿ ಕ್ಲಾಸ್ ಗೆ ಹೋಗುತ್ತಿದ್ದಳು.ಇದೇ ವೇಳೆ ಇಬ್ಬರ ನಡುವೆ ಪ್ರೀತಿಯಾಗಿ ಮದುವೆಯಾಗಲು ತಯಾರಿ ನಡೆಸಿದ್ದ. ಕೊಲೆಯಾದ ಯುವತಿ ಶ್ಯಾಮ್ ನಿಂದ ತರಬೇತಿ ಪಡೆದು ಪ್ರತ್ಯೇಕವಾಗಿ ಕ್ಲಾಸ್ ನಡೆಸುತ್ತಿದ್ದಳು. ಇದಕ್ಕಾಗಿ ಯುವತಿ ಶ್ಯಾಮ್ ನಿಂದ ಒಂದು ಲಕ್ಷ ಹಣ ಪಡೆದಿದ್ದಳು. ಯುವತಿ ಮೂಲತ: ಉಡುಪಿ ಮೂಲದವಾಳಗಿದ್ದು, ಶ್ಯಾಮ್ ದಾಂಡೇಲಿ ಮೂಲದವನಾಗಿದ್ದಾನೆ.

ಇದನ್ನೂ ಓದಿ : Crime: ಅಮಾಯಕ ಯುವತಿಯ ಜೀವ ತೆಗೆಯಿತು ಪಾಗಲ್ ಪ್ರೇಮಿಯ ಹುಚ್ಚಾಟ..!

ಈ ಇಬ್ಬರು ಪ್ರೇಮಿಗಳು(Lovers) ಮನೆಯಲ್ಲೂ ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದ. 

ಪ್ರೇಯಸಿಗಾಗಿ ಯಲಹಂಕ ನ್ಯೂ ಟೌನ್(Yelahanka New Town) ನಲ್ಲಿ ಶ್ಯಾಮ್ ರೂಮ್ ಮಾಡಿಕೊಟ್ಟಿದ್ದ. ಬುಧವಾರ ರಾತ್ರಿ ಮನೆಗೆ ಬಂದಾಗ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದೇ ವೇಳೆ ಪ್ರಿಯಕರ‌‌ ಕೋಪಗೊಂಡು ಯುವತಿ ತಲೆ ಗೋಡೆಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News