ಬಿಜೆಪಿ ಎಡವಟ್ಟು: ಬಿಬಿಎಂಪಿ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಫೋಟೋ ಹಾಕಿ ರೌಡಿ ಎಂದು ಪೋಸ್ಟ್‌

ಸದ್ಯ ರಾಜಕೀಯ ವಲಯದಲ್ಲಿ ರೌಡಿ ವಾರ್ ಶುರುವಾಗಿದೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಅವನು ರೌಡಿ ಇವನೂ ರೌಡಿ ಎಂಬ ಟಾಕ್ ವಾರ್ ನಡುವೆ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಜಯನಗರ ಕಾರ್ಯಕರ್ತ ಮತ್ತು ಬಿಬಿಎಂಪಿ ಟಿಕೆಟ್ ಆಕಾಂಕ್ಷಿಯಾಗಿರುವ ಚೇತನ್ ಫೋಟೋ ಹಾಕಿ ರೌಡಿ ಎಂಬಂತೆ ಬಿಂಬಿಸಿದೆ.

Written by - VISHWANATH HARIHARA | Edited by - Manjunath N | Last Updated : Dec 4, 2022, 07:48 PM IST
  • ಈ ಕುರಿತ ಪೋಟೋಗಳನ್ನ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು,
  • ಇದಕ್ಕೆ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಪೋಸ್ಟ್ ಡಿಲೀಟ್‌ ಮಾಡದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಟ್ವಿಟ್ಟರ್‌ನಲ್ಲೆ ಚೇತನ್ ಬಿಜೆಪಿಗೆ ಖಾರವಾಗಿ ಉತ್ತರಿಸಿದ್ದಾರೆ.
ಬಿಜೆಪಿ ಎಡವಟ್ಟು: ಬಿಬಿಎಂಪಿ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಫೋಟೋ ಹಾಕಿ ರೌಡಿ ಎಂದು ಪೋಸ್ಟ್‌ title=

ಬೆಂಗಳೂರು: ಸದ್ಯ ರಾಜಕೀಯ ವಲಯದಲ್ಲಿ ರೌಡಿ ವಾರ್ ಶುರುವಾಗಿದೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಅವನು ರೌಡಿ ಇವನೂ ರೌಡಿ ಎಂಬ ಟಾಕ್ ವಾರ್ ನಡುವೆ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಜಯನಗರ ಕಾರ್ಯಕರ್ತ ಮತ್ತು ಬಿಬಿಎಂಪಿ ಟಿಕೆಟ್ ಆಕಾಂಕ್ಷಿಯಾಗಿರುವ ಚೇತನ್ ಫೋಟೋ ಹಾಕಿ ರೌಡಿ ಎಂಬಂತೆ ಬಿಂಬಿಸಿದೆ.

ಇದನ್ನೂ ಓದಿ :  Video Viral : ಲಿಫ್ಟ್‌ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು.. ಸಿಸಿಟಿವಿ ದೃಶ್ಯ ವೈರಲ್

ಈ ಕುರಿತ ಪೋಟೋಗಳನ್ನ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಇದಕ್ಕೆ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಸ್ಟ್  ಡಿಲೀಟ್‌ ಮಾಡದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಟ್ವಿಟ್ಟರ್‌ನಲ್ಲೆ ಚೇತನ್ ಬಿಜೆಪಿಗೆ ಖಾರವಾಗಿ ಉತ್ತರಿಸಿದ್ದಾರೆ.ಇನ್ನೂ ಕಳೆದ 15 ದಿನಗಳಿಂದ ರಾಜ್ಯದಲ್ಲಿ ರೌಡಿ ರಾಜಕಾರಣದ ಬಗ್ಗೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸದ್ಯ ಬಿಜೆಪಿ ನಾಯಕುರ ಹಾಗೂ ಕಾಂಗ್ರೆಸ್‌ ನಾಯಕರು ಒಬ್ಬರಿಗೊಬ್ಬರು ವಾಕ್‌ ಸಮರ ನಡೆಸುತ್ತಿದ್ದಾರೆ.

ಇದನ್ನೂ ಓದಿ : Winter Tips : ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುತ್ತವೆ ಈ 7 ಪಾನೀಯಗಳು!

ಸದ್ಯ ಚೇತನ್ ಫೋಟೋ ಹಾಕಿ ರೌಡಿ ಎಂದಿರುವ ಬಿಜೆಪಿ ನಡೆ ಬಗ್ಗೆ ಕಾಂಗ್ರೆಸ್‌ ನಾಯಕರು ಯಾವ ಉತ್ತರ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News