"ದಂಗೆ ಆಗಲಿ, ಗಲಭೆ ಆಗಲಿ ಎನ್ನುವವರೇ ಬಿಜೆಪಿಯವರು"

ದಂಗೆ ಆಗಲಿ, ಗಲಭೆ ಆಗಲಿ ಎನ್ನುವವರೇ ಬಿಜೆಪಿಯವರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Written by - Manjunath N | Last Updated : Dec 23, 2023, 07:05 PM IST
  • ಸಮಾಜದಲ್ಲಿ ಸಂವೇದನಾಶೀಲತೆ ಇರಬೇಕು, ಸಮಾಜದಲ್ಲಿ ಸೌಹಾರ್ದತೆ ಇರಬೇಕು.
  • ಇತಿಹಾಸವನ್ನು ಕೆದಕಲು ಹೋಗುವುದು ಒಳ್ಳೆಯದಲ್ಲ,
  • ಬಿಜೆಪಿಯವರದು ಸರ್ವಾಧಿಕಾರಿ ಧೋರಣೆ, ಸಂವಿಧಾನ ಹೇಳುವುದು ಎಲ್ಲಾ ಧರ್ಮ, ಜಾತಿ, ಭಾಷೆ ಒಂದೇ ಅಂತಾ ಹೇಳೋದು, ನಾವೆ ಬೇರೆ ದಾರಿ ಹಿಡಿದರೆ ದೇಶಕ್ಕೆ ಒಳ್ಳೆಯದಾಗಲ್ಲ
"ದಂಗೆ ಆಗಲಿ, ಗಲಭೆ ಆಗಲಿ ಎನ್ನುವವರೇ ಬಿಜೆಪಿಯವರು" title=
file photo

ಚಾಮರಾಜನಗರ: ದಂಗೆ ಆಗಲಿ, ಗಲಭೆ ಆಗಲಿ ಎನ್ನುವವರೇ ಬಿಜೆಪಿಯವರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ದಂಗೆ ಆಗಲಿ ಎನ್ನುವವರೇ ಬಿಜೆಪಿಯವರು, ಕೋಮು ಗಲಭೆ ಬಯಸುವವರು ಬಿಜೆಪಿಯವರು, ಇಬ್ಬರು-ಮೂರು ಜನ ಸತ್ತರೆ  ರಾಜಕೀಯ ಲಾಭ ಸಿಗಲಿದೆ ಎಂದು ಯೋಚಿಸುವವರೇ ಬಿಜೆಪಿಯವರು, ಇದೇ ಬಿಜೆಪಿಯವರ ಸ್ರ್ಟಾಟಜಿ ಎಂದು ಹಿಜಾಬ್ ವಿಚಾರದಲ್ಲಿ ದಂಗೆ ಆಗಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ

ಹಿಜಾಬ್ ನಿಷೇಧದ ಆದೇಶ ಹಿಂಪಡೆಯುವದರ ಬಗ್ಗೆ ಅವರು ಮಾತನಾಡಿ,ಇದು ಜಾತ್ಯಾತೀತ ರಾಷ್ಟ್ರ ಎಲ್ರಿಗೂ ಗೌರವದಿಂದ ಕರೆದು ಕೊಂಡು ಹೋಗುವ ಅವಕಾಶ ಮಾಡಿ ಕೊಡಬೇಕು, ವಾತಾವರಣವನ್ನ ಹಾಳು ಮಾಡುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಅಂತ ವ್ಯಕ್ತಿಗಳಿದ್ದಾರೆ, ಇಷ್ಟು ವರ್ಷ ಇಲ್ದೆ ಇರೋ ವಿಚಾರಗಳು ಈಗ ಯಾಕೆ ತಲೆ ಎತ್ತುತ್ತಿವೆ, ಈ ವಿಚಾರವನ್ನ ಬೆಳೆಸಲು ಹೋದ್ರೆ ಅವರಿಗೂ ಕೂಡ ಒಳ್ಳೆದಾಗಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ, ಚಾಮರಾಜನಗರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ, ಕನಿಷ್ಠ ಮೂರು ಹೆಸರುಗಳನ್ನು ಕಳುಹಿಸಿಕೊಡುವಂತೆ ಹೈಕಮಾಂಡ್ ತಿಳಿಸಿದ್ದು ಎಲ್ಲವನ್ನೂ ಪರಾಮರ್ಶಿಸಿ ಪಟ್ಟಿಯನ್ನು ಕಳುಹಿಸಲಾಗುವುದು ಎಂದರು.

ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ ಖಂಡನೀಯ: ಬಸವರಾಜ ಬೊಮ್ಮಾಯಿ

ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿ, ಯಾವುದನ್ನು ನಿರ್ಬಂಧ ಮಾಡಿಲ್ಲ, ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ, ಜನರು ಆತಂಕ ಪಡಬಾರದು, ಮುನ್ನೆಚ್ಚರಿಕೆಯಿಂದ ಇರಬೇಕು ಎಂದರು.

ಸಿಎಂ ನಿರ್ಧಾರ  ಒಪ್ಪಿಕೊಂಡ ಸಚಿವ: 

ಸಿಎಂ ಸಿದ್ದರಾಮಯ್ಯ ಅವರಿಂದ  ಹಿಜಾಬ್ ನಿಷೇಧ ವಾಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ವ್ಯವಸ್ಥೆಯಲ್ಲಿ ಇಷ್ಟು ದಿನ ನಮ್ಮ ದೇಶ, ರಾಜ್ಯ ನಡೆದುಕೊಂಡು ಬಂದಿದೆ, ಅದನ್ನು ಮುಂದುವರೆಸಿಕೊಂಡು ಹೋಗ್ಬೇಕು, ಬಿಜೆಪಿ ಕೋಮು ದ್ವೇಷ ಹೆಚ್ಚಾಗಲಿ ಅಂಥಾ ಇದನ್ನೆಲ್ಲಾ ಮಾಡಿಸಿದ್ದಾರೆ,
ಇದೀಗ ಸಿದ್ದರಾಮಯ್ಯ ಸರಿಯಾದ ನಿರ್ಧಾರ ಮಾಡಿದ್ದಾರೆ ಎಂದರು.

ನಮ್ಮ ಸಮಾಜ ಎಲ್ಲರ ಒಟ್ಟಿಗೆ ಸಾಗಬೇಕು, ಗೌರವ ಇರಬೇಕು,ಎಲ್ಲರ ಪದ್ಧತಿಗೆ ಮರ್ಯಾದೆ ಕೊಡಬೇಕು, ಸ್ವತಂತ್ರ ಬಂದು 75 ವರ್ಷ ಆಯ್ತು, ಇಷ್ಟು ವರ್ಷ ಈ ಇಶ್ಯೂ ಇತ್ತಾ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಸಂವೇದನಾಶೀಲತೆ ಇರಬೇಕು, ಸಮಾಜದಲ್ಲಿ ಸೌಹಾರ್ದತೆ ಇರಬೇಕು. ಇತಿಹಾಸವನ್ನು ಕೆದಕಲು ಹೋಗುವುದು ಒಳ್ಳೆಯದಲ್ಲ, ಬಿಜೆಪಿಯವರದು ಸರ್ವಾಧಿಕಾರಿ ಧೋರಣೆ, ಸಂವಿಧಾನ ಹೇಳುವುದು ಎಲ್ಲಾ ಧರ್ಮ, ಜಾತಿ, ಭಾಷೆ ಒಂದೇ ಅಂತಾ ಹೇಳೋದು, ನಾವೆ ಬೇರೆ ದಾರಿ ಹಿಡಿದರೆ ದೇಶಕ್ಕೆ ಒಳ್ಳೆಯದಾಗಲ್ಲ ಎಂದು ಹೇಳಿಕೆ ಕೊಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News