ಈತ ಓದಿದ್ದು ಎಂಬಿಎ : ಮಾಡಿದ್ದು ಮಾತ್ರ ಬರೋಬ್ಬರಿ 150 ಮನೆಗಳ್ಳತನ..!

ಎಂಬಿಎ ಮುಗಿಸಿದ ಈತ ಹಲವು ಕಂಪನಿಗಳಲ್ಲಿ ಕೆಲಸಕ್ಕೆ ಯತ್ನಿಸಿದ್ದ. ಅದ್ಯಾಕೋ ಏನೊ ಎಲ್ಲೂ ಇವನಿಗೆ ಕೆಲಸ ಸಿಗಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದೆ ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬದುಕಿಗಾಗಿ ಆರಂಭದಲ್ಲಿ ಅಡ್ಡ ದಾರಿ ಹಿಡಿದ ಈತ, ಮುಂದೆ ಅದನ್ನೆ ಪ್ರೊಫೆಷನಲ್ ಮಾಡಿಕೊಂಡಿದ್ದ...

Written by - VISHWANATH HARIHARA | Edited by - Krishna N K | Last Updated : Jan 31, 2024, 03:31 PM IST
  • ಅವಕಾಶ ವಂಚಿತರ ಬದುಕು ಏನು ಬೇಕಾದ್ರು ಆಗಬಹುದು.
  • ಎಂಬಿಎ ಓದಿದ್ದ ಆರೋಪಿ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ.
  • ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬಟ್ ನೋ ಯೂಸ್.
ಈತ ಓದಿದ್ದು ಎಂಬಿಎ : ಮಾಡಿದ್ದು ಮಾತ್ರ ಬರೋಬ್ಬರಿ 150 ಮನೆಗಳ್ಳತನ..! title=

ಬೆಂಗಳೂರು : ಅವಕಾಶ ವಂಚಿತರ ಬದುಕು ಏನು ಬೇಕಾದ್ರು ಆಗಬಹುದು ಅನ್ನೋಕೆ ಈ ಸ್ಟೋರಿ ಬೆಸ್ಟ್ ಎಗ್ಸಾಂಪಲ್. ಆತ ಎಂಬಿಎ ಓದಿ, ಯಾವುದಾದ್ರು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ. ಆದರೆ ಅವನ ಹಣೆಬರಹದಲ್ಲಿ ಅವನಿಗೊಂದು ಕೆಲಸ ಸಿಗದಂತೆ ಬ್ರಹ್ಮ ಬರೆದಿದ್ದ ಅನ್ನಿಸುತ್ತೆ. ಅದಕ್ಕಾಗಿ ಆತ ಮಾಡುತ್ತಿದ್ದ ಕೆಲಸ ಏನು ಅಂತಾ ಹೇಳಿದ್ರೆ ಶಾಕ್ ಆಗುವ ಸ್ಟೋರಿ ಇಲ್ಲಿದೆ ನೋಡಿ.

ಹೌದು, ಆತನ ಹೆಸರು ಹವೇಜ್. ಮೂಲತಃ ಹೈದ್ರಾಬಾದ್ ನಗರದ ನಿವಾಸಿ. ಎಂಬಿಎ ಮುಗಿಸಿದ ಈತ ಹಲವು ಕಂಪನಿಗಳಲ್ಲಿ ಕೆಲಸಕ್ಕೆ ಯತ್ನಿಸಿದ್ದ. ಅದ್ಯಾಕೋ ಏನೊ ಎಲ್ಲೂ ಇವನಿಗೆ ಕೆಲಸ ಸಿಗಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದೆ ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬಟ್ ನೋ ಯೂಸ್.. 

ಇದನ್ನೂ ಓದಿ:ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಮನುಷ್ಯರಾಗಿ ಬಾಳಬೇಕು

ಹೀಗೆ ಆದ್ರೆ ಬದುಕು ದುಸ್ಥರ ಆಗೋದು ಪಕ್ಕ. ಹೇಗಾದ್ರು ದುಡಿಯಲೇಬೇಕು ಅಂತಾ ನಿರ್ಧಾರ ಮಾಡಿದ್ದ. ನಿರ್ಧಾರ ಏನು ಸರಿಯಾಗೆ ಇತ್ತು. ಆದ್ರೆ ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಕಳ್ಳತನ. ಬದುಕಿಗಾಗಿ ಆರಂಭದಲ್ಲಿ ಅಡ್ಡ ದಾರಿ ಹಿಡಿದ ಹವೇಜ್, ಮುಂದೆ ಅದನ್ನೆ ಪ್ರೊಫೆಷನಲ್ ಮಾಡಿಕೊಂಡಿದ್ದ. ಸಾಲದು ಅಂತ ಕಳ್ಳತನ ಪ್ರಕರಣದಲ್ಲಿ ಹಲವಾರು ಬಾರಿ ಜೈಲು ಸೇರಿದ. 

ಹೀಗೆ ಜೈಲು ಸೇರಿದ ಹವೇಜ್ , ಮತ್ತಿಬ್ಬರಾದ ಅಬುತಾಲಿಕ್, ಹೈಮದ್, ಎಂಬ ಚಾಲಾಕಿಗಳ ಜೊತೆಗೆ ಸೇರಿಸಿಕೊಂಡು 150 ಮನೆಗಳನ್ನ ದೋಚಿ ಜೈಲು ಸೇರಿದ್ರು. ಯಾವಾಗ ನಗರದಲ್ಲಿ ಯಾವುದೇ ಕಳ್ಳತನ ಆದ್ರು ಪೊಲೀಸರು ಇವರ ಬಂಧಿಸಿ ಬಡಿತಿದ್ರು. ಆಗಲೇ ಈ ಚಾಲಾಕಿ ಚೋರರು ಬೆಂಗಳೂರಿಗೆ ಎಂಟ್ರಿ ಕೊಟ್ಟು ಮಡಿವಾಳದಲ್ಲಿ  ಮಾರುತಿ ನಗರದಲ್ಲಿ ಮನೆ ದೋಚಿದ್ರು. 

ಇದನ್ನೂ ಓದಿ:ದೇವನ ಹಳ್ಳಿ ಜಿಲ್ಲಾ ಆಸ್ಪತ್ರೆಗೆ ಅನುದಾನ ಬಿಡುಗಡೆಗೆ ಆಗ್ರಹ

ಈ ಬಗ್ಗೆ ಪ್ರಕರಣ ದಾಖಲಿಸಿದ ಮಡಿವಾಳ ಪೊಲೀಸರು ಚೋರರ ಬೆನ್ನು ಬಿದ್ದು ಬಂಧಿಸಿದ್ದಾರೆ. ಸಿಸಿಕ್ಯಾಮರಾ ಮತ್ತು ಫಿಂಗರ್ ಫ್ರಿಂಟ್ ಸಹಾಯದ ಮೂಲಕ ಆರೋಪಿಗಳ ಕೈಗೆ ಕೋಳ ತೋಡಿಸಿ ಜೈಲಿಗಟ್ಟಿದ್ದಾರೆ.
ಅದೇನೆ ಇರಲಿ, ಎಂಬಿಎ ಪದವಿದರನೊಬ್ಬ ಅವಕಾಶ ವಂಚಿತನಾಗಿ ಅಂತರ್ ರಾಜ್ಯ ಕಳ್ಳನಾಗಿದ್ದು ವಿಪರ್ಯಾಸವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News