ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಐತಿಹಾಸಿಕ ಕಂಬಳ

ಕಂಬಳದಲ್ಲಿ  200ಕ್ಕೂ ಹೆಚ್ಚು ಕೋಣಗಳು ಭಾಗಿಯಾಗಲಿದ್ದು, ಕಂಬಳಕ್ಕೆಂದೆ ರಾಜಮಹಾರಾಜ ಹೆಸರಿನ ಕಂಬಳದ ಟ್ರಾಕ್ ರೆಡಿಮಾಡಲಾಗಿದೆ. ಈ ಟ್ರಾಕ್ 157 ಮೀ ಉದ್ದ, 8 ಮೀ ಅಗಲವನ್ನ ಒಳಗೊಂಡಿದ್ದು, ನಿನ್ನೆ (ನೆವೆಂಬರ್ 23) ಒಂದು ರೌಂಡ್ ಕೋಣಗಳ ಪ್ರಯೋಗಿಕ ಓಟ ಕೂಡ ನಡೆದಿದೆ. 

Written by - Yashaswini V | Last Updated : Nov 24, 2023, 11:16 AM IST
  • ಅರಮನೆ'ಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ಕೋಣಗಳು
  • ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ಐತಿಹಾಸಿಕ ಕಂಬಳ
  • ಕರಾವಳಿಯ ವಿವಿಧ ಭಾಗಗಳಿಂದ ಅರಮನೆ ಮೈದಾನಕ್ಕೆ ಬಂದ ಕೋಣಗಳು
ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಐತಿಹಾಸಿಕ ಕಂಬಳ title=

Kambala In Namma Bengaluru: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಕಂಬಳದ ಪರಿಮಳ ಪಸರಿಸಲು ಬೆಂಗಳೂರು ಕಂಬಳ ಸಮಿತಿ ಸಜ್ಜಾಗಿದೆ.  ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ನಡೆಯುತ್ತಿದ್ದು, ಕಂಬಳ ವೀಕ್ಷಣೆಗಾಗಿ ಲಕ್ಷಾಂತರ ಜನರು ಕಾತುರರಾಗಿ ಕಾಯುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಗಾರ್ಡನ್ ಸಿಟಿಯಲ್ಲಿ ಪಸರಿಸಲಿದೆ ಕಂಬಳದ ಪರಿಮಳ: 
ಕೆಸರಿನಿಂದ ರೆಡಿಯಾಗಿರುವ ಕಂಬಳದ ಟ್ರಾಕ್, ಕಂಬಳದ ಓಟಾಕ್ಕೆಂದೆ ಸಜ್ಜಾಗುತ್ತಿರುವ ಕೋಣಗಳು, ವಿಶಾಲವಾದ ಜಾಗದಲ್ಲಿ ರೆಡಿಯಾಗುತ್ತಿರುವ ಕಾರ್ಯಕ್ರಮ, ಜನರ ವೀಕ್ಷಣೆಗೆಂದೆ ಸಜ್ಜಾಗಿರುವ ಗ್ಯಾಲರಿ ಇವೆಲ್ಲವೂ ಕಂಡುಬಂದಿದ್ದು, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ... 

ಬೆಂಗಳೂರಿಗೆ ಕಂಬಳ ಕೋಣಗಳ ಎಂಟ್ರಿ: 
ಕಂಬಳಕ್ಕಾಗಿ ಸಿಲಿಕಾನ್ ಸಿಟಿಗೆ ಸುಮಾರು 200 ಜೋಡಿಯ ಕೋಣಗಳು ಎಂಟ್ರಿ ಕೊಟ್ಟಿದ್ದು, ಬಂದಂತಹ ಕೋಣಗಳು ಇರಲು ಸೂಕ್ತವಾದ ಜಾಗ, ಮೇವು, ಕುಡಿಯುವ ನೀರಿನ ವ್ಯವಸ್ಥೆಯನ್ನ ಸಹ ಮಾಡಲಾಗಿದೆ.‌ ಮಂಗಳೂರಿನಿಂದ ಬಂದು ಬೆಂಗಳೂರಿನ ಕಂಬಳ ಭಾಗವಹಿಸುತ್ತಿರುವ ಬಗ್ಗೆ ಕಂಬಳ ಕ್ರೀಡಾಪಟುಗಳು ಹಾಗೂ ಕೋಣಗಳ ಮಾಲೀಕರು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ- ಜಾತಿ ಜನಗಣತಿ ಬೇಡ ಎನ್ನುವವರಿಗೂ ಅದರಲ್ಲೇನಿದೆ ಎಂದು ತಿಳಿದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರೆಡಿಯಾಗಿದೆ ಕಂಬಳದ ಟ್ರ್ಯಾಕ್: 
ಇನ್ನು, ರಿಹರ್ಸಲ್ ನಲ್ಲಿ ನೀರಿನ ಮಟ್ಟ, ಮಣ್ಣಿನ ಗುಣಮಟ್ಟತೆಯನ್ನ ಪರಿಶೀಲಿಸಿದರು. ಸದ್ಯ  ಕಂಬಳದಲ್ಲಿ  200ಕ್ಕೂ ಹೆಚ್ಚು ಕೋಣಗಳು ಭಾಗಿಯಾಗಲಿದ್ದು, ಕಂಬಳಕ್ಕೆಂದೆ ರಾಜಮಹಾರಾಜ ಹೆಸರಿನ ಕಂಬಳದ ಟ್ರಾಕ್ ರೆಡಿಮಾಡಲಾಗಿದೆ. ಈ ಟ್ರಾಕ್ 157 ಮೀ ಉದ್ದ, 8 ಮೀ ಅಗಲವನ್ನ ಒಳಗೊಂಡಿದ್ದು, ನಿನ್ನೆ (ನೆವೆಂಬರ್ 23) ಒಂದು ರೌಂಡ್ ಕೋಣಗಳ ಪ್ರಯೋಗಿಕ ಓಟ ಕೂಡ ನಡೆದಿದೆ. ಕೋಣಗಳು ನೀರಿನ  ಟ್ರಾಕ್ ಗೆ ಇಳಿಯುತ್ತಿದ್ದಂತೆ, ಕೋಣಗಳ ಮೈಕಟ್ಟು ನಿಂತವರನ್ನ ಒಂದು ಕ್ಷಣ  ಬೇರಗುಮಾಡಿದ್ವು.. ಏರು ಧ್ವನಿಯಲ್ಲಿ ಕಂಬಳ ಕ್ರಿಡಾಪಟುಗಳು ಆರಂಭ ಮಾಡುತ್ತಿದ್ದಂತೆ ಕೋಣಗಳು ಒಂದೇ ನಿಮಿಷದಲ್ಲಿ ದಡಮುಟ್ಟಿದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. 

ಇಂದಿನಿಂದ ಮೂರು ಗಾರ್ಡನ್ ಸಿಟಿಯಲ್ಲಿ ಪಸರಿಸಲಿದೆ ಕಂಬಳದ ಪರಿಮಳ: 
ಈ ಕಂಬಳದ ಕಾರ್ಯಕ್ರಮ ಇಂದಿನಿಂದ ಮೂರುದಿನಗಳ‌ ಕಾಲ ನಡೆಯಲಿದ್ದು, ಮೊದಲ ದಿನ ಅಂದರೆ ನವೆಂಬರ್ 24 (ಶುಕ್ರವಾರ) 10 ಗಂಟೆಗೆ ತುಳು ಕೂಟದ ಸಭಾ ಕಾರ್ಯಕ್ರಮ ಉದ್ಘಾಟನೆಯಾಗಲಾಗಿದೆ. ಬೆಳಗ್ಗೆ 10.30 ಕ್ಕೆ ಐತಿಹಾಸಿಕ ಕಂಬಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಇಂದು ಕೇವಲ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾತ್ರ  ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ  ಸಿನಿಮಾ ನಟ -ನಟಿಯರು ಆಗಮಿಸಲಿಸಿದ್ದಾರೆ.‌ 

ಇದನ್ನೂ ಓದಿ- Photo Gallery : ಶಾಮನೂರು ಮೊಮ್ಮಗಳ ಜತೆ ಸಚಿವ ಎಂ ಬಿ ಪಾಟೀಲ ಪುತ್ರನ ವಿವಾಹ

ಲಭ್ಯವಿರುವ ಮಾಹಿತಿಗಳ ಪ್ರಕಾರ ಇಂದು ಕೇವಲ ಕೋಣಗಳ ರಿಹರ್ಸಲ್ ಮಾತ್ರ ನಡೆಯಲಿದ್ದು, ಶನಿವಾರ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯನವರಿಂದ ಸಂಜೆ 3:30 ಕ್ಕೆ ಉದ್ಘಾಟನೆ ಆದ ನಂತರ ಭಾನುವಾರವು ಕೂಡ ಈ ಕಂಬಳ ನಡೆಯಲಿದೆ. 

ಗೆದ್ದ ಕೋಣಗಳಿಗೆ ಸಿಗಲಿದೆ ಬಂಪರ್ ಬಹುಮಾನ: 
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿರುವ ಈ ಕಂಬಳದಲ್ಲಿ ಗೆಲುವು ಸಾಧಿಸುವ ಕೋಣಗಳಿಗೆ ಭರ್ಜರಿ ಬಹುಮಾನವನ್ನು ಕೂಡ ಘೋಷಿಸಲಾಗಿದೆ. ಬಹುಮಾನದ ವಿವರ ಈ ಕೆಳಕಂಡಂತಿದೆ: 
* ಪ್ರಥಮ ಬಹುಮಾನ  16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು
* ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ರೂ. ನಗದು
* ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ರೂ. ನಗದು ಸಿಗಲಿದೆ

ಕಂಬಳ ವೀಕ್ಷಣೆಗಾಗಿ ಬರುವವರಿಗಾಗಿ ಸೂಕ್ತ ವ್ಯವಸ್ಥೆ: 
ಅಲ್ಲದೆ, ದೊಡ್ಡ ಎಲ್ ಇ ಡಿ ಸ್ಕ್ರೀನ್ ಗಳನ್ನ ಕೂಡ ಅಳವಡಿಕೆ ಮಾಡಲಾಗಿದ್ದು, ಬರುವ ಜನರಿಗೆ ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.‌ ಇವೆಲ್ಲದರ ಜೊತೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಸೌಲಭ್ಯ ಲಭ್ಯವಾಗಲು ಅನುಕೂಲವಾಗುವಂತೆ ಅಂಬುಲೆನ್ಸ್ ವ್ಯವಸ್ಥೆಯನ್ನು ಸಹ‌ ಮಾಡಲಾಗಿದೆ. 

ಒಟ್ಟಾರೆಯಾಗಿ ಬೆಂಗಳೂರಿನ ಕಂಬಳದ ಮೂಲಕ ಇಡೀ ರಾಜ್ಯಕ್ಕೆ ಮಂಗಳೂರಿನ ಸಂಸ್ಕೃತಿಯನ್ನ ಪರಿಚಯಿಸಲು ಬೆಂಗಳೂರು ಕಂಬಳ ಸಮಿತಿ ಮುಂದಾಗಿದ್ದು, ಲಕ್ಷಾಂತರ ಜನರು ಕಂಬಳ ನೋಡಲು ಉತ್ಸುಕರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News