ಮಳೆಯಿಂದ ಅಪಾಯ ಎದುರಿಸುವ Red Zone Area ಪಟ್ಟಿ ತಯಾರಿಸಿದ ಬಿಬಿಎಂಪಿ! ಯಾವ್ಯಾವ ಪ್ರದೇಶವಿದೆ?

Red zone area list prepared by BBMP: ಇನ್ನು ರಾಜ್ಯಕ್ಕೆ‌ ಮುಂಗಾರು ಎಂಟ್ರಿ ಕೊಟ್ಟಿದ್ದರೂ ಸಹ ಪಾಲಿಕೆ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ವಿಫಲ ಆಗಿದೆ. ಬೆಂಗಳೂರು ನಗರ ಪೂರ್ವ ವಲಯದಲ್ಲಿ 5 ಏರಿಯಾಗಳಿಗೆ ಮಳೆಯಿಂದ ತೀವ್ರ ಹಾನಿಯಾಗಲಿದ್ದು, 15 ಏರಿಯಾಗಳನ್ನ ಮಧ್ಯಮ ಹಾನಿ ಪ್ರದೇಶ ಎಂದು ಗುರುತಿಸಲಾಗಿದೆ.

Written by - Bhavya Sunil Bangera | Edited by - Bhavishya Shetty | Last Updated : Jun 15, 2023, 08:44 AM IST
    • ಸಿಲಿಕಾನ್ ಸಿಟಿಯಲ್ಲಿ ಮಳೆಗಾಲಕ್ಕೆ ಪಾಲಿಕೆ ಅಲರ್ಟ್ ಆಗಿರೋದೆ ಸದ್ಯಕ್ಕೆ ಡೌಟ್ ಆಗಿದೆ.
    • ಪಾಲಿಕೆಯಿಂದ ಈ ಭಾರಿ 55 ಡೇಂಜರ್ ಏರಿಯಾಗಳನ್ನ ಗುರುತು ಮಾಡಲಾಗಿದೆ.
    • ಮಳೆ ಬಂದರೆ ಈ ಏರಿಯಾಗಳಿಗೆ ಜಲಕಂಟಕ ಫಿಕ್ಸ್ ಅನ್ನೊದನ್ನ ಸ್ವತಃ ಪಾಲಿಕೆನೇ ಲಿಸ್ಟ್ ಮಾಡಿದೆ.
ಮಳೆಯಿಂದ ಅಪಾಯ ಎದುರಿಸುವ Red Zone Area ಪಟ್ಟಿ ತಯಾರಿಸಿದ ಬಿಬಿಎಂಪಿ! ಯಾವ್ಯಾವ ಪ್ರದೇಶವಿದೆ? title=
bangalore rain

Red zone area list prepared by BBMP: ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ಜನ ಕಿರಿಕಿರಿ ಅನುಭವಿಸುವುದಲ್ಲದೆ, ಎದೆಯಲ್ಲಿ ಡವಡವ ಶುರುವಾಗುತ್ತೆ‌. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಳೆಯಿಂದ ಅಪಾಯ ಎದುರಿಸುವ ರೆಡ್ ಜೋನ್ ಏರಿಯಾಗಳ ಪಟ್ಟಿ ತಯಾರಿಸಿದೆ.

ಇದನ್ನೂ ಓದಿ: ಅಧಿಕಾರ ದುರ್ಬಳಿಕೆ : ಬಿಬಿಎಂಪಿ ಅಧಿಕಾರಿಗಳ ಜೊತೆ ಕಾಂಗ್ರೆಸ್ ನ ಸುರ್ಜೆವಾಲಾ ಮೀಟಿಂಗ್!

ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ನಗರದಲ್ಲಿ  ಹವಾಮಾನ ಇಲಾಖೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆಗಾಲಕ್ಕೆ ಪಾಲಿಕೆ ಅಲರ್ಟ್ ಆಗಿರೋದೆ ಸದ್ಯಕ್ಕೆ ಡೌಟ್ ಆಗಿದೆ. ಪಾಲಿಕೆಯಿಂದ ಈ ಭಾರಿ 55 ಡೇಂಜರ್ ಏರಿಯಾಗಳನ್ನ ಗುರುತು ಮಾಡಲಾಗಿದೆ. ಮಳೆ ಬಂದರೆ ಈ ಏರಿಯಾಗಳಿಗೆ ಜಲಕಂಟಕ ಫಿಕ್ಸ್ ಅನ್ನೊದನ್ನ ಸ್ವತಃ ಪಾಲಿಕೆನೇ ಲಿಸ್ಟ್ ಮಾಡಿದೆ.

ಇನ್ನು ರಾಜ್ಯಕ್ಕೆ‌ ಮುಂಗಾರು ಎಂಟ್ರಿ ಕೊಟ್ಟಿದ್ದರೂ ಸಹ ಪಾಲಿಕೆ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ವಿಫಲ ಆಗಿದೆ. ಬೆಂಗಳೂರು ನಗರ ಪೂರ್ವ ವಲಯದಲ್ಲಿ 5 ಏರಿಯಾಗಳಿಗೆ ಮಳೆಯಿಂದ ತೀವ್ರ ಹಾನಿಯಾಗಲಿದ್ದು, 15 ಏರಿಯಾಗಳನ್ನ ಮಧ್ಯಮ ಹಾನಿ ಪ್ರದೇಶ ಎಂದು ಗುರುತಿಸಲಾಗಿದೆ. ಇನ್ನೂ ಪಶ್ಚಿಮ ವಲಯದಲ್ಲಿ 5 ಏರಿಯಾಗಳಿಗೆ ತೀವ್ರ ಜಲಕಂಟಕ ಎದುರಾಗಲಿದ್ದು, 33 ಏರಿಯಾಗಳಿಗೆ ಮಾಡರೇಟ್ ಎಫೆಕ್ಟ್ ಆಗಲಿದೆ. ಬೆಂ. ದಕ್ಷಿಣ ವಲಯದ 6 ಏರಿಯಾಗಳು ಮಳೆಯಿಂದ ಮಧ್ಯಮ ಹಾನಿಗೆ ಒಳಾಗಾಗಲಿದೆ.

ಇನ್ನೂ ಮಹದೇವಪುರದ 11 ಏರಿಯಾಗಳಿಗೆ ಈ ಬಾರಿ ಪ್ರವಾಹ ಭೀತಿ ಇದ್ದು 47 ಏರಿಯಾಗಳು ಮಳೆಗೆ ಮಧ್ಯಮ ಪ್ರಮಾಣದ ಹಾನಿಗೆ ಒಳಗಾಗಲಿವೆ. ಇನ್ನೂ ಮುಂಗಾರಿನ ಮಳೆಯ ಹೊಡೆತಕ್ಕೆ ಬೊಮ್ಮನಹಳ್ಳಿ ಈ ಬಾರಿ ನಲುಗಲಿದ್ದು, ಬೊಮ್ಮನಹಳ್ಳಿ ವಲಯದ 17 ಏರಿಯಾಗಳು ಅತೀ ಹೆಚ್ಚಾಗಿ ಮಳೆಗೆ ಭಾದಿಸಲಿವೆ.

ಮಧ್ಯಮವಾಗಿ 11 ಏರಿಯಾಗಳಿಗೆ ಮಳೆ ಎಫೆಕ್ಟ್ ತಟ್ಟಲಿದೆ. ಯಲಹಂಕ, ಕೆ ವ್ಯಾಲಿ, ಆರ್ ಆರ್ ನಗರ ಹಾಗೂ ದಾಸರಹಳ್ಳಿ ಕೂಡ ಮಳೆ ಹಾನಿಯ ಹಿಟ್ ಲಿಸ್ಟ್ ನಲ್ಲಿ ಸೇರಿಕೊಂಡಿವೆ.

ಇದನ್ನೂ ಓದಿ: 2023 ವಿಧಾನಸಭೆ ಚುನಾವಣೆ: ಬಿಜೆಪಿ ಹೀನಾಯ ಸೋಲಿಗೆ ಯಾರೆಲ್ಲಾ ಬದಲಾವಣೆ?

ಪಾಲಿಕೆ ಗುರುತು‌ ಮಾಡಿರೋ ಮಳೆ ಅಪಾಯದ 198 ಸ್ಥಳಗಳಲ್ಲಿ 118 ಸ್ಥಳಗಳಲ್ಲಿ ಕಾರ್ಯಚರಣೆ ಮಾಡಿ ಮಳೆಯಿಂದ ಹಾನಿಯಾಗದಂತೆ ಎಚ್ಚರವಹಿಸಿಲಾಗಿದೆ. ಇನ್ನುಳಿದ 80 ಏರಿಯಾಗಳಲ್ಲಿ ಇನ್ನೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ಈ 80 ಪ್ರದೇಶಗಳಲ್ಲಿ 55 ಏರಿಯಾಗಳಿಗೆ ಮಳೆ ಗಂಡಾಂತರ ಕಾದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News