BDA: ಭೂಗಳ್ಳರಿಗೆ ಬಿಗ್ ಶಾಕ್..! ₹300 ಕೋಟಿ ಮೌಲ್ಯದ ಜಾಗ ವಶಕ್ಕೆ..!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ ) ನುಂಗಣ್ಣರ ಪಾಲಾಗಿದ್ದ ಸುಮಾರು ₹300 ಕೋಟಿ ಮೌಲ್ಯದ ಜಾಗವನ್ನು ಮರಳಿ ತನ್ನ ವಶಕ್ಕೆ ಪಡೆದಿದೆ.

Edited by - Yashaswini V | Last Updated : Jan 5, 2022, 10:28 AM IST
  • ಕಂಡವರ ಸ್ವತ್ತಿನ ಮೇಲೆ ಕಣ್ಣು ಹಾಕುವ ಕಿರಾತಕರು
  • ಸರ್ಕಾರದ ಜಾಗವನ್ನೂ ಬಿಡದ ಜನ
  • ನುಂಗಣ್ಣರ ಪಾಲಾಗಿದ್ದ ಸುಮಾರು ₹300 ಕೋಟಿ ಮೌಲ್ಯದ ಜಾಗವನ್ನು ಮರಳಿ ಪಡೆದ ಬಿಡಿಎ
BDA: ಭೂಗಳ್ಳರಿಗೆ ಬಿಗ್ ಶಾಕ್..! ₹300 ಕೋಟಿ ಮೌಲ್ಯದ ಜಾಗ ವಶಕ್ಕೆ..! title=
BDA has seized assets worth over Rs 300 crore in bengaluru

ಬೆಂಗಳೂರು: ಸಿಲಿಕಾನ್ ಸಿಟಿ, ಐಟಿ ತವರು ಅಂತೆಲ್ಲಾ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ನಮ್ಮ ಬೆಂಗಳೂರಲ್ಲಿ ಭೂಗಳ್ಳರ ಕಾಟ ವಿಪರೀತವಾಗಿದೆ‌. ಕಂಡವರ ಸ್ವತ್ತಿನ ಮೇಲೆ ಕಣ್ಣು ಹಾಕುವ ಕಿರಾತಕರು ಒಂದು ಕಡೆಯಾದ್ರೆ, ಮತ್ತೊಂದೆಡೆ ಸರ್ಕಾರದ ಜಾಗವನ್ನೂ ಹಲವರು ನುಂಗಿ ಹಾಕುತ್ತಿದ್ದಾರೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೀಗೆ ನುಂಗಣ್ಣರ ಪಾಲಾಗಿದ್ದ ಸುಮಾರು ₹300 ಕೋಟಿ ಮೌಲ್ಯದ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ಮರಳಿ ತನ್ನ ವಶಕ್ಕೆ ಪಡೆದಿದೆ.

ಇದನ್ನೂ ಓದಿ-  Karnataka Lockdown: ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್​ಡೌನ್..!

ಕಳೆದ 3 ದಿನಗಳಲ್ಲಿ 2 ಪ್ರಮುಖ ಬಡಾವಣೆಗಳಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಬಿಡಿಎ BDA) ವಶಪಡಿಸಿಕೊಂಡಿದೆ. ನಿನ್ನೆ ರಾಜಾಜಿನಗರ 6 ನೇ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ (Prasanna Theater at Rajajinagar) ಬಳಿ 2 ಎಕರೆ 20 ಗುಂಟೆ ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 5 ತಾತ್ಕಾಲಿಕ ಶೆಡ್ ಗಳು ಹಾಗೂ 1 ಗ್ಯಾರೇಜ್ ನ್ನು ತೆರವು ಮಾಡಲಾಗಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ಶೆಡ್, ಗ್ಯಾರೇಜ್ ತೆರವು ಮಾಡಿರಲಿಲ್ಲ. ಹೀಗಾಗಿ ಬಿಡಿಎ ಅಧಿಕಾರಿಗಳು ಜೆಸಿಬಿ ಬಳಸಿ ಜಾಗ ತೆರವುಗೊಳಿಸಿದ್ದಾರೆ. ಈ ಜಾಗದ ಅಂದಾಜು ಮೌಲ್ಯ 175 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಇದನ್ನೂ ಓದಿ- ರೈತರ ಆದಾಯ ಹೆಚ್ಚಳಕ್ಕೆ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ: ಸಿಎಂ ಬಸವರಾಜ್ ಬೊಮ್ಮಾಯಿ

ಇದೇ ರೀತಿ ವಿಜಯನಗರದ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೆ ನಂಬರ್ 329/3 ರಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್ ಬಂಕ್ ತೆರವುಗೊಳಿಸಲಾಗಿದ್ದು, ಖಾಲಿ ಜಾಗವೂ ಸೇರಿದಂತೆ ಒಟ್ಟು 1 ಎಕರೆ 9 ಗುಂಟೆ ವಶಪಡಿಸಿಕೊಳ್ಳಲಾಗಿದೆ. ಈ ಜಾಗದ ಅಂದಾಜು ಮೌಲ್ಯ 125 ಕೋಟಿ ರೂಪಾಯಿ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News