ಮುಖ್ಯಮಂತ್ರಿ ಮಧ್ಯಪ್ರವೇಶದಿಂದ ನೋಟಿಸ್ ಹಿಂಪಡೆದ ಬ್ಯಾಂಕ್

ಸಾಲ ಮರು ಪಾವತಿ ಮಾಡುವಂತೆ ಮುಂಡರಗಿ ತಾಲೂಕಿನ ಇಬ್ಬರಿಗೆ ನೋಟಿಸ್ ನೀಡಿದ್ದ ಬ್ಯಾಂಕ್.

Last Updated : Dec 26, 2018, 02:29 PM IST
ಮುಖ್ಯಮಂತ್ರಿ ಮಧ್ಯಪ್ರವೇಶದಿಂದ ನೋಟಿಸ್ ಹಿಂಪಡೆದ ಬ್ಯಾಂಕ್ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಧ್ಯಪ್ರವೇಶದಿಂದ ಸಾಲ ಮರು ಪಾವತಿ ಮಾಡುವಂತೆ ಮುಂಡರಗಿ ತಾಲೂಕಿನ ಇಬ್ಬರಿಗೆ ನೀಡಿದ್ದ   ನೋಟಿಸ್ ಅನ್ನು ಬ್ಯಾಂಕ್ ಹಿಂಪಡೆದಿದೆ.

ಋಣ ಸಮಾಧಾನ ಯೋಜನೆಯಡಿ ಬಾಕಿ ಉಳಿದ ಮೊತ್ತಕ್ಕೆ ಶೇ. 50 ರ ರಿಯಾಯಿತಿಯೊಂದಿಗೆ ಮರುಪಾವತಿ ಮಾಡಲು ಅವಕಾಶ ಕಲ್ಪಿಸಿದೆ.

ಮುಂಡರಗಿ ತಾಲ್ಲೂಕು ಹೆಸರೂರು ಗ್ರಾಮದ ಶರಣಪ್ಪ ವೀರಪ್ಪ ಚನ್ನಾಲಿ ಮತ್ತು ಚನ್ನಬಸವ್ವ ವೀರಪ್ಪ ಚನ್ನಾಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದಿದ್ದ ಸಾಲವು ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು. ಮುಖ್ಯಮಂತ್ರಿ ಗಳ ಮಧ್ಯಪ್ರವೇಶದಿಂದ ಬ್ಯಾಂಕ್ ನೀಡಿದ್ದ ನೋಟಿಸ್ ಹಿಂಪಡೆದಿದೆ.

Trending News