Bangalore: ʼಸ್ಮಶಾನದಲ್ಲೊಂದು ಉತ್ಸವʼ

Bangalore: ಬೆಂಗಳೂರಿನ ಹಲಸೂರಿನಲ್ಲಿ  ಬೃಹತ್‌ ದೊಡ್ಡದಾಗಿರುವ ಸ್ಮಶಾನವೊಂದರಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಜಾತ್ರೆ ನಡೆಸಲಾಗುತ್ತದೆ. ನಾನಾ ಕಾರಣಗಳಿಂದ ಸಾವನ್ನೊಪ್ಪಿ ಸಾಮಾಧಿ ಸೇರಿರುವವಿಗೆ ಪೂಜೆ ಸಲ್ಲಿಸಲಾಗುತ್ತದೆ

Written by - Zee Kannada News Desk | Last Updated : Feb 20, 2023, 05:39 PM IST
  • ಸಮಾಧಿಯಲ್ಲೊಂದು ಶಿವರಾತ್ರಿ ಸಂಭ್ರಮ
  • ಬೆಂಗಳೂರಿನ ಹಲಸೂರಿನಲ್ಲಿರುವ ಸಮಾಧಿ
  • ಸ್ಮಶಾನದಲ್ಲಿ ಕಾಳಿ ದೇವಾಲಯ
Bangalore: ʼಸ್ಮಶಾನದಲ್ಲೊಂದು ಉತ್ಸವʼ  title=

Bangalore: ಶಿವರಾತ್ರಿ ಹಬ್ಬವನ್ನು ಒಂದೊಂದು ಕಡೆ  ಒಂದೊಂದು ರೀತಿಯಾಗಿ ಆಚರಿಸಲಾಗುತ್ತದೆ. ಶಿವನ ದೇವಾಯಲಗಳಲ್ಲಿ ಎಂದಿಗಿಂತ ಅಂದು ಅದ್ದೂರಿಯಾಗಿ ಪೂಜೆ  ನೇರವೇರುವುದು  ಎಲ್ಲರಿಗೂ ಗೊತ್ತಿರುವ ವಿಷಯ. 

ದೇವಾಲಯವಲ್ಲದೇ ಸ್ಮಶಾನದಲ್ಲೂ ಶಿವರಾತ್ರಿ ಸಂಭ್ರಮವೊಂದು ರೂಪಿತವಾಗಿದೆ .ಸ್ಮಶಾನ ಎಂದರೆ ಅಂದಿನಿಂದ ಇಂದಿನವರೆಗೂ ಆ ಸ್ಥಳದ ಮೇಲೆ ಒಂದು ರೀತಿಯ ಭಯದ ಮನೋಭಾವ ಹೊಂದಿರುವವರೇ ಹೆಚ್ಚು.. ಸತ್ತು ಸಮಾಧಿ ಸೇರಿರುವವರು ಭೂತ ಪ್ರೇತಗಳಾಗಿ ಕಾಡ್ತಾರೆ ಅನ್ನೋ ಮೂಢ ನಂಬಿಕೆ ..ಮೂಢ ನಂಬಿಕೆ, ಭಯ ಸೃಷ್ಠಿಸುವ ಸ್ಥಳವೇ ಸ್ಮಶಾನ ಎನ್ನುವುದು ಹೆಚ್ಚಿನವರವ ಅಭಿಪ್ರಾಯ ...  ಸ್ಮಶಾನದಲ್ಲಿ ಉತ್ಸವ ಎಂದಾದರು ಕಂಡಿದ್ದೀರಾ...

ಇದನ್ನೂ ಓದಿ:Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ? 

ಶಿವರಾತ್ರಿ ಹಬ್ಬಕ್ಕೂ ಸ್ಮಶಾನಕ್ಕೂ ಏನು ಸಂಬಂಧ ಅಂಥ ಯೋಚಿಸುತ್ತಿರಬಹುದು..ಹೌದು ಆದಕ್ಕೂ ಕಾರಣ ಇಲ್ಲಿದೆ
ಬೆಂಗಳೂರಿನ ಹಲಸೂರಿನಲ್ಲಿ  ಬೃಹತ್‌  ಸ್ಮಶಾನವೊಂದರಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಜಾತ್ರೆ ನಡೆಸಲಾಗುತ್ತದೆ. ನಾನಾ ಕಾರಣಗಳಿಂದ ಸಾವನ್ನೊಪ್ಪಿ ಸಾಮಾಧಿ ಸೇರಿರುವವಿಗೆ ಪೂಜೆ ಸಲ್ಲಿಸಲಾಗುತ್ತದೆ ಆ ದಿನ   ಅಷ್ಟು ದೊಡ್ಡ ಸ್ಮಶಾನವು ಹೂಗಳಿಂದ, ಕುಟುಂಬಸ್ಥರು ತಯಾರು ಮಾಡಿ ತಂದ ವಿಧ ವಿಧ ತಿಂಡಿ ತಿನಿಸುಗಳಿಂದ ತುಂಬಿರುತ್ತದೆ. ಅದೇ ರುಧ್ರ ಭೂಮಿಯಲ್ಲಿ ಹಿಂದೂ ದೇವರಾದ ಕಾಳಿ ದೇವಸ್ಥಾನವು ಕೂಡ ಇದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ  ಆ ದೇವಾಲಯಕ್ಕೆ ಸಮಾಧಿ ಎಂದು ಲೆಕ್ಕಿಸದೇ ಭಕ್ತರು , ವ್ಯಾಪರಸ್ಥರಿಂದ ತುಂಬಿರುತ್ತದೆ. 

ಸ್ಮಶಾನದಲ್ಲಿ ಕಾಳಿ...
ಶಿವ ಮತ್ತು ಕಾಳಿಯ ನಡುವೆ ಒಂದು ನೃತ್ಯ ಸ್ಪರ್ಧೆ ನಡೆದುದನ್ನು ಒಂದು ದಕ್ಷಿಣ ಭಾರತದ ಪರಂಪರೆಯು ಹೇಳುತ್ತದೆ. ಶುಂಭ ಮತ್ತು ನಿಶುಂಭ ಎಂಬಿಬ್ಬರು ರಾಕ್ಷಸರನ್ನು ಸೋಲಿಸಿದ ಬಳಿಕ, ಕಾಳಿಯು ಕಾಡೊಂದರಲ್ಲಿ ನೆಲೆಯಾಗುತ್ತಾಳೆ. ಭೀಕರರಾದ ಸಂಗಾತಿಗಳೊಂದಿಗೆ ಅವಳು ಸುತ್ತಲಿನ ಪ್ರದೇಶವನ್ನು ಭಯಭೀತಗೊಳಿಸುತ್ತಾಳೆ. ಶಿವನ ಭಕ್ತರಲ್ಲಿ ಒಬ್ಬರು ಕಠಿಣ ತಪಸ್ಸನ್ನು ಆಚರಿಸುತ್ತಿದ್ದಾಗ ಅವರ ಏಕಾಗ್ರತೆಗೆ ಇದರಿಂದ ಅಡ್ಡಿಯಾಗುತ್ತದೆ. ಮತ್ತು ಅವರು ಈ ವಿನಾಶಕಾರಿಣಿಯಾದ ದೇವಿಯನ್ನು ಆ ಅರಣ್ಯದಿಂದ ದೂರಮಾಡುವಂತೆ ಶಿವನನ್ನು ಕೋರುತ್ತಾರೆ. ಶಿವನು ಅಲ್ಲಿಗೆ ಬಂದಾಗ ಕಾಳಿಯು ಆತನಿಗೆ ಬೆದರಿಕೆ ಒಡ್ಡುತ್ತಾಳೆ. ಆ ಪ್ರದೇಶವು ತನ್ನದೇ ಸ್ವಂತದ್ದು ಎಂದು ಹೇಳುತ್ತಾಳೆ. ಆಗ ಶಿವನು ಅವಳಿಗೆ ನೃತ್ಯ ಸ್ಪರ್ಧೆಗೆ ಆಹ್ವಾನಿಸುತ್ತಾನೆ ಮತ್ತು ಪರಿಶ್ರಮದ ತಾಂಡವ ನೃತ್ಯವನ್ನು ಮಾಡುವುದು ಅವಳಿಗೆ ಅಸಾಧ್ಯವಾಗಿ ಅವಳನ್ನು ಸೋಲಿಸುತ್ತಾನೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ, ಡಿ ರೂಪಾ ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ..!

 ಈ ಕಥೆಯಲ್ಲಿ ಕಾಳಿಯು ಸೋಲಿಸಲ್ಪಟ್ಟರೂ ಮತ್ತು ಉಪಟಳ ನೀಡುವ ಸ್ವಭಾವವನ್ನು ನಿಯಂತ್ರಿಸಿಕೊಳ್ಳುವ ಬಲವಂತಕ್ಕೆ ಒಳಗಾದರೂ ಇನ್ನೂ ಕೆಲವು ಪ್ರತಿಮೆಗಳು ಅಥವಾ ಇತರ ಪುರಾಣಗಳ ಕಥೆಯಾಗಿದೆ.“ದಕ್ಷಿಣಾಕಾಳಿಯ ಅತ್ಯಂತ ಪ್ರಸಿದ್ಧ ಭಂಗಿಯಲ್ಲಿ,  ಕಾಳಿಯು ಯುದ್ಧಭೂಮಿಯಲ್ಲಿ ತನ್ನ ಬಲಿಪಶುಗಳ ರಕ್ತವನ್ನು ಕುಡಿದು ವಿನಾಶಕಾರಿ ಉನ್ಮಾದದಿಂದ ನೃತ್ಯ ಮಾಡುತ್ತಾಳೆ ಎಂದು ಹೇಳುತ್ತಾರೆ. ಅವಳ ಕೋಪದಲ್ಲಿ ಅವಳು ಶಿವನ ದೇಹವನ್ನು ನೋಡಲು ವಿಫಲಳಾಗುತ್ತಾಳೆ, ಅವನು ಯುದ್ಧಭೂಮಿಯಲ್ಲಿ ಶವಗಳ ನಡುವೆ ಮಲಗಿ ಅವನ ಎದೆಯ ಮೇಲೆ ಹೆಜ್ಜೆ ಹಾಕುತ್ತಾನೆ. ಶಿವನು ತನ್ನ ಪಾದಗಳ ಕೆಳಗೆ ಮಲಗಿರುವುದನ್ನು ಅರಿತು ಅವಳ ಕೋಪವು ಶಾಂತವಾಗುತ್ತದೆ ಮತ್ತು ಅವಳು ತನ್ನ ಕೋಪವನ್ನು  ಮರೆಯುತ್ತಾಳೆ ಎಂಬುವುದಾಗಿದೆ..

ಇದನ್ನೂ ಓದಿ: Basangouda Patil Yatnal : 'ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರ್ರಿ'

ಅಂದರೆ ಸ್ಮಶಾನದಲ್ಲಿ ಪುರಾಣದ ಪ್ರಕಾರ ರಾಕ್ಷಸರನ್ನು ಕೊಂದು ಭಕ್ತರನ್ನು ಕಾಯಲು ಕಾಳಿ ದೇವಿ ಇರುತ್ತಾಳೆ ನಂಬಿಕೆ ..ಆ ನಂಬಿಕೆಯಂತೆ ಅಷ್ಟು ದೊಡ್ಡಸಮಾಧಿಗೆ ಮರಣ ಹೊಂದಿದವರ ಸಮಾಧಿ ಮುಂದೆ ಕುಟುಂಬಸ್ಥರು ಯಾವುದೇ ಭಯವಿಲ್ಲದೆ ನಿಶ್ಚಿಂತೆಯಿಂದ  ಪೂಜೆ ಸಲ್ಲಿಸಲು ಬಂದು  ಹೋಗಬಹುದೆಂದು ಸ್ಮಶಾನದ ಮಧ್ಯೆ ದೇವಾಲಯ ಇರುವುದು ಮೂಲಗಳಿಂದ ತಿಳಿದು ಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News