ಡಿಪ್ಲೊಮಾ ಸೆಮಿಸ್ಟರ್ ನ ಎಲ್ಲಾ ಥಿಯರಿ ಪರೀಕ್ಷೆ ಮುಂದೂಡಿಕೆ

ದಿನಾಂಕ 28-09-2020ರಂದು ನಡೆಯಬೇಕಾಗಿದ್ದ ಡಿಪ್ಲೊಮಾ ಸೆಮಿಸ್ಟರ್ ನ ಎಲ್ಲಾ Theory ಪರೀಕ್ಷೆಗಳನ್ನು ಮುಂದೂಡಲಾಗಿದೆ ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ ತಿಳಿಸಿದೆ.

Last Updated : Sep 26, 2020, 03:43 PM IST
ಡಿಪ್ಲೊಮಾ ಸೆಮಿಸ್ಟರ್ ನ ಎಲ್ಲಾ ಥಿಯರಿ ಪರೀಕ್ಷೆ ಮುಂದೂಡಿಕೆ  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ದಿನಾಂಕ 28-09-2020ರಂದು ನಡೆಯಬೇಕಾಗಿದ್ದ ಡಿಪ್ಲೊಮಾ ಸೆಮಿಸ್ಟರ್ ನ ಎಲ್ಲಾ Theory ಪರೀಕ್ಷೆಗಳನ್ನು ಮುಂದೂಡಲಾಗಿದೆ ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ ತಿಳಿಸಿದೆ.

ಅಂದು ಕರ್ನಾಟಕ್ ಬಂದ್ ಇರುವ ಹಿನ್ನಲೆಯಲ್ಲಿ ಎಲ್ಲಾ ಥಿಯರಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 30-09-2020 ರ ಬುಧುವಾರಕ್ಕೆ ಮುಂದೂಡಲಾಗಿದೆ. ಪರೀಕ್ಷಾ ವಿಷಯದಲ್ಲಿ ಹಾಗೂ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸೋಮವಾರದಂದು ರೈತ,ಕಾರ್ಮಿಕ ಹಾಗೂ ಇತರ ಸಂಘಟನೆಗಳು ಸೋಮುವಾರದಂದು ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬಂದ್ ಹಮ್ಮಿಕೊಂಡಿದ್ದಾರೆ.

Trending News