"ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ"

 ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Written by - Zee Kannada News Desk | Last Updated : Feb 2, 2024, 03:41 PM IST
  • ದೇಶದ ಸಾರ್ವಜನಿಕರ ಉದ್ದಿಮೆಗಳಲ್ಲಿ 14-24% ಮೀಸಲಾತಿ ಸೈನಿಕರಿಗೆ ಇದೆ.
  • ಆದರೆ ಇಂದು ಕೇವಲ 1.5% ಮಾತ್ರ ಗ್ರೂಪ್ ಸಿ ಹುದ್ದೆಗಳು ನೇಮಕವಾಗಿವೆ. ಗ್ರೂಪ್ ಡಿ ನಲ್ಲಿ 0.3% ಮತ್ರ ನೇಮಕವಾಗಿದೆ.
  • ರೈಲ್ವೇಯಲ್ಲೂ ಮೀಸಲಾತಿ ಇದೆ ಆಧರೂ ಅಲ್ಲಿ ನೇಮಕಾತಿ ಇಲ್ಲವಾಗಿದೆ. ಮುಖ್ಯ ಸೈನಿಕರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ.
"ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ" title=

ಬೆಂಗಳೂರು: ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಾಜಿ ಸೈನಿಕರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:

ಅಗ್ನಿಪತ್ ಯೋಜನೆ 15 ಜೂನ್, 2022ರಂದು ಜಾರಿಗೆ ತರಲಾಯಿತು. ಸೆಪ್ಟೆಂಬರ್ 2022ರಿಂದ ಅನುಷ್ಠಾನಗೊಳಿಸಲಾಯಿತು. ಈ ಯೋಜನೆಯಲ್ಲಿ ಒಬ್ಬ ಯೋಧ ಭರ್ತಿಯಾದ ನಂತರ 4 ವರ್ಷ ಅಗ್ನಿವೀರ್ ಸ್ಥಾನದಲ್ಲಿ ಸೇವೆ ಸಲ್ಲಿಸಬಹುದು. ಇವರ ವಯಸ್ಸು 17ರಿಂದ 21 ವರ್ಷ. ಇವರಿಗೆ 6 ತಿಂಗಳು ತರಬೇತಿ ನೀಡಿ, 1 ವರ್ಷ ರಜೆ ನೀಡಿ, 2 ವರ್ಷ ನಿಯೋಜಿತ ಸೇವೆಯಲ್ಲಿ ನಿರತರಾಗಬಹುದು.

ಮೊದಲ ವರ್ಷ 46 ಸಾವಿರ ಮಂದಿ ಭರ್ತಿಯಾಗಲು ಅವಕಾಶ. ನಂತರ ಕ್ರಮೇಣ ಹೆಚ್ಚಳ ಮಾಡಿ 75 ಸಾವಿರದಿಂದ 1 ಲಕ್ಷ ಮಂದಿ ನೇಮಕ. ಈಗ ಕೇಂದ್ರ ಸರ್ಕಾರ ಕೆಲವು ನಿಯಮ ತಂದಿದ್ದು, ಕೇವಲ 25% ಯೋಧರನ್ನು ಸೇವೆಯಲ್ಲಿ ಮುಂದುವರಿಸಿ, 75% ಯೋಧರನ್ನು ಸೇವೆಯಿಂದ ವಿಮುಖಗೊಳಿಸಲಾಗುವುದು.  ಸೇವೆಯಿಂದ ಹೊರಬಂದು ಯುವಕರಿಗೆ ಯಾವ ರೀತಿಯ ಉದ್ಯೋಗ ಕಲ್ಪಿಸುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದು ಕೇವಲ ಆಶ್ವಾಸನೆ ಇದೆ. 
ಅಗ್ನಿಪತ್ ಯೋಜನೆ ಜಾರಿ ತರಲು ಕಾರಣ ಎಂದರೆ, ಕೇಂದ್ರದ ಪ್ರಕಾರ ನಮ್ಮ ಸೇನೆಯಲ್ಲಿ ಸರಾಸರಿ ವಯಸ್ಸಿನ ಪ್ರಮಾಣ ಕಡಿಮೆ ಮಾಡುವುದು. ಸದ್ಯ ನಮ್ಮ ಸೇನೆಯಲ್ಲಿ 32 ವರ್ಷ ಸರಾಸರಿ ವಯಸ್ಸಾಗಿದೆ. ಇದುನ್ನು 26 ವರ್ಷಕ್ಕೆ ಮಾಡಬೇಕು. ಆಗ ನಮ್ಮ ಸೇನೆ ಯುವಪಡೆಯಾಗಿರುತ್ತದೆ. ಇನ್ನು ಪಿಂಚಣಿ ಬಿಲ್ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಬೇಕು. ಈ ಪಿಂಚಣಿ ಮಸೂದೆಯಲ್ಲಿ ಏನಿದೆ ಎಂದರೆ ಬಜೆಟ್ ನಲ್ಲಿ 32% ಹಾಲಿ ಸೈನಿಕರ ವೇತನಕ್ಕೆ, 26% ಪಿಂಚಣಿಯಾಗಿ ಮಾಜಿ ಸೈನಿಕರಿಗೆ ಸೇರುತ್ತದೆ. ಉಳಿದ ಹಣ ಬಂಡವಾಳ ಹೂಡಿಕೆ ಹಣವಾಗಿದೆ.

ಇಲ್ಲಿ ನಮ್ಮ ಮುಂದೆ 2 ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ದೇಶದ ಸೇನೆಯ ಸರಾಸರಿ ವಯಸ್ಸು 32, ಅಮೆರಿಕದ ಸೇನೆಯ ಸರಾಸರಿ ವಯಸ್ಸು 28.ಚೀನಾದ ಸೇನೆ ಮತ್ತು ಬ್ರಿಟನ್ ಸೇನೆಯದ್ದು 26 ವರ್ಷ.  1948, 65, 71 ಹಾಗೂ ಕಾರ್ಗಿಲ್ ಯುದ್ಧ ಶ್ರೀಲಂಕಾದಲ್ಲಿ ಶಾಂತಿ ಕಾಪಾಡುವ ಆಪರೇಷನ್ ಮಾಡಿದ್ದೇವೆ. ಎಲ್ಲ ಯುದ್ಧಲ್ಲೂ ಯಶಸ್ಸು ಕಂಡಿದ್ದೇವೆ. ನಮ್ಮ ಸೈನಿಕರ ಧೈರ್ಯ, ಶೌರ್ಯ, ಉತ್ಸಾಹದ ಫಲ. ಇಂತಹ ಪರಿಸ್ಥಿತಿಯಲ್ಲಿ ಸೇನೆ ಸರಾಸರಿ ವಯಸ್ಸು ಇಳಿಸುವ ಅಗತ್ಯವೇನು?

ಮಾಜಿ ಸೈನಿಕರಿಗೆ ಹೋಗುತ್ತಿರುವ ಪಿಂಚಣಿ ಲಾಭ ಪಡೆಯುತ್ತಿರುವವರು ನಮ್ಮ ಸೈನಿಕರು ಹಾಗೂ ಅವರ ಕುಟುಂಬದವರು. ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಮಾಡಿ ಪಿಂಚಣಿ ಬಿಲ್ ಒತ್ತಡ ಕಡಿಮೆ ಮಾಡಬಹುದು. ಆದರೆ ಇಲ್ಲಿ ಕೇಂದ್ರ ಸರ್ಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ.ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥರಾದ ನರವಣೆ ಅವರು 4 ಸ್ಟಾರ್ ಆಫ್ ಡೆಸ್ಟಿನಿ ಎಂಬ ಪುಸ್ತಕ ಬಿಡುಗಡೆಗೆ ಮುಂದಾಗಿದ್ದು, ಅದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಕಾರಣ ಆ ಪುಸ್ತಕದಲ್ಲಿ ದೇಶದ ಎಲ್ಲಾ ಗಡಿ ಸಮಸ್ಯೆಗಳ ಮಾಹಿತಿ ಇದೆ. ಚೀನಾ ಗಡಿ ಸಮಸ್ಯೆ, ಪಾಕಿಸ್ತಾನ, ಅಗ್ನಿಪತ್ ಯೋಜನೆ ವಿಚಾರವಿದೆ. ಈ ಯೋಜನೆ ಕೇವಲ ಉದ್ಯೋಗ ಸೃಷ್ಟಿಗೆ ತಂದಿರುವ ಯೋಜನೆ. ಈ ಯೋಜನೆ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಯಾಗಿಲ್ಲ. ಡಿಫಎನ್ಸ್ ಸ್ಟಾಂಡಿಗ್ ಕಮಿಟಿ ವಿಶ್ವಾಸಕ್ಕೆ ಪಡೆದಿಲ್ಲ. ಸೇನಾ ಪಡೆಗಳ ಅಭಿಪ್ರಾಯ ಪಡೆದಿಲ್ಲ. ಏಕಾಏಕಿ ಈ ಯೋಜನೆ ಜಾರಿಗೆ ತಂದಿದ್ದಾರೆ.

ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ. ಚೀನಾ ಸೇನೆಯಲ್ಲಿ 20 ಲಕ್ಷ ಸೈನಿಕರಿದ್ದಾರೆ. ಇದರಲ್ಲಿ 5 ಲಕ್ಶ ಬಲವಂತವಾಗಿ ಸೇರ್ಪಡೆ ಮಾಡಿಕೊಂಡಿರುವ ಸೈನಿಕರು. ಇತ್ತೀಚೆಗೆ ಡೋಕ್ಲಾಮ್ ನಲ್ಲಿ ನಮ್ಮ ಸೈನಿಕರು ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಅಲ್ಲಿ ಬಲವಂತವಾಗಿ ಸೇರಿಸಲಾಗಿದ್ದ ಚೀನಾ ಸೈನಿಕರ ನಿಯೋಜನೆಯಾಗಿತ್ತು. ಅವರು ಪೂರ್ಣ ಪ್ರಮಾಣದ ತರಬೇತಿ ಪಡೆದಿರುವುದಿಲ್ಲ. ನಮ್ಮ ಸೈನಿಕರು ಸುದೀರ್ಘ 7 ವರ್ಷಗಳ ಕಠಿಣ ತರಬೇತಿ ಪಡೆದಿರುತ್ತಾರೆ. ಈಗ ಅಗ್ನಿಪತ್ ಯೋಜನೆಯಲ್ಲಿ 6 ತಿಂಗಳ ತರಬೇತಿ ಪಡೆದು ಏನು ಮಾಡುತ್ತಾರೆ? ರೆಜಿಮೆಂಟ್ ವ್ಯವಸ್ಥೆಗಳನ್ನು ಕಿತ್ತುಹಾಕಲಾಗುತ್ತಿದೆ.

ಉಕ್ರೇನ್ ರಷ್ಯಾ ಯುದ್ಧದಲ್ಲಿ ನೋಡಿದರೆ ರಷ್ಯಾ ಉಕ್ರೇನ್ ಗಿಂತ 10 ಪಟ್ಟು ದೊಡ್ಡ ದೇಶ. 10 ದಿನಗಳಲ್ಲಿ ಉಕ್ರೇನ್ ಮುಗಿಸುತ್ತೇವೆ ಎಂದ ರಷ್ಯಾ ಈಗಲೂ ಹೋರಾಟ ಮಾಡುತ್ತಿದೆ. ಎರಡೂ ದೇಶಗಳಲ್ಲಿ ಸೈನಿಕರ ಅಭಾವ ಬಂದಿದೆ. ಹೀಗಾಗಿ ಅವರು ಖಾಸಗಿ ಗುತ್ತಿಗೆ ಸೇನೆಯನ್ನು ಬಳಸುತ್ತಿದ್ದಾರೆ. ಖಾಸಗಿ ಗುತ್ತಿಗೆ ಸೇನೆಯವರು ಮಾಜಿ ಸೈನಿಕರನ್ನು ನೇಮಕ ಮಾಡಿಕೊಂಡು ಅವರನ್ನು ಯುದ್ಧಕ್ಕೆ ಕಳುಹಿಸುತ್ತಿದ್ದಾರೆ. 8-10 ಖಾಸಗಿ ಗುತ್ತಿಗೆ ಸೇನೆಗಳಿವೆ. ಇಂತಹ 50 ಸಾವಿರ ಸೈನಿಕರನ್ನು ಯುದ್ಧಕ್ಕೆ ಕಳುಹಿಸಲಾಗಿದೆ. ಅವರಿಗೆ ಪ್ರತಿ ನಿತ್ಯಕ್ಕೆ 1 ಸಾವಿರ ಡಾಲರ್ ದರ ನೀಡಲಾಗಿದೆ. ಇಂತಹ ಪರಿಸ್ಥಿತಿ ಪ್ರಪಂಚದಲ್ಲಿ ನಡೆಯುತ್ತಿದೆ. ಅಗ್ನಿಪತ್ ಯೋಜನೆಯಲ್ಲಿ 6 ತಿಂಗಳು ತರಬೇತಿ ಪಡೆದ ಸೈನಿಕರು ದೇಶವನ್ನು ರಕ್ಷಣೆ ಮಾಡಲು ಸಾಧ್ಯವೇ?

ಸೇನೆಯಲ್ಲಿ ಪ್ರತಿಯೊಬ್ಬರಿಗೂ ರ್ಯಾಂಕ್ ಇರುತ್ತದೆ. ಅದನ್ನು ರಾಷ್ಟ್ರಪತಿಗಳು ನೀಡುತ್ತಾರೆ. ನಾವು ಸತ್ತರೂ ನಮ್ಮ ರ್ಯಾಂಕ್ ಇರುತ್ತದೆ. ಆದರೆ ಅಗ್ನಿವೀರ್ ಅವರಿಗೆ ಅದರ ಹೊರತಾಗಿ ಬೇರೆ ರ್ಯಾಂಕ್ ಇರುವುದಿಲ್ಲ. 4 ವರ್ಷ ನಂತರ ಹೊರಬರುವಾಗ ಈ ರ್ಯಾಂಕ್ ಅವರಿಗೆ ಇರುವುದಿಲ್ಲ. ಅವರು ಸಾಮಾನ್ಯರಾಗಿರುತ್ತಾರೆ.

ದೇಶದ ಸಾರ್ವಜನಿಕರ ಉದ್ದಿಮೆಗಳಲ್ಲಿ 14-24% ಮೀಸಲಾತಿ ಸೈನಿಕರಿಗೆ ಇದೆ. ಆದರೆ ಇಂದು ಕೇವಲ 1.5% ಮಾತ್ರ ಗ್ರೂಪ್ ಸಿ ಹುದ್ದೆಗಳು ನೇಮಕವಾಗಿವೆ. ಗ್ರೂಪ್ ಡಿ ನಲ್ಲಿ 0.3% ಮತ್ರ ನೇಮಕವಾಗಿದೆ.  ರೈಲ್ವೇಯಲ್ಲೂ ಮೀಸಲಾತಿ ಇದೆ ಆಧರೂ ಅಲ್ಲಿ ನೇಮಕಾತಿ ಇಲ್ಲವಾಗಿದೆ. ಮುಖ್ಯ ಸೈನಿಕರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಇನ್ನು ಅಗ್ನಿವೀರ್ ಗಳಿಗೆ ಹೇಗೆ ಕೆಲಸ ನೀಡುತ್ತಾರೆ? ಪ್ರತಿ ವರ್ಷ 2 ಕೋಟಿ ಉದ್ಯೋಗ ಎಲ್ಲಿ ಎಂದು ನಾವು ಪ್ರಭು ಶ್ರೀರಾಮನನ್ನು ಕೇಳಬೇಕಾಗುತ್ತದೆ. ಕೆಲಸ ಎಲ್ಲಿ ಎಂದು ದೇಶ ಕೇಳುತ್ತಿದೆ. ಒಂದು ಶ್ರೇಣಿ ಒಂದು ಪಿಂಚಣಿ ಕೂಡ ಸರಿಯಾಗಿ ನೀಡಿಲ್ಲ. ಮೋದಿ ಸರ್ಕಾರ ಇದರ ವ್ಯಾಖ್ಯಾನವನ್ನೇ ಬದಲಿಸಿದ್ದಾರೆ. ಈ ವಿಚಾರವಾಗಿ ಜಂತರ್ ಮಂತರ್ ನಲ್ಲಿ ಈಗಲೂ ಮಾಜಿ ಸೈನಿಕರ ಹೋರಾಟ ನಡೆಯುತ್ತಿದೆ. ಮೋದಿ ಅವರು ಪ್ರತಿ ದೀಪಾವಳಿಗೆ ಗಡಿಗೆ ಹೋಗಿ ಜಿಲೇಬಿ ತಿಂದು ಬರುತ್ತಾರೆ. ದು ಕೇವಲ ಫೋಟೋಶೂಟ್ ಮಾತ್ರ.

ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಾಗ ನಮ್ಮ ಹುತಾತ್ಮ ಸೈನಿಕನ ಪಾರ್ಥೀವ ಶರೀರ ಬರುತ್ತದೆ. ಮುಖ್ಯಮಂತ್ರಿಗಳು ಹೋಗಿ ಅಂತಿಮ ನಮನ ಸಲ್ಲಿಸುತ್ತಾರೆ. ಆದರೆ ಪ್ರಧಾನಮಂತ್ರಿಗಳ ಬಳಿ ಸಮಯ ಇರಲಿಲ್ಲ. ಕಾರಣ ಅಲ್ಲಿ ಫೋಟೋಶೂಟ್ ಗೆ ಅವಕಾಶ ಇರಲಿಲ್ಲ. ಬಿಜೆಪಿಗೆ ಸೈನಿಕರು, ಮಾಜಿ ಸೈನಿಕರು ಲೆಕ್ಕಕ್ಕಿಲ್ಲ.

ಮಾಧ್ಯಮಗೋಷ್ಠಿಯಲ್ಲಿ Colonel ಮಲ್ಲಿಕಾರ್ಜುನ್, ಕೆಪಿಸಿಸಿ ಮಾಜಿ ಸೈನಿಕರ ವಿಭಾಗದ ಮುಖ್ಯಸ್ಥರಾದ Colonel ಕೆ.ಸಿ ಜಾರ್ಜ್, Colonel ಶಾ, Captain ಸುಂದರ್ ರಾಜನ್, ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News