ಕ್ರಿಸ್ಮಸ್ ಸಂಭ್ರಮದಲ್ಲಿ ಚರ್ಚ್‌ಗೆ ತೆರಳುತ್ತಿದ್ದ ಯುವಕ ಮಸಣಕ್ಕೆ..! 

 

Written by - VISHWANATH HARIHARA | Edited by - Manjunath N | Last Updated : Dec 25, 2022, 03:36 PM IST
  • ಅಲೆಕ್ಸ್ (25) ಮೃತಪಟ್ಟಿರುವ ಯುವಕ, ಆತನ ಸ್ನೇಹಿತ ಸತೀಶ್ ಎಂಬಾತನ ಕಾಲಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
  • ಬೆಳಗಿನ ಜಾವ 3.30 ರ ಸುಮಾರಿಗೆ ದುರ್ಘಟನೆ ನಡೆದಿದ್ದು,
ಕ್ರಿಸ್ಮಸ್ ಸಂಭ್ರಮದಲ್ಲಿ ಚರ್ಚ್‌ಗೆ ತೆರಳುತ್ತಿದ್ದ ಯುವಕ ಮಸಣಕ್ಕೆ..!  title=

ಬೆಂಗಳೂರು : ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಸ್ನೇಹಿತನೊಂದಿಗೆ ಚರ್ಚ್‌ಗೆ ಪ್ರಾರ್ಥನೆಗೆಂದು ತೆರಳುತ್ತಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ವಿಧಾನಸೌಧ ಸಮೀಪ‌ ಗೋಪಾಲಗೌಡ ಜಂಕ್ಷನ್ ನಲ್ಲಿ ನಡೆದಿದೆ.

ಇದನ್ನೂ ಓದಿ: ಬರಿ ಮಹಿಳೆಯರೇ ಎಳೆಯುವ ರಥೋತ್ಸವದ ಬಗ್ಗೆ ಕೇಳಿದ್ದಿರಾ?

ಅಲೆಕ್ಸ್ (25) ಮೃತಪಟ್ಟಿರುವ ಯುವಕ, ಆತನ ಸ್ನೇಹಿತ ಸತೀಶ್ ಎಂಬಾತನ ಕಾಲಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಳಗಿನ ಜಾವ 3.30  ರ ಸುಮಾರಿಗೆ ದುರ್ಘಟನೆ ನಡೆದಿದ್ದು, ಕ್ರಿಸ್ಮಸ್ ಸಡಗರದಲ್ಲಿದ್ದ ಅಲೆಕ್ಸ್ ತನ್ನ ಸ್ನೇಹಿತನ ಜೊತೆ ರಾಜಾಜಿನನಗರದಿಂದ ಶಿವಾಜಿನಗರದ ಸೆಂಟ್ ಪ್ಯಾಟ್ರಿಕ್ ಚರ್ಚ್‌ಗೆ ಪ್ರಾರ್ಥನೆಗೆ ತೆರಳುತ್ತಿದ್ದ.ವಿಧಾನಸೌಧ ಮಾರ್ಗದಲ್ಲಿ ತೆರಳುತ್ತಿದ್ದಾಗ ಪುಟ್ ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಅಲೆಕ್ಸ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಕರಡಿ ದಾಳಿಗೆ ದನಗಾಹಿ ಬಲಿ, ವ್ಯಕ್ತಿ ಶವದ ಜೊತೆಗಿನ ಕರಡಿ ಚಿತ್ರ ಸೆರೆ

ಅತಿ ವೇಗ ಮತ್ತು ಅಜಾಗರೂಕತೆ ಚಾಲನೆಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲೆಕ್ಸ್‌ ಬೈಕ್‌ ಚಲಾಯಿಸುವಾಗ ಹೆಲ್ಮೆಟ್‌ ಧರಿಸದಿರುವುದು ಅವಘಡಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News