ಬೆಂಗಳೂರು: ಅಕ್ಟೋಬರ್‌ನಲ್ಲಿ ಇಂಡೋನೇಷಿಯಾದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ 9 ಪದಕ ಪಡೆದ ಏಳು ವಿಕಲಚೇತನ ಕ್ರೀಡಾಪಟುಗಳಿಗೆ ಉಪಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಅವರು ಗೃಹಕಚೇರಿಯಲ್ಲಿ ಸನ್ಮಾನಿಸಿದರು.
ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನ ಗಳಿಸಿದ ರಕ್ಷಿತಾ ಆರ್, ಬೆಳ್ಳಿ ಹಾಗೂ ಕಂಚು ಪದಕ ವಿಜೇತೆ ವಿ. ರಾಧ ಜಾವಲಿನ್ ಥ್ರೋ ವಿಭಾಗದಲ್ಲಿ ಕಂಚು ಪಡೆದ ಎನ್.ಎಸ್. ರಮ್ಯಾ, ಪ್ಯಾರ ಬ್ಯಾಡ್ಮಿಂಟನ್‌ನಲ್ಲಿ ಕಂಚು ವಿಜೇತ ಆನಂದ ಕುಮಾರ್, ಚೆಸ್‌ನಲ್ಲಿ ಚಿನ್ನದ ವಿಜೇತ ಕಿಶನ್ ಗಂಗೋಲಿ, ಪ್ಯಾರಾ ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ವಿಜೇತ ಫರ್ಮಾನ್ ಬಾಷಾ ಹಾಗೂ ಶಕಿನಾ ಕತುನ್ ಅವರಿಗೆ ಪರಮೇಶ್ವರ್ ಅಭಿನಂದಿಸಿದರು.
ತಮ್ಮಂಥವರಿಗಾಗಿಯೇ ಪ್ರತ್ಯೇಕ ಸ್ಟೇಡಿಯಂ ನಿರ್ಮಿಸಿಕೊಡುವ ಬೇಡಿಕೆಯನ್ನು ಇವರು ಮುಂದಿಟ್ಟಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರ ಕ್ರೀಡೆಗೆ ಸದಾ ಪ್ರೋತ್ಸಾಹಿಸುತ್ತದೆ. ಮುಂದಿನ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸುವುದಾಗಿ ಪರಮೇಶ್ವರ್ ಭರವಸೆ ನೀಡಿದರು.