ಇದೇ ಫಸ್ಟ್ ಟೈಮ್ ರಾಜ್ಯರಾಜಧಾನಿಗೆ ‘8 ಸಚಿವ ಸ್ಥಾನ’..!?

ಸಿಎಂ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಮುನಿರತ್ನ ಸೇರ್ಪಡೆ..?

Last Updated : Nov 12, 2020, 01:15 PM IST
  • ಸಿಎಂ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಮುನಿರತ್ನ ಸೇರ್ಪಡೆ..?
  • ರಾಜ್ಯ ರಾಜಧಾನಿಯಿಂದ 8 ಮಂದಿ ಮಂತ್ರಿಗಳು ಸ್ಥಾನ..?
  • ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಸಾಧ್ಯತೆ
ಇದೇ ಫಸ್ಟ್ ಟೈಮ್ ರಾಜ್ಯರಾಜಧಾನಿಗೆ ‘8 ಸಚಿವ ಸ್ಥಾನ’..!? title=

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೆಚ್ಚು ಪ್ರಭಾವ ಬೀರುತ್ತಿರುವ ಸಿಲಿಕಾನ್ ಸಿಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೂಪರ್ ಪವರ್ ಆಗಲಿದೆ. ನೀಡಿದ ಭರವಸೆಯಂತೆ ಸಿಎಂ ಬಿ.ಎಸ್. ಯಡಿಯೂರಪ್ಪ(B.S.Yediyurappa) ಅವರು ಆರ್ ಆರ್(RR) ನಗರದಿಂದ ಗೆದ್ದಿರುವ ಮುನಿರತ್ನ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದೇ ಆದ್ರೆ, ಇದೇ ಮೊದಲ ರಾಜ್ಯ ಸಚಿವ ಸಂಪುಟದಲ್ಲಿ ರಾಜ್ಯ ರಾಜಧಾನಿಯಿಂದ 8 ಮಂದಿ ಮಂತ್ರಿಗಳು ಸ್ಥಾನ ಸಿಕ್ಕಂತೆ ಆಗುತ್ತದೆ.

ಹಬ್ಬದ ಸಂಭ್ರಮಕ್ಕೆ ಗ್ರಾಹಕರಿಗೆ ಶಾಕ್! ಈರುಳ್ಳಿ, ಟೊಮೇಟೋಗೂ ತಟ್ಟಿದ ಬೆಲೆ ಏರಿಕೆ ಬಿಸಿ

28 ಜನ ಬಿಜೆಪಿ ಶಾಸಕರು ಪೈಕಿ ಬೆಂಗಳೂರು ನಗರ ವೊಂದರಲ್ಲಿಯೇ 15 ಜನ ಶಾಸಕರಿದ್ದಾರೆ. 2008ರಲ್ಲಿ 17 ಮಂದಿ ಇದ್ದ ಶಾಸಕರ ಸಂಖ್ಯೆ 2013ರಲ್ಲಿ 12ಕ್ಕೆ ಇಳಿದಿತ್ತು. 2018ರಲ್ಲಿ 11ಕ್ಕೆ ತಲುಪಿತ್ತು. ಇದಾದ ಬಳಿಕ ಕಾಂಗ್ರೆಸ್ ನಲ್ಲಿದ್ದ ಕೆಲ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು. ಬಳಿಕ 2019ರಲ್ಲಿ ಉಪಚುನಾವಣೆ ನಡೆದು ಬಿಜೆಪಿಗೆ ಮತ್ತೆ 3 ಸ್ಥಾನಗಳು ಸೇರ್ಪಡೆಗೊಂಡವು. ಇದರಂತೆ ರಾಜರಾಜೇಶ್ವರಿ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಅವರೂ ಕೂಡ ಗೆಲುವು ಸಾಧಿಸಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ನಮ್ಮದು ಜಾತಿ ರಾಜಕಾರಣವಲ್ಲ ಕಾಯಕದ ರಾಜಕಾರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ

ಈಗಾಗಲೇ ರಾಜ್ಯ ಸಚಿವ ಸಂಪುಟದಲ್ಲಿ 7 ಮಂದಿ ಬೆಂಗಳೂರು ನಗರದ ಶಾಸಕರಿದ್ದಾರೆ. ಕಳೆದ ವರ್ಷ ನಡೆದ ಉಪಚುನಾವಣೆ ಬಳಿಕ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಪ್ರಾಮಾಣಿಕ ನಾಯಕರಾದ ಅಶ್ವತ್ಥ್ ನಾರಾಯಣ್, ಸುರೇಶ್ ಕುಮಾರ್, ವಿ ಸೋಮಣ್ಣ ಹಾಗೂ ಆರ್.ಅಶೋಕ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಗರದಲ್ಲಿ 8 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರೂ ಕೂಡ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಉಪ‌ ಚುನಾವಣೆ ಗೆದ್ದರೂ ಕುರ್ಚಿ ಉಳಿಯುವ ಬಗ್ಗೆ ಸಿಎಂಗೆ ಅನುಮಾನ, ಬೆಂಬಲಿಗರ ಬ್ಯಾಟಿಂಗ್

ಈಗಾಗಲೇ ಸಚಿವ ಸ್ಥಾನದಲ್ಲಿರುವ ನಾಲ್ವರೊಂದಿಗೆ ಮತ್ತು ಮತ್ತೆ ನಾಲ್ವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಯಡಿಯೂರಪ್ಪ ಅವರು ನಿರ್ಧರಿಸಿದ್ದು, ಇದು ಪಕ್ಷದಲ್ಲಿ ಕೆಲ ಮನಸ್ತಾಪಗಳಿಗೆ ದಾರಿ ಮಾಡಿಕೊಡಬಹುದು ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಅಲ್ಪಸಂಖ್ಯಾತ ಮಹಿಳೆಯರಿಗೆ 'ಗುಡ್‌ ನ್ಯೂಸ್'‌: ₹ 23 ಸಾವಿರ ಸಾಲ ಸೌಲಭ್ಯ..!

2013 ಮತ್ತು 2018 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಿಂದ 5-6 ಮಂದಿಗೆ ಸಚಿವ ಸ್ಥಾನ ನೀಡಿದ್ದರು. ಆದರೆ ಎಲ್ಲರೂ ಒಂದೇ ಸಮಯದಲ್ಲಿ ಇರಲಿಲ್ಲ. ತಮ್ಮ ಸಂಪುಟದಲ್ಲಿ ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ರೋಶನ್ ಬೇಗ್, ಕೃಷ್ಣ ಬೈರೆಗೌಡ, ದಿನೇಶ್ ಗುಂಡುರಾವ್, ಎಂ.ಕೃಷ್ಣಪ್ಪ ಮತ್ತು ಎಂ ಆರ್ ಸೀತಾರಂ ಅವರಿಗೆ ಸ್ಥಾನ ನೀಡಿದ್ದರು.

ಸಚಿವ ಸಂಪುಟ ಮೇಜರ್ ಸರ್ಜರಿಗೆ ಸಿಎಂ ತಯಾರಿ: ನಾಲ್ವರು ಹಾಲಿ ಸಚಿವರಿಗೆ ಗೆಟ್ ಪಾಸ್..!?

ಬೆಂಗಳೂರು ನಗರದಲ್ಲಿನ 8 ಮಂದಿ ಶಾಸಕರಿಗೇ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ನಾಯಕರಲ್ಲಿ ಅಸಮಾಧಾನ ಮೂಡಬಹುದು ಎಂದು ಹೇಳಲಾಗುತ್ತಿದೆ.

Trending News