ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಸೌಲಭ್ಯ..!

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದಿಂದ 2021-22 ನೇ ಸಾಲಿನ ಧಾರವಾಡ ಜಿಲ್ಲಾ ವ್ಯಾಪ್ತಿಯ ಹೋಟೆಲ್, ಲಾಡ್ಜಸ್, ರೆಸಾರ್ಟ, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್‍ನ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್, ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು ಒದಗಿಸಲಾಗಿದೆ.

Written by - Zee Kannada News Desk | Last Updated : Feb 26, 2022, 03:35 PM IST
  • ಈ ಶಿಬಿರದಲ್ಲಿ ಧಾರವಾಡ ಹಾಗೂ ಗದಗ ಜಿಲ್ಲೆಯ ಹೋಟೆಲ್, ಲಾಡ್ಜಸ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‍ಗಳ ಮಾಲೀಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಸೌಲಭ್ಯ..! title=
ಸಾಂದರ್ಭಿಕ ಚಿತ್ರ

ಧಾರವಾಡ: ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದಿಂದ 2021-22 ನೇ ಸಾಲಿನ ಧಾರವಾಡ ಜಿಲ್ಲಾ ವ್ಯಾಪ್ತಿಯ ಹೋಟೆಲ್, ಲಾಡ್ಜಸ್, ರೆಸಾರ್ಟ, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್‍ನ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್, ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ: HDK: ‘ತಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡದವರು ರಾಜ್ಯವನ್ನು ಹೇಗೆ ರಕ್ಷಣೆ ಮಾಡ್ತಾರೆ?’

ಈ ಸೌಲಭ್ಯವನ್ನು ಪಡೆಯಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ https://kttf.karnatakatourism.org ನಲ್ಲಿ ಕಡ್ಡಾಯವಾಗಿ ನೊಂದಾಯಿಸಿ ಪ್ರಮಾಣ ಪತ್ರವನ್ನು ಪಡೆಯಬಹುದು. ಮಾರ್ಚ್ 2 ರಂದು ಬೆಳಿಗ್ಗೆ 11 ಘಂಟೆಗೆ ಹುಬ್ಬಳ್ಳಿ (Hubli) ಯ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲ್ ಮಂತ್ರ ರೆಸಿಡೆನ್ಸಿಯಲ್ಲಿ ಕೆ.ಟಿ.ಟಿ.ಎಫ್. ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡುವ ಕುರಿತು ಶಿಬಿರವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: #HinduBoyMurder: ಶಿವಮೊಗ್ಗದಲ್ಲಿ ಮುಸಲ್ಮಾನರು ಎಂದೂ ಕೂಡ ಬಾಲ ಬಿಚ್ಚಿರಲಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಈ ಶಿಬಿರದಲ್ಲಿ ಧಾರವಾಡ ಹಾಗೂ ಗದಗ ಜಿಲ್ಲೆಯ ಹೋಟೆಲ್, ಲಾಡ್ಜಸ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‍ಗಳ ಮಾಲೀಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 0836-2744522, 2955522 ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Trending News