₹90 ಕೋಟಿ ‘ಕೈ’ಹೈಕಮಾಂಡ್‌ಗೆ ತಲುಪುತ್ತಿದ್ದ ₹1000 ಕೋಟಿಯ ಸಣ್ಣ ಭಾಗ: ಬಿಜೆಪಿ ಆರೋಪ

ಮೊದಲ ಹಂತದ ಸಾವಿರ ಕೋಟಿ ರೂ.ವನ್ನು ಹೈಕಮಾಂಡ್‌ಗೆ ಸಲ್ಲಿಸುವ ಸಮಯದಲ್ಲಿಯೇ, ಐಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್‌ನ ಕಲೆಕ್ಷನ್‌ ಕಳ್ಳಾಟ ಬಯಲಾಗಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟವೆಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Oct 16, 2023, 04:46 PM IST
  • ಕಳೆದ 10 ದಿನಗಳಲ್ಲಿ ಗುತ್ತಿಗೆದಾರರು ಹಾಗೂ ಬಿಲ್ಡರ್‌ಗಳ ಬಳಿ ಸಿಕ್ಕಿಬಿದ್ದಿರುವುದು ₹90 ಕೋಟಿ ರೂ.
  • ಇದು ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪುತ್ತಿದ್ದ ಮೊದಲ ಕಂತಿನ ₹1000 ಕೋಟಿಯ ಸಣ್ಣ ಭಾಗ
  • ಕಾಂಗ್ರೆಸ್‌ ಬಂದರೆ ಕಲೆಕ್ಷನ್‌ ಮಾಡಲಿದೆ, ಕಮಿಷನ್‌ ದಂಧೆ ಆರಂಭವಾಗಲಿದೆ ಎಂದು ಬಿಜೆಪಿ ಟೀಕೆ
₹90 ಕೋಟಿ ‘ಕೈ’ಹೈಕಮಾಂಡ್‌ಗೆ ತಲುಪುತ್ತಿದ್ದ ₹1000 ಕೋಟಿಯ ಸಣ್ಣ ಭಾಗ: ಬಿಜೆಪಿ ಆರೋಪ title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಕಳೆದ 10 ದಿನಗಳಲ್ಲಿ ಗುತ್ತಿಗೆದಾರರು ಹಾಗೂ ಬಿಲ್ಡರ್‌ಗಳ ಬಳಿ ಸಿಕ್ಕಿಬಿದ್ದಿರುವ ₹90 ಕೋಟಿ ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪುತ್ತಿದ್ದ ಮೊದಲ ಕಂತಿನ ₹1000 ಕೋಟಿಯ ಒಂದು ಸಣ್ಣ ಭಾಗ ಎಂದು ಬಿಜೆಪಿ ಆರೋಪಿಸಿದೆ. ‘ಕಾಂಗ್ರೆಸ್‌ ಬಂದರೆ ಕಲೆಕ್ಷನ್‌ ಮಾಡಲಿದೆ, ಕಾಂಗ್ರೆಸ್‌ ಬಂದರೆ ಕಮಿಷನ್‌ ದಂಧೆ ಆರಂಭವಾಗಲಿದೆ, ಕಾಂಗ್ರೆಸ್‌ ಬಂದರೆ ಕರ್ನಾಟಕ ಹೈಕಮಾಂಡ್‌ ಪಾಲಿಗೆ #ATM ಆಗಲಿದೆ, ಕಾಂಗ್ರೆಸ್‌ ಬಂದರೆ ಅರಾಜಕತೆ ಶುರುವಾಗಲಿದೆ, ಕಾಂಗ್ರೆಸ್‌ ಬಂದರೆ ಕರ್ನಾಟಕ ಜಿಹಾದಿಗಳ ಅಡಗುತಾಣವಾಗಲಿದೆ ಎಂಬ ಆರೋಪಗಳನ್ನೆಲ್ಲಾ ಇಂದು ಸ್ವತಃ ಕಾಂಗ್ರೆಸ್ ನಿಜ ಮಾಡಿದೆ. ಅವೈಜ್ಞಾನಿಕ ಗ್ಯಾರಂಟಿಗಳು, ನಕಲಿ ಗಿಫ್ಟ್‌ ಕಾರ್ಡ್‌ಗಳು, ದಾಖಲೆಯಿಲ್ಲದ ಸುಳ್ಳು ಆರೋಪಗಳನ್ನು ಮಾಡಿಯೇ ಅಧಿಕಾರಕ್ಕೇರಿದ ಸಿದ್ದರಾಮಯ್ಯರ ಸರ್ಕಾರ, ಅಧಿಕಾರಕ್ಕೇರಿದ ನಂತರ ಮೊದಲು ಮಾಡಿದ ಕೆಲಸವೆಂದರೆ, ರಾಜ್ಯವನ್ನು ಹೈಕಮಾಂಡ್‌ನ #ATM ಮಾಡಿದ್ದು’ ಎಂದು ಬಿಜೆಪಿ ಟೀಕಿಸಿದೆ.

‘ಕರ್ನಾಟಕದ ಆಡಳಿತದಲ್ಲಿ ಮೂಗು ತೂರಿಸುವ ಯಾವ ಅಧಿಕಾರವೂ ಇಲ್ಲದ ದೆಹಲಿಯ ರಣದೀಪ್ ಸುರ್ಜೇವಾಲಾ ಅವರು #ATMSarkaraದ ಶುರುವಾತಿನಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳೆನ್ನೆಲ್ಲಾ ಸೇರಿಸಿಕೊಂಡು ಸಭೆ ಮಾಡಿದ್ದು ರಾಜ್ಯವನ್ನು ಲೂಟಿ ಹೊಡೆಯುವ ಸಲುವಾಗಿಯೇ. ಆ ಸಭೆ ಮುಗಿದ ಮರುಘಳಿಗೆಯಿಂದ ಆರಂಭವಾದ ವರ್ಗಾವಣೆ ದಂಧೆ ಇನ್ನೂ ನಿಂತಿಲ್ಲ. ತಿಂಗಳಿಗೊಮ್ಮೆ ಸಂಘಟನೆ ನೆಪ ಮಾಡಿಕೊಂಡು, ಸುರ್ಜೇವಾಲಾರವರು ಬೆಂಗಳೂರಿಗೆ ಆಗಾಗ ಬರುವುದು ಸಹ, ದೆಹಲಿ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್‌ಗೆ ನೀಡಿದ ಕಲೆಕ್ಷನ್‌ ಟಾರ್ಗೆಟ್‌ನ ತಿಂಗಳ ಲೆಕ್ಕವನ್ನು ಪಡೆಯಲು. ಇಂದು ಸುರ್ಜೇವಾಲಾರ ಜೊತೆ ಕೆ.ಸಿ.ವೇಣುಗೋಪಾಲ್ ಸಹ ಬಂದಿರುವುದು, “ಕೈ” ಸರ್ಕಾರದ  ಕಲೆಕ್ಷನ್‌  ಲೆಕ್ಕವನ್ನು ಆಡಿಟ್‌ ಮಾಡಲು’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ನಕಲಿ ಸ್ವಾಮಿ, ಲೂಟಿ ರವಿ, ಮಾಜಿ ಸಿಎಂ, ಬ್ಲಾಕ್ ಮೇಲರ್ ಎಲ್ಲರಿಗೂ ಉತ್ತರ ನೀಡುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

‘ಗುತ್ತಿಗೆದಾರರ ಮೂಲಕ ಭರ್ಜರಿ ಕಲೆಕ್ಷನ್‌ ಮಾಡುವ ಸಲುವಾಗಿಯೇ ಈ ಹಿಂದೆ ಕಾಂಗ್ರೆಸ್‌, ತನ್ನ ಆಪ್ತ ಗುತ್ತಿಗೆದಾರರನ್ನು ಛೂ ಬಿಟ್ಟು ಬಿಜೆಪಿ ಸರ್ಕಾರದ ವಿರುದ್ಧ ನಿರಂತರ ಸುಳ್ಳು ಆರೋಪಗಳನ್ನು ಮಾಡಿತ್ತು. ಈ ದೇಶದಲ್ಲಿ ಒಂದು ರೂಪಾಯಿ ಬಿಡುಗಡೆಯಾದರೆ, ಅದರಲ್ಲಿ ಬಡವರಿಗೆ ತಲುಪುವುದು ಕೇವಲ 15 ಪೈಸೆ ಎಂದು ಹೇಳಿದ್ದ ರಾಜೀವ್‌ ಗಾಂಧಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕಾಂಗ್ರೆಸ್, ವಿಧಾನಸೌಧದಲ್ಲಿ ಬಿಡುಗಡೆಯಾಗುವ ಪ್ರತಿ ಒಂದು ರೂಪಾಯಿಯಲ್ಲಿ 80 ಪೈಸೆಯನ್ನು ತಮ್ಮ ಹೈಕಮಾಂಡ್‌ ಹಾಗೂ ಪಂಚ ರಾಜ್ಯಗಳ ಚುನಾವಣಾ ಫಂಡಿಂಗ್‌ಗೆ ಎತ್ತಿಡುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.

‘ಪ್ರಸ್ತುತ ಸಿದ್ದರಾಮಯ್ಯನವರು ಹಾಗೂ ಡಿ.ಕೆ.ಶಿವಕುಮಾರ್ ಅವರು ವಾರ್ಷಿಕ 3-4 ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡುವುದಾಗಿ ಹೈಕಮಾಂಡ್‌ಗೆ ಮಾತು ಕೊಟ್ಟು ಅಧಿಕಾರದ ಗದ್ದುಗೆಯಲ್ಲಿ ಕೂತಿದ್ದಾರೆ. ಮೊದಲ ಹಂತದ ಸಾವಿರ ಕೋಟಿ ರೂ.ವನ್ನು ಹೈಕಮಾಂಡ್‌ಗೆ ಸಲ್ಲಿಸುವ ಸಮಯದಲ್ಲಿಯೇ, ಐಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್‌ನ ಕಲೆಕ್ಷನ್‌ ಕಳ್ಳಾಟ ಬಯಲಾಗಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರ ಖಾಲಿ ಡ್ರಮ್ ಸರ್ಕಾರ: ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News