Karnataka Budget 2023: ಈ ಬಾರಿಯ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಸಿಕ್ಕಿದ್ದೇನು?

Karnataka Budget 2023-24: ರಾಜ್ಯ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಎರಡನೇ ಬಜೆಟ್ ಮಂಡಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಿರೀಕ್ಷೆಗೆ ತಕ್ಕಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ.   

Written by - Nitin Tabib | Last Updated : Feb 17, 2023, 07:22 PM IST
  • ಈ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಿರೀಕ್ಷೆಗೆ ತಕ್ಕಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ.
  • ಈ ಬಾರಿಯ ತಮ್ಮ ಬಜೆಟ್ ನಲ್ಲಿ ಬೊಮ್ಮಾಯಿ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು
  • ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಗಳು 2013ರ ಅಡಿ ಕಳೆದ 10 ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Karnataka Budget 2023: ಈ ಬಾರಿಯ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಸಿಕ್ಕಿದ್ದೇನು? title=
ಕರ್ನಾಟಕ ಬಜೆಟ್ 2023 ಮುಖ್ಯಾಂಶಗಳು

Karnataka Budget 2023-24: ರಾಜ್ಯ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಎರಡನೇ ಬಜೆಟ್ ಮಂಡಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಿರೀಕ್ಷೆಗೆ ತಕ್ಕಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಾರಿಯ ತಮ್ಮ ಬಜೆಟ್ ನಲ್ಲಿ ಬೊಮ್ಮಾಯಿ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಗಳು 2013ರ ಅಡಿ ಕಳೆದ 10 ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

ಈ ಬಾರಿಯ ಬಜೆಟ್ ನಲ್ಲಿ  ಬಜೆಟ್ ನಲ್ಲಿ ಸಿಕ್ಕಿದ್ದೇನು?
>> ಕಾಯ್ದೆಯ ಸೆಕ್ಷನ್ 7(ಡಿ) ಪರಿಷ್ಕರಣೆಗೆ ಹಲವಾರು ಸಲಹೆಗಳು ಬಂದಿದ್ದು, ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಲು ಕ್ರಮ.
>> ಈ ಪಂಗಡಗಳ ಜನರ ಜಮೀನುಗಳನ್ನು ಸಂರಕ್ಷಿಸಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು
>> ಅಮೃತ್ ಜ್ಯೋತಿ ಯೋಜನೆಯ ಅಡಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯುನಿಟ್ ಉಚಿತ
>> ಗಂಗಾಕಲ್ಯಾಣ ಯೋಜನೆಯ ಅಡಿ ವಿವಿಧ ನಿಗಮಗಳ ಮೂಲಕ 17000 ಫಲಾನುಭವಿಗಳಿಗೆ 675 ಕೋಟಿ ರೂ ಸಹಾಯಧನ ಒದಗಿಸಲಾಗುವುದು, ಡಿಬಿಟಿ ಮೂಲಕ ವರ್ಗಾವಣೆ.
>> ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು  ಸ್ಪರ್ಧಾತ್ಮಕ ಪರೀಕ್ಷೆಗೆ 9500 ಅಭ್ಯರ್ಥಿಗಳಿಗೆ ತರಬೇತಿ. 
>> ಗ್ರಾಮೀಣ ಪ್ರದೇಶದ ಈ ಪಂಗಡದ ಜನರ ವಸತಿ ಯೋಜನೆಗಳಲ್ಲಿ ಘಟಕ ಸಹಾಯ ಧನ 1.75 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಳ.
>> ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚ ಮೊತ್ತ 15 ರಿಂದ 20 ಲಕ್ಷ ರೂ.ಗಳಿಗೆ ಹೆಚ್ಚಳ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಈ ಮೊತ್ತ 25 ಲಕ್ಷಕ್ಕೆ ಹೆಚ್ಚಳ.
>> ಬಾಬು ಜಗಜೀವನ್ ರಾಮ್ ಸ್ವಯಂ ಉದ್ಯೋಗ ಯೋಜನೆಯ ಅಡಿ  ವಿದ್ಯುತ್ ಚಾಲಿತ ತ್ರಿಚಕ್ರ ಸರಕು ವಾಹನ ಖರೀದಿಗೆ 50 ಸಾವಿರ ಸಹಾಯಧನ ಕಾರ್ಯಕ್ರಮ ಅನುಷ್ಠಾನ.

ಇದನ್ನೂ ಓದಿ-Karnataka Budget 2023 : ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ, ಥೀಮ್ ಪಾರ್ಕ್ ನಿರ್ಮಾಣ

>> 100 ಕ್ರೈಸ್ ವಸತಿ ಶಾಲೆಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಉನ್ನತೀಕರಣ
>> IIT, IIM, IISc, NIT ಮುಂತಾದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 2 ರಿಂದ 4 ಲಕ್ಷ ರೂ.ಗಳಿಗೆ ಹೆಚ್ಚಳ.
>> ISEC ಯಲ್ಲಿ ಪಿ.ಹೆಚ್.ಡಿ ಮಾಡುವ 5 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್ ಅಂಬೇಡ್ಕರ್ ಫೆಲೋಶಿಪ್ ನೀಡಲು 2 ಕೋಟಿ ರೂ.ಕಾರ್ಪಸ್ ಸ್ಥಾಪನೆ.
>> ಈ ಪಂಗಡಗಳ ನಿರುದ್ಯೋಗಿಗಳಿಗೆ ವಿವಿಧ ಆದಾಯ ಬರುವ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧ ವಾಣಿಜ್ಯ ಬ್ಯಾಂಕು ಗಳಿಂದ ನೀಡಲಾಗುವ ಗರಿಷ್ಟ 10 ಲಕ್ಷ ರೂ.ವರೆಗಇನ ಸಾಲವನ್ನು ಶೇ.4 ರಷ್ಟು ಬಡ್ಡಿಗೆ ದೊರಕಿಸಲು ಸರ್ಕಾರದ ಬಡ್ಡಿ ಸಹಾಯಧನ.
>> ಸಫಾಯಿ ಕರ್ಮಚಾರಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ವಸಸಿ ಸೌಲಭ್ಯ ಕಲ್ಪಿಸಲು ಕ್ರಮ.
>> 6 ಅಭಿವೃದ್ಧಿ ನಿಗಮಗಳ ಅನುದಾನ ಪ್ರಸಕ್ತ ಸಾಲಿನಲ್ಲಿ 795 ಕೋಟಿ ರೂ.ಗೆ ಹೆಚ್ಚಳ.

ಇದನ್ನೂ ಓದಿ-ರಾಜ್ಯ ಬಜೆಟ್ 2023-24: ಮೈಸೂರು ವಿಮಾನ ನಿಲ್ದಾಣ ಉನ್ನತಿಕಾರಣಕ್ಕೆ ₹320 ಕೋಟಿ

>> 'ಬಿಲ್ಟ್ ಟು ಸೂಟ್' ಮಾದರಿಯಲ್ಲಿ 20 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ. 160 ವಿದ್ಯಾರ್ಥಿ ನಿಲಯಗಳನ್ನು ಹಸ್ತಾಂತರ ಪ್ರಕ್ರಿಯೆ ನಡೆಸಿ 1 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಲಾಗುವುದು.
>> ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಮೋಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ದುರುಸ್ತಿಗೆ 250 ಕೋಟಿ ರೂ ಹೆಚ್ಚುವರಿ ಅನುದಾನ.
>> ಈ ವರ್ಗಗಳ ಸಮುದಾಯಗಳಿಗೆ ಸೇರಿದ ಮಠಗಳು, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ 1115 ಸಂಸ್ಥೆಗಳಿಗೆ 375  ಕೋಟಿ ಅನುದಾನ 
>> 50 ಕನಕದಾಸ ವಿದ್ಯಾರ್ಥಿ ನಿಲಯಗಳ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಟೆಂಡರ್, ಘಟಕ ವೆಚ್ಚ 3.5 ರಿಗಾ 5 ಕೋಟಿ ರೂ.ಗಳಿಗೆ ಹೆಚ್ಚಳ.
>> ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲು ಮಾಸಿಕ ಭೋಜನ ವೆಚ್ಚದಲ್ಲಿ 150 ರೂ.ಹೆಚ್ಚಳ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News