ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಪೊಲೀಸ್ ಇಲಾಖೆ ಭರ್ಜರಿ ತಯಾರಿ ನಡೆಸುತ್ತಿದೆ. ಹಿಂದಿನ ಚುನಾವಣೆಗಿಂತ ಈ ಬಾರಿಯ ಚುನಾವಣೆಗೆ ಮೂರು ಪಟ್ಟು ಬಂದೋಬಸ್ತ್ ಒದಗಿಸಲು ಖಾಕಿ ನಿರ್ಧರಿಸಿದ್ದು, ಪ್ರತಿ ಬೂತ್ಗೂ ಸ್ಥಳೀಯ ಪೊಲೀಸರ ಜೊತೆ ಆರ್ಮಿ ಪೋರ್ಸ್ ಸಿಬ್ಬಂದಿ ನಿಯೋಜನೆಗೊಳಿಸಲಿದೆ.
ಈ ಬಾರಿಯ ಚುನಾವಣೆ ರಣಕಣ ರಂಗೇರಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಬೂತ್ಗೂ ಸ್ಥಳೀಯ ಪೊಲೀಸರ ಜೊತೆ ಆರ್ಮಿ ಪೋರ್ಸ್ ಇರಲಿದೆ. ಶಸ್ತ್ರ ಸಜ್ಜಿತ ಪಡೆ ಎಲ್ಲಾ ಬೂತ್ ಗಳಲ್ಲಿಯೂ ಪಡೆಯ ಕಾರ್ಯನಿರ್ವಹಿಸಲಿದೆ. ರಾಜ್ಯದ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸೆಂಟ್ರಲ್ ಆರ್ಮಿ ಪೋರ್ಸ್ ಭದ್ರತೆ ಒದಗಿಸಲಿದೆ.
ಇದನ್ನೂ ಓದಿ: ಬಿಜೆಪಿಗೆ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಸೆಡ್ಡು; ಪಕ್ಷೇತರ ಸ್ಪರ್ಧೆಗೆ ಘೋಷಣೆ!
ಈಗಾಗಲೇ ಎಡಿಜಿಪಿ ಅವರು ಸೂಕ್ಷ್ಮ ಪ್ರದೇಶಗಳಂತೆ ನೂರಕ್ಕೂ ಹೆಚ್ಚು ಏರಿಯಾ ಲಿಸ್ಟ್ ಔಟ್ ಮಾಡಿದ್ದಾರೆ. ಬರೊಬ್ಬರಿ 405 ಮಿಲಿಟರಿ ಪೋರ್ಸ್ ಕಂಪನಿಗಳು ರಾಜ್ಯದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 105 ಸೆಂಟ್ರಲ್ ಆರ್ಮಿ ಕಂಪನಿಯನ್ನ ಮಾತ್ರ ತೆಗೆದುಕೊಳ್ಳಲಾಗಿತ್ತು. ಈ ಬಾರಿ 405 ಕಂಪನಿಗಳಲ್ಲಿ ಅರವತ್ತು ಸಾವಿರ ಮಂದಿಯ ಪಡೆಯನ್ನು ನೇಮಿಸಲಾಗುತ್ತಿದೆ.
ಸೆಂಟ್ರಲ್ ಆರ್ಮಿಯ ಪಡೆಯ ಸಂಪೂರ್ಣ ನೇತೃತ್ವ ಕೆಎಸ್ಆರ್ಪಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೆಗಲಿಗೆ ಇದೆ. ಈ ಮಧ್ಯೆ ಎಡಿಜಿಪಿ ಲಾ ಅಂಡ್ ಆರ್ಡರ್ ಅಲೋಕ್ ಕುಮಾರ್ ಅವರು, ಯಾವ್ಯಾವ ಸ್ಥಳದಲ್ಲಿ ಎಷ್ಟು ಮಂದಿ ನಿಯೋಜನೆ ಮಾಡ್ಬೇಕು ಎನ್ನುವ ಸೂಚನೆ ನೀಡಲಿದ್ದಾರೆ. ಅಲೋಕ್ ಕುಮಾರ್ ಸೂಚನೆಯಂತೆ ಸೆಂಟ್ರಲ್ ಟೀಂ ಕಾರ್ಯಾಚರಣೆ ನಡೆಸಲಿದೆ.
ಇದನ್ನೂ ಓದಿ: 47 ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಕಡೆ ಮುಖ ಎಂದ ಡಿಕೆಶಿ..!
ಈಗಾಗ್ಲೇ ರಾಜ್ಯದಲ್ಲಿ ಇಪ್ಪತ್ತು ಸಾವಿರ ಆರ್ಮಿ ಟೀಂ ಬಂದೋಬಸ್ತ್ ಗೆ ನಿಯೋಜನೆಗೊಂಡಿದೆ. ಚುನಾವಣೆ ವೇಳೆಗೆ ಎಲ್ಲಾ ಕಡೆ ಸೆಂಟ್ರಲ್ ಆರ್ಮಿ ಟೀಂ ಸಜ್ಜಾಗಲಿದೆ. ಬಿಎಸ್ಎಫ್ - ಬಾರ್ಡರ್ ಸೆಕ್ಯೂರಿಟಿ ಪೋರ್ಸ್, ಐಟಿಬಿಪಿ -ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಸಿಐಎಸ್ಎಫ್ -ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್, ಸಿ ಆರ್ ಪಿಎಫ್ - ಸೆಂಟ್ರಲ್ ರಿಸರ್ವ್ ಪೊಲೀಸ್, ಸ್ಟೇಟ್ ಆರ್ಮಿ ಟೀಂ- ಎಲ್ಲಾ ರಾಜ್ಯಗಳಿಂದ ಬರುವ ಪೊಲೀಸ್ ಟೀಂ ಕಾರ್ಯನಿರ್ವಹಿಸಲಿದೆ.
ಚುನಾವಣಾ ಸಂಬಂಧ ಗಲಾಟೆಯಾಗಿರೋ ಏರಿಯಾಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣನೆ ಮಾಡಲಾಗುವುದು. ರಾಮನಗರ, ಕನಕಪುರ, ಚೆನ್ನಪಟ್ಟಣ, ಮಂಡ್ಯ, ಮೈಸೂರು, ಬೆಂಗಳೂರು ಎಲ್ಲಾ ವಿಧಾನಸಭಾ ಕ್ಷೇತ್ರ, ಬೆ.ಗ್ರಾ ಎಲ್ಲಾ ಕ್ಷೇತ್ರ ಹಾಗೂ ಯಾದಗಿರಿ, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಉತ್ತರ ಕರ್ನಾಟಕದ ಕಡೆ ಹೆಚ್ಚು ಆರ್ಮಿ ಪೋರ್ಸ್ ನಿಯೋಜನೆಗೆ ಪ್ಲಾನ್ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.