Raichur Assembly Election Result 2023: ‘ಚಿನ್ನ’ದ ನಾಡಿನಲ್ಲಿ ಯಾರಿಗೆ ವಿಜಯಮಾಲೆ..?

Raichur Assembly Election Results 2023: ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿ ಹಾಗೂ 2 ಸಾಮಾನ್ಯ ಮೀಸಲು ಕ್ಷೇತ್ರಗಳಿವೆ. ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಜನರು ಬದಲಾವಣೆಯತ್ತ ಚಿತ್ತ ಹರಿಸಿದ್ದಾರೆ.

Written by - Puttaraj K Alur | Last Updated : May 13, 2023, 10:23 AM IST
  • ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಸಿಗಲಿದೆ ಗೆಲುವು..?
  • ಚಿನ್ನದ ನಾಡಿನಲ್ಲಿ ಯಾರಿಗೆ ಸಿಗುತ್ತೆ ಗೆಲುವಿನ ಗದ್ದುಗೆ..?
  • ರಾಯಚೂರು ಜಿಲ್ಲೆಯಲ್ಲಿ ಯಾರ ಪರ ಇದೆ ಮತದಾರನ ಒಲವು?
Raichur Assembly Election Result 2023: ‘ಚಿನ್ನ’ದ ನಾಡಿನಲ್ಲಿ ಯಾರಿಗೆ ವಿಜಯಮಾಲೆ..? title=
ರಾಯಚೂರಿನಲ್ಲಿ ಯಾರಿಗೆ ಗೆಲುವು?

Raichur Assembly Election Result 2023: ರಾಯಚೂರು ಶಿಲಾಶಾಸನ ದೃಷ್ಟಿಯಿಂದ ಬಹಳ ಶ್ರೀಮಂತವಾಗಿದೆ. ಚಿನ್ನದ ನಾಡು, ವಿದ್ಯುತ್‌ಶಕ್ತಿಯ ಬೀಡು, ಭತ್ತದ ಬಟ್ಟಲು ಎನ್ನುವುದು ಬರೀ ಹೊಗಳಿಕೆಗೆ ಸಿಮೀತ. ಇಲ್ಲಿ ಮೂಲಸೌಕರ್ಯಗಳ ಸಮಸ್ಯೆ ಹೆಚ್ಚಾಗಿದ್ದು, ಇಂದಿಗೂ ಜನರು ಉದ್ಯೋಗವಿಲ್ಲದೆ ಗುಳೆ ಹೋಗುವುದು ರೂಡಿಯಲ್ಲಿದೆ. ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿ ಹಾಗೂ 2 ಸಾಮಾನ್ಯ ಮೀಸಲು ಕ್ಷೇತ್ರಗಳಿವೆ. ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಜನರು ಬದಲಾವಣೆಯತ್ತ ಚಿತ್ತ ಹರಿಸಿದ್ದಾರೆ. ಹೀಗಾಗಿ ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೆಂಬುದು ತೀವ್ರ ಕುತೂಹಲ ಮೂಡಿದೆ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರ:

Raichur Assembly Election Results 2023: ರಾಯಚೂರು ನಗರ ಕ್ಷೇತ್ರ ಇದುವರೆಗೂ 12 ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಪ್ರಸ್ತುತ ಶಾಸಕ ಡಾ.ಶಿವರಾಜ್ ಪಾಟೀಲ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಶಾಸಕರಾಗಿರುವ ಶಿವರಾಜ್ ಪಾಟೀಲ್‌, 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. 2018ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಶಿವರಾಜ್ ಪಾಟೀಲ್ ಮರುಆಯ್ಕೆಯಾಗಿದ್ದರು. ಇದುವರೆಗೂ 5 ಕಾಂಗ್ರೆಸ್‌ ಶಾಸಕರು, 2 ಜನತಾ ದಳದ ಶಾಸಕರು, 2 ಬಿಜೆಪಿ ಶಾಸಕರು, ಒಬ್ಬ ಜನತಾ ಪಕ್ಷದ ಶಾಸಕರು ರಾಯಚೂರು ನಗರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಇವರಲ್ಲಿ 5 ಬಾರಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದರು.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಶಾಸಕ ಡಾ.ಶಿವರಾಜ್ ಪಾಟೀಲ್ ಮರು ಆಯ್ಕೆಯಾದರು. ಅವರು 56,511 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಸಯ್ಯದ್ ಯಾಸಿನ್‌ 45,520 ಮತಗಳನ್ನು, ಜೆಡಿಎಸ್‌ನ ಮಹಂತೇಶ್‌ ಪಾಟೀಲ್‌ 7,796 ಮತ ಪಡೆದು ಸೋಲು ಕಂಡಿದ್ದರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಡಾ.ಶಿವರಾಜ್ ಪಾಟೀಲ್ – ಬಿಜೆಪಿ

ಮೊಹ್ಮದ್ ಶಾಲಂ – ಕಾಂಗ್ರೆಸ್

ವಿನಯಕುಮಾರ್ – ಜೆಡಿಎಸ್

ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ:

Raichur Rural Assembly Election Results 2023: ಇದುವರೆಗೆ 14 ವಿಧಾನಸಭಾ ಚುನಾವಣೆ ಕಂಡಿರುವ ರಾಯಚೂರು ಗ್ರಾಮಾಂತರ ಕ್ಷೇತ್ರ 2008ಕ್ಕೂ ಮೊದಲು ಕಲ್ಮಲಾ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಮರುವಿಂಗಣೆ ವೇಳೆ ಕೆಲವು ಪ್ರದೇಶಗಳನ್ನು ಬದಲಿಸಿ, ಕಲ್ಮಲಾ ಕ್ಷೇತ್ರವನ್ನು ರಾಯಚೂರು ಗ್ರಾಮಾಂತರವೆಂದು ಹೆಸರಿಲಾಯಿತು. ಪ್ರಸ್ತುತ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರ ಸ್ಥಾನದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿದ್ದಾರೆ. ಈ ಕ್ಷೇತ್ರದಲ್ಲಿ ಶಾಸಕ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ಎಸ್‌ಟಿ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಬಸನಗೌಡ ದದ್ದಲ್ 66,656 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಬಿಜೆಪಿಯ ತಿಪ್ಪರಾಜು ಹವಾಲ್ದಾರ್ 56,692 ಮತಗಳನ್ನು ಪಡೆದು ಸೋಲು ಕಂಡಿದ್ದರು.

 2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಬಸನಗೌಡ ದದ್ದಲ್ – ಕಾಂಗ್ರೆಸ್

ತಿಪ್ಪರಾಜು ಹವಾಲ್ದಾರ್ - ಬಿಜೆಪಿ  

ಐ.ಕುಮಾರ್ ನಾಯಕ್ – ಕೆಆರ್‍ಎಸ್

ನರಸಿಂಹ ನಾಯಕ್       - ಜೆಡಿಎಸ್

ಡಾ.ಸುಭಾಶಚಂದ್ರ ಸಾಂಭಾಜಿ  - ಆಮ್ ಆದ್ಮಿ ಪಾರ್ಟಿ

ಎಂ.ಖಾಸಿಂ ನಾಯಕ – ಕೆಆರ್‍ಪಿಪಿ

ಮಾನ್ವಿ ವಿಧಾನಸಭಾ ಕ್ಷೇತ್ರ:

Manvi Assembly Election Results 2023: ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುತ್ತಾ ಬಂದಿದೆ. 1957ರಲ್ಲಿ ನಡೆದ ಮೊದಲ ಚುನಾವಣೆಯಿಂದ 1983ರ ಚುನಾವಣೆವರೆಗೂ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಬಳಿಕ ಕಾಂಗ್ರೆಸ್ ಪಕ್ಷವನ್ನು ಹಲವು ಪಕ್ಷಗಳು ಮಣಿಸಿದ್ದವು. ಇದೀಗ ಮತ್ತೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇದುವರೆಗೆ 14 ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ ಕಾಂಗ್ರೆಸ್‌ 10 ಬಾರಿ, ಜನತಾ ಪಕ್ಷ, ಜನತಾ ದಳ, ಜೆಡಿಎಸ್‌ ಹಾಗೂ ಸ್ವತಂತ್ರರು ತಲಾ ಒಮ್ಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ಹಂಪಯ್ಯ ನಾಯಕ್‌ ತಮ್ಮ ಸೊಸೆ ತನುಶ್ರೀಯನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದರು. ಆದರೆ ರಾಜಾ ವೆಂಕಟಪ್ಪ ನಾಯಕ್‌ 53,548 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ತನುಶ್ರೀ 37,733 ಮತಗಳನ್ನು ಪಡೆದು ಸೋಲು ಕಂಡಿದ್ದರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಭಗವಾನ್ ತಾರೆ – ಬಿಜೆಪಿ

ಜಿ.ಹಂಪಯ್ಯ ನಾಯಕ್ – ಕಾಂಗ್ರೆಸ್

ರಾಜ ವೆಂಕಟಪ್ಪ ನಾಯಕ್ - ಜೆಡೆಇಸ್

ಮುದಕಪ್ಪ ನಾಯಕ್ – ಬಿಎಸ್‍ಪಿ

ರಾಜಾ ಶಾಮ್‌ಸುಂದರ್ ನಾಯಕ್ –AAP

ಬಸವಪ್ರಭು – KRS

ದೇವದುರ್ಗ ವಿಧಾನಸಭಾ ಕ್ಷೇತ್ರ:

Devadurga Assembly Election Results 2023: ಮೊದಲೆರಡು ದಶಕಗಳಲ್ಲಿ ದೇವದುರ್ಗ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡಿತ್ತು. ಕಳೆದ 3 ಚುನಾವಣೆಗಳಿಂದ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಇದುವರೆಗೂ 14 ಶಾಸಕರು ಕ್ಷೇತ್ರ ಪ್ರತಿನಿಧಿಸಿದ್ದು, ಈ ಪೈಕಿ ಕಾಂಗ್ರೆಸ್‌ 7, ಜೆಡಿಎಸ್‌ 2 ಬಾರಿ ಹಾಗೂ ಹಳೇ ಕಾಂಗ್ರೆಸ್‌, ಸ್ವತಂತ್ರ ಜನತಾ ಪಕ್ಷ ಮತ್ತು ಜನತಾ ದಳದ ಅಭ್ಯರ್ಥಿಗಳು ತಲಾ ಒಮ್ಮೆ ಗೆಲುವು ಸಾಧಿಸಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ದೇವದುರ್ಗದಲ್ಲಿ ಅವರೇ ನಿರ್ಣಾಯಕರು.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ದೇವದುರ್ಗದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವನಗೌಡ ಪಾಟೀಲ್‌ 67,003 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಎ.ರಾಜಶೇಖರ್ ನಾಯಕ್ 45,958 ಮತ ಪಡೆದು ಸೋಲು ಕಂಡಿದ್ದರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಕೆ.ಶಿವನಗೌಡ ನಾಯಕ್  - ಬಿಜೆಪಿ

ಶ್ರೀದೇವಿ ಆರ್.ನಾಯಕ್ - ಕಾಂಗ್ರೆಸ್

ಕರೆಮ್ಮ ಜಿ.ನಾಯಕ್ - ಜೆಡಿಎಸ್     

ನರಸಣ್ಣಗೌಡ ಹೊಸಮನಿ –ಬಿಎಸ್‍ಪಿ        

ರೂಪಾ – ಪಕ್ಷೇತರ

ಇದನ್ನೂ ಓದಿ: Koppal Assembly Election 2023: ಕೊಪ್ಪಳ ಜಿಲ್ಲೆಯ ‘ಕುರುಕ್ಷೇತ್ರ’ದಲ್ಲಿ ಯಾರಿಗೆ ಗೆಲುವು?

ಲಿಂಗಸುಗೂರು ವಿಧಾನಸಭಾ ಕ್ಷೇತ್ರ:

Lingsugur Assembly Election Results 2023: ಈ ಕ್ಷೇತ್ರದಲ್ಲಿ ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. 2008ರ ಕ್ಷೇತ್ರ ಮರುವಿಂಗಡಣೆವರೆಗೂ ಲಿಂಗಸುಗೂರು ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡಿತ್ತು. 2008ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಇದುವರೆಗೂ 14 ಶಾಸಕರು ಕ್ಷೇತ್ರ ಪ್ರತಿನಿಧಿಸಿದ್ದು, ಈ ಪೈಕಿ ಕಾಂಗ್ರೆಸ್‌ 7, ಜೆಡಿಎಸ್‌ 2 ಬಾರಿ ಹಾಗೂ ಲೋಕ ಸೇವಕ ಸಂಘ, ಜನತಾ ಸಂಘ, ಜೆಡಿಯು ಮತ್ತು ಜನತಾ ದಳದ ಅಭ್ಯರ್ಥಿಗಳು ತಲಾ ಒಮ್ಮೆ ಗೆಲುವು ಸಾಧಿಸಿದ್ದಾರೆ. ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಲಿಂಗಸುಗೂರಿನಲ್ಲಿ ದಲಿತರೇ ನಿರ್ಣಾಯಕ.

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಎಸ್‌.ಹೂಲಗೇರಿ 54,230 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಜೆಡಿಎಸ್‌ನ ಸಿದ್ದು ವೈ.ಬಂಡಿ 49,284 ಮತಗಳನ್ನು ಪಡೆದು ಸೋಲು ಕಂಡರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ದುರ್ಗಪ್ಪ ಎಸ್. ಹೂಲಗೇರಿ - ಕಾಂಗ್ರೆಸ್   

ಮನ್ನಪ್ಪ ಡಿ ವಜ್ಜಲ್ - ಬಿಜೆಪಿ

ಸಿದ್ದು ವೈ.ಬಂಡಿ  -ಜೆಡಿಎಸ್

ಆರ್.ರುದ್ರಯ್ಯ – ಕೆಆರ್‍ಪಿಪಿ

ನಾಗರಾಜ ಮೋತಿ- ಉತ್ತಮ ಪ್ರಜಾಕೀಯ ಪಾರ್ಟಿ

ಸಿಂಧನೂರು ವಿಧಾನಸಭಾ ಕ್ಷೇತ್ರ:

Sindhanur Assembly Election Results 2023: 70 ವರ್ಷಗಳ ರಾಜಕೀಯ ಇತಿಹಾಸದಲ್ಲಿಯೇ ಇಲ್ಲಿ ಲಿಂಗಾಯತೇತರರು ಗೆಲುವು ಸಾಧಿಸಿರುವುದು ಕೇವಲ 2 ಬಾರಿ. ಇನ್ನುಳಿದಂತೆ ಎಲ್ಲಾ ಚುನಾವಣೆಗಳಲ್ಲಿಯೂ ಲಿಂಗಾಯತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಕುರುಬ ಸಮದಾಯದ ಕೆ.ವಿರುಪಾಕ್ಷಪ್ಪ ಒಮ್ಮೆ ಶಾಸಕರಾಗಿ ಮತ್ತೊಮ್ಮೆ ಸಂಸದರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈಡಿಗ ಸಮುದಾಯದ ಆರ್‌.ನಾರಾಯಣಪ್ಪ ಒಮ್ಮೆ ಪ್ರತಿನಿಧಿಸಿದ್ದಾರೆ.

2018ರ ಫಲಿತಾಂಶ:

2018ರಲ್ಲಿ ಜೆಡಿಎಸ್‌ನ  ನಾಡಗೌಡ ವೆಂಕಟರಾವ್‌ 71,514 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿಯವರು 69,917 ಮತಗಳನ್ನು ಪಡೆದು ಸೋಲು ಕಂಡಿದ್ದರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಹಂಪನಗೌಡ ಬದ್ರಾಲಿ -  ಕಾಂಗ್ರೆಸ್   

ಕೆ.ಕರಿಯಪ್ಪ – ಬಿಜೆಪಿ

ನಿರುಪಾದಿ ಕೆ ಗೊಮರ್ಶಿ – ಕೆಆರ್‍ಎಸ್‍  

ಸಂಗ್ರಾಮ ನಾರಾಯಣ ಕಿಲ್ಲೇದ - ಆಮ್ ಆದ್ಮಿ ಪಾರ್ಟಿ 

ವೆಂಕಟರಾವ್ ನಾಡಗೌಡ - ಜೆಡಿಎಸ್ 

 ಬಸವರಾಜ ಸಾಸಲಮರಿ - ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ(ಬಿ)

ಮಸ್ಕಿ ವಿಧಾನಭಾ ಕ್ಷೇತ್ರ:

Maski Assembly Election Results 2023: ಆರಂಭದಲ್ಲಿ ಪಟ್ಟಣ ಪಂಚಾಯಿತಿಯಾಗಿ ಲಿಂಗಸುಗೂರು, ಮಾನ್ವಿ, ಸಿಂಧನೂರು ವಿಧಾನಸಭಾ ಕ್ಷೇತ್ರಗಳೊಂದಿಗೆ ಹಂಚಿಹೋಗಿದ್ದ ಮಸ್ಕಿಯನ್ನು 2008ರಲ್ಲಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸಲಾಗಿದೆ. 

2018ರ ಫಲಿತಾಂಶ:

2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಪ್ರತಾಪ್ ಗೌಟ ಪಾಟೀಲ್ 60,387 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಬಸನಗೌಡ ತುರ್ವಿಹಾಳ 60,174 ಮತಗಳನ್ನು ಪಡೆದು ಕೇವಲ 213 ಮತಗಳಿಂದ ಸೋಲು ಕಂಡಿದ್ದರು.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:

ಬಸನಗೌಡ ತುರ್ವಿಹಾಳ್‌ - ಕಾಂಗ್ರೆಸ್  

ಪ್ರತಾಪಗೌಡ ಪಾಟೀಲ –ಬಿಜೆಪಿ

ರಾಘವೇಂದ್ರ ನಾಯಕ – ಜೆಡಿಎಸ್

ಗಂಗಮ್ಮ ಅಂಕುಶದೊಡ್ಡಿ – KRS

ಇ.ಎಚ್‍.ನಾಯಕ - ಪಕ್ಷೇತರ

ಇದನ್ನೂ ಓದಿ: Gulbarga Assembly Election 2023: ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಗೆಲುವು ಯಾರಿಗೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News