ʼಹತ್ತು ಮಣಿಕಂಠರನ್ನು ನೋಡಿದ್ದೇನೆʼ : ಬಿಜೆಪಿ ಅಭ್ಯರ್ಥಿ ಬೆದರಿಕೆಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌

Karnataka Election 2023: ಆಡಿಯೋ ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಖರ್ಗೆ ಹಾಗು ಅವರ ಹೆಂಡತಿ ಮಕ್ಕಳನ್ನು ಸಾಫ್‌ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್‌ ಖರ್ಗೆ ಇಂತಹ ಹತ್ತು ಮಣಿಕಂಠನನ್ನು ನೋಡಿದ್ದೇನೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

Written by - Zee Kannada News Desk | Edited by - Krishna N K | Last Updated : May 6, 2023, 03:34 PM IST
  • ಖರ್ಗೆ ಹಾಗು ಅವರ ಹೆಂಡತಿ ಮಕ್ಕಳನ್ನು ಸಾಫ್‌ ಮಾಡುತ್ತೇನೆ.
  • ಎಐಸಿಸಿ ಅಧ್ಯಕ್ಷನ ಕುಟುಂಬಕ್ಕೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಬೆದರಿಕೆ.
  • ಇಂತಹ ಹತ್ತು ಮಣಿಕಂಠರನ್ನು ನೋಡಿದ್ದೇನೆ ಎಂದ ಪ್ರಿಯಾಂಕ್‌ ಖರ್ಗೆ.
ʼಹತ್ತು ಮಣಿಕಂಠರನ್ನು ನೋಡಿದ್ದೇನೆʼ : ಬಿಜೆಪಿ ಅಭ್ಯರ್ಥಿ ಬೆದರಿಕೆಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌ title=

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಹೆಂಡತಿ ಮಕ್ಕಳನ್ನ ಸಾಫ್ ಮಾಡುತ್ತೇನೆ ಎಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ‌ ಆಡಿಯೋ ಧ್ವನಿ ಕುರಿತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಹತ್ತು ಮಣಿಕಂಠನನ್ನು ನೋಡಿದ್ದೇನೆ ಎಂದು ಹೇಳುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಅವರು ಮಾತನಾಡಿದ್ದಾರೆ ಎನ್ನುವ ಅಡಿಯೋದಲ್ಲಿ ಖರ್ಗೆ ಹಾಗು ಅವರ ಹೆಂಡತಿ ಮಕ್ಕಳನ್ನು ಸಾಫ್‌ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ಪ್ರಿಯಾಂಕ್‌ ಖರ್ಗೆ ಜಿಲ್ಲೆಯ ಕಲಗುರ್ತಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಳೆದ 50 ವರ್ಷದಿಂದ ಕಲಬುರಗಿ ಜನರಿಗಾಗಿಯೇ ದುಡಿಯುತ್ತಿದ್ದಾರೆ ಅಂತವರನ್ನು ಸಾಯಿಸುತ್ತಾನಂತೆ. ಖರ್ಗೆ ಸಾಹೇಬರು, ನಮ್ಮ ತಾಯಿ, ನಾನು ಹಾಗೂ ನನ್ನ ಪತ್ನಿ ತಪ್ಪು ಏನಾದರೂ ಮಾಡಿದ್ದೀವಾ ನಮ್ಮನ್ನ ಸಾಫ್ ಮಾಡಲು? ನಾನು ಇಂತಹ ಹತ್ತು ಮಣಿಕಂಠ ರಾಠೋಡಗಳನ್ನು ನೋಡಿದ್ದೇನೆ ಎಂದು ಖಡಕ್ ಉತ್ತರ ನೀಡಿದರು.

ಇದನ್ನೂ ಓದಿ: Krithi Shetty : ಸೀರೆಯಲ್ಲಿ ಹೆಣ್ಣು ಬೆಣ್ಣೆ.. ಆಹಾ! ಬೆಣ್ಣೆಯಂತೆ.. ಕರಗಿಹೋಗೋ ನನ್ನ ಹೃದಯದಂತೆ..

ಈ ಸಲದ ಚಿತ್ತಾಪುರ ಚುನಾವಣೆ ವಿಚಿತ್ರ ವಾತಾವರಣದಲ್ಲಿ ನಡೆಯುತ್ತಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆಯುತ್ತಿಲ್ಲ ಬದಲಿಗೆ ಚಿತ್ತಾಪುರ ಜನರ ಸ್ವಾಭಿಮಾನದ ಬದುಕಿಗೆ ಧಕ್ಕೆ ತರುವಂತ ಚುನಾವಣೆಯಾಗಿದೆ. ಕ್ಷೇತ್ರದ ಜನರು ಮನಗಂಡು ತಾವೆಲ್ಲ ಮತ ಚಲಾವಣೆ ಮಾಡಬೇಕು. ನಮ್ಮ ಯುವಕರ ಭವಿಷ್ಯ ಹಾಗೂ ಮಹಿಳೆಯರ‌ ಸುರಕ್ಷತೆಗಾಗಿ ನೀವೆಲ್ಲ ನನಗೆ ಮತ ಹಾಕಬೇಕು ಎಂದು ಜನರಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News