ಟಿಕೆಟ್ ಘೋಷಣೆಗೂ ಮುನ್ನವೇ ಚಾ.ನಗರಕ್ಕೆ ಸೋಮಣ್ಣ ಗ್ರಾಂಡ್ ಎಂಟ್ರಿ!! ರೈತ ಸಮಾವೇಶದಲ್ಲಿ ಭಾಗಿ

Karnataka Assembly Election: ನೀತಿ ಸಂಹಿತೆ ಘೋಷಣೆಯಾದ ಬಳಿಕ ಸೋಮಣ್ಣ ಜಿಲ್ಲೆಗೆ ಅವರ ಮೊದಲ ಬೇಟಿ ಇದಾಗಿದ್ದು ಅವರ ಅಭಿಮಾನಿಗಳು ಜಿಲ್ಲೆಯ ನಾಲ್ಕೈದು ಕಡೆ ಪಟಾಕಿ ಸಿಡಿಸಿ, ಹೂಗಳನ್ನು ಎರಚಿ ಸ್ವಾಗತ ಕೋರಿರುವುದು ಸೋಮಣ್ಣ ಚಾಮರಾಜನಗರಕ್ಕೆ  ಬರುತ್ತಾರೆ ಎಂಬ ಊಹಾಪೋಹಕ್ಕೆ ಇಂಬು ಕೊಟ್ಟಿದೆ. 

Written by - Yashaswini V | Last Updated : Apr 11, 2023, 01:17 PM IST
  • ಚಾಮರಾಜನಗರ ಬಿಜೆಪಿ ವತಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ರೈತ ಸಮಾವೇಶ ಆಯೋಜನೆಗೊಂಡಿತ್ತು
  • ಇದರ ಮುಖ್ಯ ಅತಿಥಿಯಾಗಿ ವಿ.ಸೋಮಣ್ಣ ಭಾಗಿಯಾಗಿದ್ದಾರೆ.
  • ನೀತಿ ಸಂಹಿತೆ ಘೋಷಣೆಯಾದ ಬಳಿಕ ಸೋಮಣ್ಣ ಜಿಲ್ಲೆಗೆ ಅವರ ಮೊದಲ ಬೇಟಿ ಇದಾಗಿದೆ
ಟಿಕೆಟ್ ಘೋಷಣೆಗೂ ಮುನ್ನವೇ ಚಾ.ನಗರಕ್ಕೆ ಸೋಮಣ್ಣ ಗ್ರಾಂಡ್ ಎಂಟ್ರಿ!! ರೈತ ಸಮಾವೇಶದಲ್ಲಿ ಭಾಗಿ title=

Karnataka Assembly Elections 2023: ಪುತ್ರ ಹಾಗೂ ಚಾಮರಾಜನಗರದಲ್ಲಿ ತಾವು ಸ್ಪರ್ಧಿಸುವ ಇಂಗಿತ ಹೊಂದಿರುವ ವಸತಿ ಸಚಿವ ವಿ‌.ಸೋಮಣ್ಣ ಅವರಿಂದು ಚಾಮರಾಜನಗರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದು ರೈತ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಚಾಮರಾಜನಗರ ಬಿಜೆಪಿ ವತಿಯಿಂದ  ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ರೈತ ಸಮಾವೇಶ ಆಯೋಜನೆಗೊಂಡಿದ್ದು ಇದರ ಮುಖ್ಯ ಅತಿಥಿಯಾಗಿ ವಿ.ಸೋಮಣ್ಣ ಭಾಗಿಯಾಗಿದ್ದಾರೆ. 

ಇದನ್ನೂ ಓದಿ- Karnataka Assembly Eelection: 2 ದಶಕದ ಬಳಿಕ ಕಮಲ‌ ಅರಳಿಸುವ ಸರ್ಕಸ್- ಚಾ.ನಗರಕ್ಕೆ ಸೋಮಣ್ಣ ಅಭ್ಯರ್ಥಿ!?

ನೀತಿ ಸಂಹಿತೆ ಘೋಷಣೆಯಾದ ಬಳಿಕ ಸೋಮಣ್ಣ ಜಿಲ್ಲೆಗೆ ಅವರ ಮೊದಲ ಬೇಟಿ ಇದಾಗಿದ್ದು ಅವರ ಅಭಿಮಾನಿಗಳು ಜಿಲ್ಲೆಯ ನಾಲ್ಕೈದು ಕಡೆ ಪಟಾಕಿ ಸಿಡಿಸಿ, ಹೂಗಳನ್ನು ಎರಚಿ ಸ್ವಾಗತ ಕೋರಿರುವುದು ಸೋಮಣ್ಣ ಚಾಮರಾಜನಗರಕ್ಕೆ  ಬರುತ್ತಾರೆ ಎಂಬ ಊಹಾಪೋಹಕ್ಕೆ ಇಂಬು ಕೊಟ್ಟಿದೆ. 

ಇದನ್ನೂ ಓದಿ- Go Back Somanna : ಸೋಮಣ್ಣ ಅಸೌಜನ್ಯ ನಡತೆಗೆ ಸಿಟ್ಟಾದ ಗ್ರಾಮಸ್ಥರು : ಮಾತು ತಪ್ಪಿದರೆ ಗೋ ಬ್ಯಾಕ್ ಸೋಮಣ್ಣ ಎಚ್ಚರಿಕೆ!!

ಇನ್ನು, ಕಾರ್ಯಕ್ರಮ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೈಕಮಾಂಡ್ ಬಳಿ ನನ್ನ ಅಭಿಪ್ರಾಯ ನಾನು ತಿಳಿಸಿದ್ದೇನೆ, ನಾನು ಗೋವಿಂದರಾಜ ನಗರದಲ್ಲಿ ನಿಲ್ಲಬೇಕೇ- ಬೇರೆ ಕಡೆ ಎಲ್ಲಿ ನಿಲ್ಲಬೇಕೆಂದು ಹೈ‌ಕಮಾಂಡ್ ನಿರ್ಧರಿಸಲಿದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News