ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ! ಮಂಡ್ಯದಲ್ಲಿ ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ

Karnataka Election 2023 : ಮಂಡ್ಯದಲ್ಲಿ ಮೂಲ ಹೊಸಬರಿಗೆ ಅವಕಾಶ  ನೀಡಲಾಗಿದ್ದು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಉಂಟಾಗಿದೆ.

Written by - Ranjitha R K | Last Updated : Apr 12, 2023, 11:05 AM IST
  • ಬಿಜೆಪಿಯ ಮೊದಲ ಪಟ್ಟಿ ನಿನ್ನೆ ಬಿಡುಗಡೆ
  • ಇದೀಗ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನ
  • ಮಂಡ್ಯದಲ್ಲಿ ಹೊಸ ಮುಖಗಳಿಗೆ ಮಣೆ
ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ! ಮಂಡ್ಯದಲ್ಲಿ ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ  title=

ಮಂಡ್ಯ : Karnataka Election 2023 : ಬಹು ನಿರೀಕ್ಷಿತ ಬಿಜೆಪಿಯ ಮೊದಲ ಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಇದೀಗ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಆಕಾಂಕ್ಷಿತರಿಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಮೂಲ ಬಿಜೆಪಿಗರ ಬದಲಿದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದು ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಜಿಲ್ಲೆಯಲ್ಲಿ ಹೊಸಬರಿಗೆ ಅವಕಾಶ : 
ಮಂಡ್ಯದಲ್ಲಿ ಮೂಲ ಹೊಸಬರಿಗೆ ಅವಕಾಶ  ನೀಡಲಾಗಿದ್ದು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಉಂಟಾಗಿದೆ. ಫೈಟರ್ ರವಿ, ನಂಜುಂಡೇಗೌಡ, ಚಂದಗಾಲು ಶಿವಣ್ಣ, ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ನೀಡಿಲ್ಲ.

ಇದನ್ನೂ ಓದಿ : "ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆಯಬಹುದು" : ಜಗದೀಶ್‌ ಶೆಟ್ಟರ್‌

ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ :  
ನಾಗಮಂಗಲದಿಂದ ಟಿಕೆಟ್ ಸಿಗುವ ನೀರೀಕ್ಶೆಯಲ್ಲಿದ್ದ ಫೈಟರ್ ರವಿಯ ನೀರೀಕ್ಷೆ ಹುಸಿಯಾಗಿದೆ. ಇದರಿಂದಾಗಿ ಇದೀಗ ಫೈಟರ್ ರವಿ  ಬಂಡಾಯ ಏಳುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ, ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಅಶ್ವಿನ್ ಗೌಡ ಕೂಡಾ ನಿರಾಸೆಯಾಗಿದೆ. ಇನ್ನು ಈ ಬಾರಿ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದ ಎಲ್. ಆರ್. ಶಿವರಾಮೇಗೌಡ ಆಸೆಗೂ ತಣ್ಣೀರೆರೆಚಿದೆ. ಶಿವರಾಮೇಗೌಡ ಬದಲಿಗೆ ಅವರ ಪತ್ನಿ ಸುಧಾ ಶಿವರಾಮ್ ಗೆ ಟಿಕೆಟ್ ನೀಡಲಾಗಿದ್ದು, ಶಿವರಾಮೇಗೌಡ ರಾಜಕೀಯ ಜೀವನಕ್ಕೆ ಬ್ರೇಕ್ ಹಾಕಲಾಗಿದೆ ಎಂದೇ ಹೇಳಬಹುದು.  

ಮಂಡ್ಯದಿಂದ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವವರು :   
ಮಂಡ್ಯ - ಅಶೋಕ್ ಜಯರಾಂ, 
ಮದ್ದೂರು -ಎಸ್.ಪಿ.ಸ್ವಾಮಿ
ಮೇಲುಕೋಟೆ - ಡಾ.ಇಂದ್ರೇಶ್ 
ಶ್ರೀರಂಗಪಟ್ಟಣ - ಸಚ್ಚಿದಾನಂದ
ಮಳವಳ್ಳಿ - ಮುನಿರಾಜುಗೆ 
ನಾಗಮಂಗಲ - ಸುಧಾ ಶಿವರಾಮ್
ಕೆ. ಆರ್ ಪೇಟೆ - ನಾರಾಯಣ ಗೌಡ 

ಇದನ್ನೂ ಓದಿ : ಬಳ್ಳಾರಿ ನಗರ ಕ್ಷೇತ್ರದಲ್ಲಿ ಭಾವ- ನಾದಿನಿ ನಡುವೆ ಗದ್ದುಗೆಗಾಗಿ ಫೈಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News