"ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನೆಹರು ಅವರು ಮಾಡದೇ ಹೋಗಿರುತ್ತದ್ದರೆ ,ಮೋದಿ ಪ್ರಧಾನಿ ಆಗುತ್ತಿರಲ್ಲಿಲ್ಲ"

ನೆರೆಹೊರೆಯ ದೇಶದ ಸರ್ವಧಾಕಾರಿ ಸರ್ಕಾರವನ್ನು ನೋಡಿ,  ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು  ನೆಹರೂ ಅವರು ಮಾಡದೇ ಹೋಗಿರುತ್ತದ್ದರೆ, ಮೋದಿ ಪ್ರಧಾನಿ ಆಗುತ್ತಿರಲ್ಲಿಲ್ಲ, ಶಾ ಸಚಿವನು ಆಗುತ್ತಿರಲ್ಲಿಲ್ಲ ಹಾಗೇ ನಾನು ಪ್ರತಿಪಕ್ಷ ನಾಯಕನು ಆಗುತ್ತಿರಲಿಲ್ಲ. ಇದೆಲ್ಲಾ ಕೊಡುಗೆ ಕಾಂಗ್ರೆಸ್‌ ಪಕ್ಷದ್ದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ.

Written by - Zee Kannada News Desk | Last Updated : Apr 30, 2023, 06:28 PM IST
  • ಗಾಂಧೀ, ನೆಹರೂ, ಪಟೇಲ್‌ , ಅಂಬೇಡ್ಕರ್‌ ಇವೆಲ್ಲರಿಗೂ ಕಾಂಗ್ರೆಸ್‌ ಎಂದಿಗೂ ಮರೆಯಲ್ಲ,
  • ಬಿಜೆಪಿ ಅವರು ದೇಶಭಕ್ತರು ಅಂತ ಹೇಳ್ತಾರೆ, ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್‌ ಮತ್ತು ಬಿಜೆಪಿಯ ಕೊಡುಗೆಯೇನು? ಏನು ಇಲ್ಲ .
  • ಈ ದೇಶಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದವರಿಗೆ ಬೈಯ್ಯೊದು ಒಂದೇ ಬಿಜೆಪಿಯ ಕೆಲಸ.
"ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು  ನೆಹರು ಅವರು ಮಾಡದೇ ಹೋಗಿರುತ್ತದ್ದರೆ ,ಮೋದಿ ಪ್ರಧಾನಿ ಆಗುತ್ತಿರಲ್ಲಿಲ್ಲ" title=
file photo

ಬೆಂಗಳೂರು: ನೆರೆಹೊರೆಯ ದೇಶದ ಸರ್ವಧಾಕಾರಿ ಸರ್ಕಾರವನ್ನು ನೋಡಿ,  ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು  ನೆಹರೂ ಅವರು ಮಾಡದೇ ಹೋಗಿರುತ್ತದ್ದರೆ, ಮೋದಿ ಪ್ರಧಾನಿ ಆಗುತ್ತಿರಲ್ಲಿಲ್ಲ, ಶಾ ಸಚಿವನು ಆಗುತ್ತಿರಲ್ಲಿಲ್ಲ ಹಾಗೇ ನಾನು ಪ್ರತಿಪಕ್ಷ ನಾಯಕನು ಆಗುತ್ತಿರಲಿಲ್ಲ. ಇದೆಲ್ಲಾ ಕೊಡುಗೆ ಕಾಂಗ್ರೆಸ್‌ ಪಕ್ಷದ್ದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Pragathi Rishab Shetty: ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ...50 ವರ್ಷದ ಹಳೆಯ ಸೀರೆಯುಟ್ಟು ಕಂಗೊಳಿಸಿದ ಕಾಂತಾರ ರಾಣಿ!

ಈ ಚುನಾವಣೆ ಮಹತ್ವದ ಚುನಾವಣೆ, ನಾವೆಲ್ಲಾಒಗ್ಗಟ್ಟಾಗಿ ಮತ್ತು ಒಮ್ಮತದಿಂದ  ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ, ನಾವು ಪ್ರಯತ್ನ ಮಾಡದೇ ಹೋದರೆ, ಮುಂಬರುವ ಹೊಸ ಪೀಳಿಗೆಗೆ ಕುತ್ತು ಬರುವ ಸಾಧ್ಯತೆ ಮತ್ತು ಆತಂಕವಿದೆ.ಕಾಂಗ್ರೆಸ್‌ ಪಕ್ಷ್ಕವು 138 ವರ್ಷಗಳ ತನ್ನದೇ ಆದ ಇತಿಹಾಸದ ಮೂಲಕ ತತ್ವ ಸಿದ್ದಾಂತದಡಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಕಾಗಿ ಗಾಂಧೀಜೀ ಅವರ ನೇತೃತ್ವದಲ್ಲಿ ಹೋರಾಟವನ್ನು ಮಾಡಿ ನಾವು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎಂದು ಹೇಳಿದರು.

ನೆಹರೂ, ಪಟೇಲ್‌‌, ಬೋಸ್ ಇಂತಹ ಅನೇಕ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾರಣಕ್ಕಾಗಿ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಪ್ರಜಾಪ್ರಭುತ್ವದ ಉಳಿಸಿದ್ದೇವೆ, ದೇಶದ ಸಂವಿಧಾನವನ್ನು ರಕ್ಷಣೆ ಮಾಡಿ, ಎಲ್ಲರಿಗೂ ಸರಿಸಮಾನವಾದ ಸ್ಥಾನಮಾನಗಳನ್ನು ಒದಗಿಸಿಕೊಟ್ಟು, ಮೂಲಭೂತ ಹಕ್ಕುಗಳನ್ನು ಸಿಕ್ಕಿರುವಂತಹದ್ದು ಈ ದೇಶದ ಸಂವಿಧಾನದಿಂದ ಎಂದು ತಿಳಿಸಿದರು.

ಗಾಂಧೀ, ನೆಹರೂ, ಪಟೇಲ್‌ , ಅಂಬೇಡ್ಕರ್‌ ಇವೆಲ್ಲರಿಗೂ ಕಾಂಗ್ರೆಸ್‌ ಎಂದಿಗೂ ಮರೆಯಲ್ಲ, ಬಿಜೆಪಿ ಅವರು ದೇಶಭಕ್ತರು ಅಂತ ಹೇಳ್ತಾರೆ,  ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್‌ ಮತ್ತು ಬಿಜೆಪಿಯ ಕೊಡುಗೆಯೇನು? ಏನು ಇಲ್ಲ . ಈ ದೇಶಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದವರಿಗೆ ಬೈಯ್ಯೊದು ಒಂದೇ ಬಿಜೆಪಿಯ ಕೆಲಸ. ಎಷ್ಟು ಬೈಯ್ಯೊಕೊಂಡು ನೀವು ಮತಕೇಳ್ತೀರಿ ಎಂದು ಟೀಕಿಸಿದರು.

ಪಂಡಿತ್‌ ನೆಹರೂ ಅವರು ಸಾರ್ವಜನಿಕ ಉದ್ಯಮ, ಹಳ್ಳಿಹಳ್ಳಿಗೆ ಶಾಲೆಗಳು, ಕಾಲೇಜುಗಳು, ಇಂಜಿನಿಯರ್‌, ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ದೇಶದಲ್ಲಿ  ಮೂಲಭೂತ ಸೌಕರ್ಯಗಳನ್ನು ಅಭಿವೃಧ್ಧಿಗೊಳಿಸಿದ್ದು ಕಾಂಗ್ರೆಸ್‌ ಸರ್ಕಾರ; ರಾಜ್ಯದಲ್ಲಿ 250000 ಸರ್ಕಾರಿ ಹುದ್ದೆ ಖಾಲಿ ಇದೆ. ರಾಜ್ಯದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಗುತ್ತಲೇ ಇದೆ. ಕೇಂದ್ರದಲ್ಲೂ 30 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಸರ್ಕಾರ ಬಗ್ಗೆ ಗಮನಹರಿಸಿಲ್ಲ 2014ರಲ್ಲಿ ಬಿಜೆಪಿ ಪಕ್ಷ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಅದರಂತೆ ಆಗಿದ್ದರೆ ಇದುವರೆಗೆ ಬರೋಬ್ಬರಿ 15 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ನೀವೆಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ..? ಹೇಳಿದ ಆಶ್ವಾಸನೆ ಈಡೇರಿಸಿದ್ದೀರಾ.  ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಸರ್ಕಾರಿ ಉದ್ಯೋಗಗಳು ಕೂಡಾ ಕುಸಿಯುತ್ತಿವೆ. ಹೀಗಿರುವಾಗ ವಿದ್ಯಾವಂತ ನಿರುದ್ಯೋಗಿಗಳು ಬದುಕುವುದು ಹೇಗೆ..? ಅವರಿಗೆ ಉದ್ಯೋಗ ಕೊಡವವರು ಯಾರು ? ಎಂದು ಪ್ರಶ್ನಿಸಿದರು.

ಮಹಿಳೆಯರಿಗೂ ಈ ಸರ್ಕಾರ ಮೋಸ ಮಾಡಿದೆ.ಬೆಲೆಯೇರಿಕೆಯಿಂದಾಗಿ ಜನ ತತ್ತರಿಸಿದ್ದಾರೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರವಿದ್ದಾಗ 450 ರೂ, ಇತ್ತು ಅಂದು 1100 ರೂ. ಇದೆ ಜನರಿಗೆ ಕಷ್ಟವಾಗುತ್ತಿದೆ. ಜನರ ಕಷ್ಟಗಳಿಗೆ ಕಿವಿಯಾಗುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ.ಹಳೆ ಡಬ್ಬಿಗಳಿಗೆ ಬಣ್ಣಬಳಿದು,  ಅದನ್ನು ಮೋದಿ ಅವರು ಹಸಿರು ನಿಶಾನೆ ತೋರಿಸುವುದೇ  ಮೋದಿ ಸಾಧನೆ. “ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಕುರಿತು ಬಿಜೆಪಿಯವರು ಹೇಳುವುದಿಲ್ಲ. ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುತ್ತಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆ‌ಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್

ರಾಜ್ಯದಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗದು ಎಂದು ಇಡೀ ದೇಶಕ್ಕೆ ಗೊತ್ತಾಗಿದೆ.  ರಾಜ್ಯದ ಬಿಜೆಪಿ ಆಡಳಿತ ಎಂದರೆ ಅದೊಂದು ಕಮೀಷನ್ ಸರ್ಕಾರ ಎನ್ನುವಂತಾಗಿದೆ. ಗುಣಮಟ್ಟದ ಕೆಲಸನೇ ಇಲ್ಲ ಈ ರೀತಿಯಯ ಕಮಿಷನ್‌ ನಿಂದ ಗುಣಮಟ್ಟ ಹೇಗೆ ಕಾಪಡೋದು?  ಶೇಕಡಾ 40% ಕೊಟ್ಟರೆ ಎಲ್ಲ ಕೆಲಸ ಆಗುತ್ತಿದ್ದವು. ಎಲ್ಲ ಕ್ಷೇತ್ರಗಳಲ್ಲೂ ಹಣ ಕೊಡದೇ ಯಾವುದೇ ಕೆಲಸಗಳು ಈ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ. ಬಿಜೆಪಿ ಅವರ ಆಡಳಿತ ಕಳಂಕಿತ, ಭ್ರಷ್ಟ ಆಧಾರಿತವಾಗಿರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕಕ್ಕೆ ಮೋದಿ ಕೊಡುಗೆ ಏನು? ಸಾರ್ವಜನಿಕ ಉದ್ಯಮ ಸ್ಥಾಪಿಸಿದ್ದಾರ?  ಕನ್ನಡ ನಾಡಿಗೆ ಮೋದಿ ಕೊಡುಗೆ ಶೂನ್ಯ. 
ಆಹಾರ ಭಧ್ರತಾ ಕಾನೂನು ತಂದದ್ದು ಕಾಂಗ್ರೆಸ್‌ ಸರ್ಕಾರ. ಇಂದು ಎಲ್ಲರಿಗೂ ಆಹಾರ ಭದ್ರತಾ ಖಾತ್ರಿಯಾಗಿದೆ. ನಾವು ನುಡಿದಂತೆ ನಡೆದಿದ್ದೇವೆ, ನಾವು ಸುಳ್ಳು ಹೇಳಲ್ಲ. 5 ಗ್ಯಾರಂಟಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಹಾಗೆಯೇ ಕಾಂಗ್ರೆಸ್ ಪಕ್ಷ ಇದೀಗ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅದರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಅಧಿಕಾರದಲ್ಲಿದ್ದಾಗ ಕೇಂದ್ರ ಮತ್ತು ರಾಜ್ಯದಲ್ಲೂ ನಾವು ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿ ಅವರು ಹೇಳೊದೇ ಒಂದು ಮಾಡೋದೆ ಇನ್ನೊಂದು ಎಂದು ಲೇವಡಿ ಮಾಡಿದರು.

ಕರ್ನಾಟಕ ಇದು ಪ್ರಗತಿಪರ ರಾಜ್ಯ, ಅದರಲ್ಲೂ ಶಿವಮೊಗ್ಗ ಜಿಲ್ಲೆ ಕೇವಲ ಬುದ್ದೀಜೀವಿ ಮಾತ್ರವಲ್ಲದೇ ಜನಸಾಮಾನ್ಯನ ಕಷ್ಟ, ಬವಣೆಗಳನ್ನು ಚಿಂತಿಸುವ ಮತ್ತು ಅರ್ಥೈಸುವ ಜಿಲ್ಲೆ. ಈ ಜಿಲ್ಲೆಯಲ್ಲೇ ಗೇಣಿದಾರರ ಚಳವಳಿ ಆರಂಭವಾದ್ದದ್ದೇ ಈ ಜಿಲ್ಲೆಯಲ್ಲಿ, ಅದು ಮುಂದುವರೆದು ಇಂದಿರಾ ಗಾಂಧಿ, ದೇವರಾಜ ಅರಸು ಅವರು ಭೂ ಸುಧಾರಣೆಯನ್ನು ಕಾನೂನು ರೂಪದಲ್ಲಿ ತಂದು ದೇಶದ ಲಕ್ಷಾಂತರ ಜನರಿಗೆ ಉಳುವವನೇ ಭೂಮಿಯ ಓಡೆಯ ಎಂಬ ಕಾರ್ಯಕ್ರಮ ತಂದು ಲಕ್ಷಾಂತರ ಗೇಣಿದಾರರನ್ನು ಭೂ ಮಾಲಕರನ್ನು ಮಾಡಿದ್ದರು. ಇದೊಂದು ದೊಡ್ಡ ಕ್ರಾಂತಿ,  ಇದು ಯಾರೂ ಮಾಡಿದ್ದು ಮೋದಿ ಮಾಡಿದ್ದ? ಅಥಾವಾ ಶಾ ಮಾಡಿದ್ದ ? ಏನ್ರೀ ನಿಮ್ಮ ಕೊಡುಗೆ ಪರಸ್ಪರ ಧರ್ಮದ ನಡುವೇ ಕಿಚ್ಚು ಹಚ್ಚುವುದೇ ನಿಮ್ಮ ಕೆಲಸ,  ಇದು ಬಿಟ್ಟು ಬಿಜೆಪಿ ಅವರಿಗೆ ಬೇರೆ ಕೆಲಸನೇ ಇಲ್ಲ ಎಂದು ಬಿಜೆಪಿಯ ವಿರುಧ್ಧ ಹರಿಹಾಯ್ದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾವಾಗ ಗಲಾಟೆ ಆಗಿದೆ ತೋರಿಸಿ. ಶಾ ಅವರು ತಕ್ಷಣ ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನಿಲ್ಲಿಸಲಿ. ಬಡ ಜನರೊಳಗಡೆ ಬಿಜೆಪಿ ಅವರು ಜಗಳ ಹಚ್ಚತ್ತಾ ಇದ್ದಾರೆ ಎಂದು ದೂರಿದರು.

ನಮ್ಮ ಹೋರಾಟ ನ್ಯಾಯಕ್ಕಾಗಿರುವ ಹೋರಾಟ, ಈ ದೇಶದ ಜಾತ್ಯತೀತತೆಯ ಉಳಿವಿಗೋಸ್ಕರ ಇರುವ ಹೋರಾಟ. ನಾನು ಮತ್ತು ರಾಹುಲ್‌ ಗಾಂಧೀ ಯಾರೀಗೂ ಹೆದರುವವರು ಅಲ್ಲ. ಈ ದೇಶದಲ್ಲಿ ಜನ ಸುಖ ಸಂತೋಷ, ನೆಮ್ಮದಿಯಿಂದ ಕೂಡಿ ಬಾಳಬೇಕೆಂಬುದೇ ಕಾಂಗ್ರೆಸ್‌ ಪಕ್ಷದ ಪರಮ ಗುರಿ. ಆದರೆ ಬಿಜೆಪಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಜಾತಿ ಜಾತಿಗಳ ಮಧ್ಯೆ ಜಗಳ ತಂದು ದಂಗೆ ಶುರು ಮಾಡೋದೆ ಬಿಜೆಪಿಯ ಕೆಲಸ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಅಂತ ಕೇಳ್ತಾರೆ, ದೇಶದಲ್ಲಿ ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರ. ಕಾಂಗ್ರೆಸ್‌ ಪಕ್ಷ ಈ ದೇಶದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ ಸಂವಿಧಾನದ ಮೂಲಕ ಈ ದೇಶದಲ್ಲಿ ಪ್ರಜಾಪ್ರಭುತ್ವದ ಭದ್ರಬುನಾದಿ ಹಾಕಿದ ಕಾರಣದಿಂದಾಗಿಯೇ ನೀವು ಇಂದು ಪ್ರಧಾನಮಂತ್ರಿಯ ಸ್ಥಾನದಲ್ಲಿ ಕೂರಿರುವುದು. ಅದಕ್ಕಾಗಿ ನೀವು  ಇಂದು ಕಾಂಗ್ರೆಸ್‌ ಪಕ್ಷವನ್ನು ಮೋದಿ ಅವರು ಪೂಜಿಸಬೇಕು ಏಕೆಂದರೆ ಸಂವಿಧಾನದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಯಾಗಿ ಇಟ್ಟು ಅದರ ಬೇರನ್ನು ಆಳವಾಗಿ ನೆಹರೂ ಅವರು ಹಾಕಿ ಅಂಬೇಡ್ಕರ್‌ ಸಂವಿಧಾನವನ್ನು ಬರೆದು ಮಾಡಿ ಕೊಟ್ಟಿದ್ದಾರೆ. ಅದಕ್ಕೇ ನೀವು ದಿನನಿತ್ಯ 10 ಸಲ ಅಲ್ಲ ನೂರ ಸಲ ನೀವು ನಮಸ್ಕಾರ ಮಾಡಬೇಕು. 
ಸರ್ಕಾರದ ಆಸ್ತಿಯನ್ನು ಮಾರೋದು, ಸರ್ಕಾರದ ಆಸ್ತಿಯನ್ನು ಒಂದೇ ವ್ಯಕ್ತಿಗೆ ಕೊಡೋದು, ದುಡ್ಡು ಜನರಿದ್ದು, ಜನರ ದುಡ್ಡುನ್ನು ದೊಡ್ಡ ಕುಳಗಳಿಗೆ ಕೊಟ್ಟದೇ ಬಿಜೆಪಿಯ ಸಾಧನೆ.  ಎರಡು ವರ್ಷಗಳಲ್ಲಿ ಹಠಾತ್ತನೆ 12 ಲಕ್ಷ ಕೋಟಿ ರೂಪಾಯಿ ಆಸ್ತಿ ಹೆಚ್ಚಳವಾಗಿದೆ ಆದಾನಿಯ ಸಂಪತ್ತಿನಲ್ಲಿ. ಇದನ್ನು ಪ್ರಶ್ನಿಸಿದ ರಾಹುಲ್‌ ಗಾಂಧಿ ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಸಂಸತ್ತಿನಲ್ಲಿ ನಾನು ಮತ್ತು ರಾಹುಲ್‌ ಗಾಂಧಿ ಮಾಡಿದ  ಭಾಷಣಗಳನ್ನು ಕಿತ್ತು ಎಸೆಯುತ್ತಿದ್ದಾರೆ. ಸತ್ಯವನ್ನು ಮೋದಿ ಸರ್ಕಾರಕ್ಕೆ ಎದುರಿಸಲು ತಾಕತ್ತು ಇಲ್ಲ ಎಂದು ಹೇಳಿದರು

ರಾಜ್ಯದಲ್ಲೂ ಬಿಜೆಪಿ ಸರ್ಕಾರ ಲಂಚ, ಮಿತಿಮೀರಿದ ಭ್ರಷ್ಟಾಚಾರ, ಪಠ್ಯ ಬದಲಾವಣೆ ಹಾಗೂ ಇತಿಹಾಸ ತಿರುಚಿದ್ದೇ ಈ ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News