ʼಭಜರಂಗಿʼಯನ್ನ ಕೆಣಕಿ ಯಾರೂ ಉಳಿದಿಲ್ಲ, ಲಂಕೆಯಂತೆ ʼಕಾಂಗ್ರೆಸ್‌ ನಾಶʼವಾಗುತ್ತೆ..!

ಇವರ ಯೋಗ್ಯತೆಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಬಿಟ್ಟಿರಲಿಲ್ಲ. ಕಾಶಿ ಕಾರಿಡಾರ್ ಯೋಜನೆ ಮೋದಿ ಬಂದ ಮೇಲೆ ಆಗಿದ್ದು. ಅವನ್ಯಾರೋ ಆಂಜನೇಯ ಹುಟ್ಟಿದ್ದೇ ಇಲ್ಲಿ ಅಲ್ಲ ಅಂತಾನೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಇಂದು ಆಂಜನೇಯನನ್ನು ಒಪ್ಪಿಕೊಳ್ಳುತ್ತಾರೆ. ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದ್ದ, ರಾವಣನ ಸರ್ವ ನಾಶವಾಯ್ತು, ಈಗ ಬಜರಂಗದಳವನ್ನು ಕೆಣಕಿ ಕಾಂಗ್ರೆಸ್‌ ರಾಜಕೀಯವಾಗಿ ನಾಶವಾಗುತ್ತದೆ ಎಂದು ಶಾಸಕ ಸಿ.ಟಿ. ರವಿ ಗುಡುಗಿದರು.

Written by - Krishna N K | Last Updated : May 4, 2023, 06:40 PM IST
  • ಭಜರಂಗಿಯನ್ನು ಕೆಣಕಿ ಯಾರೂ ಉಳಿದವರಿಲ್ಲ.
  • ರಾವಣ ಭಜರಂಗಿಯನ್ನು ಕೆಣಕಿದ್ದಕ್ಕೆ ಲಂಕೆ ಸರ್ವ ನಾಶವಾಯ್ತು.
  • ಕಾಂಗ್ರೆಸ್ ಈಗ ಬಜರಂಗದಳವನ್ನು ಕೆಣಕಿದ್ದು, ರಾಜಕೀಯವಾಗಿ ನಾಶವಾಗುತ್ತದೆ ಎಂದ ಸಿಟಿ ರವಿ.
ʼಭಜರಂಗಿʼಯನ್ನ ಕೆಣಕಿ ಯಾರೂ ಉಳಿದಿಲ್ಲ, ಲಂಕೆಯಂತೆ ʼಕಾಂಗ್ರೆಸ್‌ ನಾಶʼವಾಗುತ್ತೆ..! title=

ಚಿಕ್ಕಮಗಳೂರು : ಭಜರಂಗಿಯನ್ನು ಕೆಣಕಿ ಯಾರೂ ಉಳಿದವರಿಲ್ಲ. ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದ್ದ, ರಾವಣನ ಸರ್ವ ನಾಶವಾಯ್ತು, ಈಗ ಬಜರಂಗದಳವನ್ನು ಕೆಣಕಿದ್ದಾರೆ, ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್‌ ವಿಚಾರವಾಗಿ ಶಾಸಕ ಸಿ.ಟಿ. ರವಿ ಕಿಡಿಕಾರಿದ್ದಾರೆ. 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದಕ್ಕೆ, ರಾವಣನ ಸರ್ವ ನಾಶವಾಯಿತು. ಆಂಜನೇಯನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಲಂಕೆಯನ್ನು ಸುಟ್ಟ ಹೊಯಿತು. ಈಗ ಬಜರಂಗದಳವನ್ನು ಕೆಣಕಿದ್ದಾರೆ, ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ವಿಥ್ ಡ್ರಾ ಮಾಡಿಕೊಳ್ಳಬೇಕು, ಕ್ಷಮೆ ಕೇಳಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

ಇದನ್ನೂ ಓದಿ: Photos: ವರುಣಾ ರೋಡ್ ಶೋದಲ್ಲಿ ಶಿವರಾಜಕುಮಾರ್, ಸಿದ್ದರಾಮಯ್ಯ ಮಿಂಚಿನ ಸಂಚಾರ

ಅಲ್ಲದೆ, ಬಜರಂಗದಳ ಡಿಜೆಹಳ್ಳಿ-ಕೆಜೆಹಳ್ಳಿ ತರ ಒಂದು ಪ್ರಕರಣ ಮಾಡಿದ್ಯಾ..? ಭಯೋತ್ಪಾದಕ ಚಟುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ಯಾ...? ಅಕ್ರಮ ಮತಾಂತರ, ಗೋ ಹತ್ಯೆ, ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಮಾಡಿರಬಹುದು ಅಷ್ಟೆ.. ಪ್ರತಿಭಟನೆಯಲ್ಲಿಯೂ ಕೂಡ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ಎಂದು ಘೋಷಣೆ ಕೂಗಿದ್ದಾರೆ. ಕಾಂಗ್ರೆಸಿಗರಿಗೆ ಜೈ ಶ್ರೀರಾಮ್, ಹರ-ಹರ ಮಹದೇವ ಅಂದ್ರೆ ಸಹಿಸೋದಕ್ಕೆ ಆಗಲ್ಲ. ಭಾರತ್ ಮಾತಾಕಿ ಜೈ ಅಂದ್ರೆ ಆರ್‌ಎಸ್‌ಎಸ್‌ನವರ ಎಂದು ಹೇಳುತ್ತಾರೆ. ಆ ಮನಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ. ಓಲೈಕೆ ರಾಜ ನೀತಿಗೂ ಒಂದು ಮಿತಿ ಇರುತ್ತೆ, ಇವರದ್ದು ಮಿತಿಮೀರಿದ ಒಲೈಕೆ ರಾಜ ನೀತಿ. ಪಿಎಫ್‌ಐ ಸೆಮಿಯಾ ಇನ್ನೊಂದು ರೂಪ, ತನಿಖಾ ಏಜೆನ್ಸಿಗಳೇ ಅದನ್ನ ಸ್ಪಷ್ಟಪಡಿಸಿವೆ ಎಂದು ಹೇಳಿದರು.

ಕೈ ವಿರುದ್ದ ಮಾತು ಮುಂದುವರೆಸಿದ ಸಿಟಿ ರವಿ, ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ. ಆ ಅಪಾಯಕಾರಿ ಮಾನಸಿಕ ಸ್ಥಿತಿ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಈ ದೇಶದಿಂದಲೇ ಕಾಂಗ್ರೆಸ್‌ ತೊಲಗಬೇಕು. ಇದನ್ನ ಮನಗಂಡಿ ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜಿಸಿ ಅಂದಿದ್ದರು. ಇವರು ಮಾಡಬಾರದ ಹಲ್ಕಟ್ ಕೆಲಸವನ್ನು ಮಾಡುತ್ತಾರೆ ಎಂದು ಮನಗಂಡು ಹೇಳಿದ್ದರು ಅನ್ಸತ್ತೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಡಿಕೆಶಿ ಹೆಲಿಕಾಪ್ಟರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್ ಪಕ್ಕದಲ್ಲೇ ಹುಲ್ಲಿಗೆ ಹೊತ್ತಿದ ಬೆಂಕಿ..!

ಇವರ ಯೋಗ್ಯತೆಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಬಿಟ್ಟಿರಲಿಲ್ಲ. ಕಾಶಿ ಕಾರಿಡಾರ್ ಯೋಜನೆ ಮೋದಿ ಬಂದ ಮೇಲೆ ಆಗಿದ್ದು. ಕಾಂಗ್ರೆಸ್ ನೀತಿಯೇ ಅಲ್ಪಸಂಖ್ಯಾತರನ್ನ ಹೋಲಿಕೆ ಮಾಡಿ, ಹಿಂದುಗಳನ್ನು ತುಳಿಯುವುದು. ಅವನ್ಯಾರೋ ಆಂಜನೇಯ ಹುಟ್ಟಿದ್ದೇ ಇಲ್ಲಿ ಅಲ್ಲ ಅಂತಾನೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಇಂದು ಆಂಜನೇಯನನ್ನು ಒಪ್ಪಿಕೊಳ್ಳುತ್ತಾರೆ. ಬಜರಂಗದಳ ಭಜರಂಗಿ ಬೇರೆ-ಬೇರೆ ಅಂತಾರೆ. ಹಾಗಾದ್ರೆ, ಭಾರತ ಬಿಟ್ಟರೆ ಭಾರತೀಯತೆ ಎಲ್ಲಿ ಇರುತ್ತೆ.. ಎಂದು ಶಾಸಕ ಸಿಟಿ ರವಿ ಪ್ರಶ್ನೆ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News