BSY vs BJP: ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ‘ಸಂತೋಷ ಕೂಟ’ ತಡೆ- ಕಾಂಗ್ರೆಸ್

ಬಿ.ಎಸ್.ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗೆ ಇಳಿಸಲು 'ಸಂಚು' ನಡೆಸಿ ಅದರಲ್ಲಿ ಎರಡೆರಡು ಬಾರಿ ಯಶಸ್ವಿಯೂ ಆಗಿದ್ದು ಬಿಜೆಪಿಯಲ್ಲಿರುವ ಇದೇ 'ಸಂತೋಷ ಕೂಟ’ವೆಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Mar 18, 2023, 08:29 PM IST
  • ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅಪಮಾನ ಇದೇ ಮೊದಲಲ್ಲ
  • ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ 'ಸಂತೋಷ ಕೂಟ' ಮೊದಲಿಂದಲೂ ಇದೆ
  • ಈ ‘ಸಂತೋಷ ಕೂಟ’ ಬಿಎಸ್‍ವೈ ಮೂಲೆಗುಂಪು ಮಾಡಲು, ಜೈಲಿಗೆ ಕಳುಹಿಸಲು ಸಕ್ರಿಯ ಪಾತ್ರ ವಹಿಸಿದೆ
BSY vs BJP: ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ‘ಸಂತೋಷ ಕೂಟ’ ತಡೆ- ಕಾಂಗ್ರೆಸ್ title=
‘ಸಂತೋಷ ಕೂಟ’ದಿಂದ BSY ಮೂಲೆಗುಂಪು!

ಬೆಂಗಳೂರು: ‘ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅಪಮಾನ ಇದೇ ಮೊದಲಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ 'ಸಂತೋಷ ಕೂಟ'  ಮೊದಲಿಂದಲೂ ಇದೆ. ಈ 'ಸಂತೋಷ ಕೂಟ' ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅಧಿಕಾರ ಸಿಗದಂತೆ ಮಾಡಲು, ಅಧಿಕಾರದಿಂದ ಇಳಿಸಲು, ಮೂಲೆಗುಂಪು ಮಾಡಲು ಕೊನೆಗೆ ಜೈಲಿಗೆ ಕಳುಹಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

#BSYvsBJP ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಶಕಗಳ ಕಾಲದ ಹೋರಾಟದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದು 'ಮುಖ್ಯಮಂತ್ರಿ' ಹುದ್ದೆಗೆ ಏರಿದವರು ಯಡಿಯೂರಪ್ಪ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು 'ಸಂಚು' ನಡೆಸಿ ಅದರಲ್ಲಿ ಎರಡೆರಡು ಬಾರಿ ಯಶಸ್ವಿಯೂ ಆಗಿದ್ದು ಬಿಜೆಪಿಯಲ್ಲಿರುವ ಇದೇ 'ಸಂತೋಷ ಕೂಟ’ವೆಂದು ಟೀಕಿಸಿದೆ.

ಇದನ್ನೂ ಓದಿ: ‘ಹರ್ ಘರ್ ಗಂಗಾ’ ಯೋಜನೆಗೆ ಬಜೆಟ್’ನಲ್ಲಿ 12 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ: ಸಿಎಂ ಬೊಮ್ಮಾಯಿ

‘2018ರ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ದಿಸಲು ತಯಾರಿ ನಡೆಸಿದ್ದರು. ಇದಕ್ಕೆ ಕಾರ್ಯಕರ್ತರ ಬೆಂಬಲವೂ ಇತ್ತು. ಆದರೆ ಕೊನೇ ಕ್ಷಣದಲ್ಲಿ ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಲಿಲ್ಲ. ಇದರ ಹಿಂದೆ ಇದ್ದದ್ದು ಇದೇ 'ಸಂತೋಷ ಕೂಟ'ದ ಕೈವಾಡ’ವೆಂದು ಕಾಂಗ್ರೆಸ್ ಆರೋಪಿಸಿದೆ.

‘ಬಿಜೆಪಿಯಲ್ಲಿನ ಏಕೈಕ ಜನಪ್ರಿಯ ನಾಯಕ ಯಡಿಯೂರಪ್ಪ. ಪಕ್ಷವನ್ನು ಅಧಿಕಾರಕ್ಕೆ ತಂದ ಬಳಿಕ ಅವರಿಂದ ಪಕ್ಷದ ಹಿಡಿತ ಸಡಿಲಿಸಿ ಹಿಂಬಾಗಿಲ ಮೂಲಕ 'ಆರೆಸ್ಸೆಸ್' ಹೆಸರಲ್ಲಿ ಅನಾಯಾಸವಾಗಿ ಅಧಿಕಾರ ಚಲಾಯಿಸಲು ಯತ್ನಿಸಿದ್ದು ಇದೇ 'ಸಂತೋಷ ಕೂಟ'. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯ ಪ್ರವಾಹಕ್ಕೆ ಸಿಲುಕಿತು. ಇದರ ಬಗ್ಗೆ ಚರ್ಚಿಸಲು, ಪರಿಹಾರಕ್ಕೆ ಮೊರೆ ಇಡಲು ದೆಹಲಿಗೆ ಹೋದ ಯಡಿಯೂರಪ್ಪಗೆ ಪ್ರಧಾನಿ ಭೇಟಿಯ ಅವಕಾಶ ನಿರಾಕರಿಸಲಾಯ್ತು. ಒಂದಲ್ಲ ಎರಡಲ್ಲ ಹತ್ತಾರು ಬಾರಿ. ಇದಕ್ಕೆ ಕಾರಣ ದೆಹಲಿಯಲ್ಲಿ ನಿಯಂತ್ರಣ ಹೊಂದಿದ್ದ ಇದೇ 'ಸಂತೋಷ ಕೂಟ'’ವೆಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News