Karnataka Election 2023: ‘ತೆನೆ ಹೊತ್ತ ಮಹಿಳೆ’ಗೆ ಗಾಳ ಹಾಕುತ್ತಿದೆಯೇ BJP-CONG! ಬ್ಯಾಕ್ ರೂಂ ಆಪರೇಷನ್ ಸಕ್ಸಸ್ ಆಗುತ್ತಾ?

Karnataka Election Result 2023: ಕರ್ನಾಟಕದಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಜನರು ತಮ್ಮ ನಿರ್ಧಾರವನ್ನು ಈಗಾಗಲೇ ನೀಡಿದ್ದಾರೆ. ಇನ್ನು 24 ಗಂಟೆಗಳಲ್ಲಿ ಕರ್ನಾಟಕದ ದೊರೆ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ. ಈ ಎಲ್ಲದರ ಮಧ್ಯೆ, ಎಕ್ಸಿಟ್ ಪೋಲ್‌ ಗಳು ವಿಧಾನಸಭೆಯ ಸೀಟುಗಳ ಹಂಚಿಕೆಯ ಬಗ್ಗೆ ಒಂದಿಷ್ಟು ಅಂದಾಜುಗಳನ್ನು ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಉಭಯ ನಾಯಕರ ಅಸಮಾಧಾನ ಹೆಚ್ಚಾಗಿದೆ.

Written by - Bhavishya Shetty | Last Updated : May 12, 2023, 10:41 AM IST
    • ಕರ್ನಾಟಕದಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಜನರು ತಮ್ಮ ನಿರ್ಧಾರವನ್ನು ಈಗಾಗಲೇ ನೀಡಿದ್ದಾರೆ.
    • 24 ಗಂಟೆಗಳಲ್ಲಿ ಕರ್ನಾಟಕದ ದೊರೆ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ.
    • ತೆರೆಮರೆಯಲ್ಲಿ ಸರ್ಕಾರ ರಚಿಸಲು ಸಮೀಕರಣಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ
Karnataka Election 2023: ‘ತೆನೆ ಹೊತ್ತ ಮಹಿಳೆ’ಗೆ ಗಾಳ ಹಾಕುತ್ತಿದೆಯೇ BJP-CONG! ಬ್ಯಾಕ್ ರೂಂ ಆಪರೇಷನ್ ಸಕ್ಸಸ್ ಆಗುತ್ತಾ? title=
Karnataka Election Result 2023

Karnataka Election Result 2023: ಕರ್ನಾಟಕದಲ್ಲಿ ಸದ್ಯ ಎಲ್ಲರ ಚಿತ್ತ ಫಲಿತಾಂಶದ ಮೇಲಿದೆ. ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಯಾರಾಗಬಹುದು ಮುಂದಿನ ಸಿಎಂ? ಎಂಬೆಲ್ಲಾ ಪ್ರಶ್ನೆಗಳು ಈಗ ಎದ್ದಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನಾಳೆ ಅಂದರೆ ಮೇ 13ರಂದು ಉತ್ತರ ಸಿಗಲಿದೆ.

ಇನ್ನು ಕರ್ನಾಟಕದಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಜನರು ತಮ್ಮ ನಿರ್ಧಾರವನ್ನು ಈಗಾಗಲೇ ನೀಡಿದ್ದಾರೆ. ಇನ್ನು 24 ಗಂಟೆಗಳಲ್ಲಿ ಕರ್ನಾಟಕದ ದೊರೆ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ. ಈ ಎಲ್ಲದರ ಮಧ್ಯೆ, ಎಕ್ಸಿಟ್ ಪೋಲ್‌ ಗಳು ವಿಧಾನಸಭೆಯ ಸೀಟುಗಳ ಹಂಚಿಕೆಯ ಬಗ್ಗೆ ಒಂದಿಷ್ಟು ಅಂದಾಜುಗಳನ್ನು ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಉಭಯ ನಾಯಕರ ಅಸಮಾಧಾನ ಹೆಚ್ಚಾಗಿದೆ. ಇದರ ನಡುವೆ ತೆರೆಮರೆಯಲ್ಲಿ ಸರ್ಕಾರ ರಚಿಸಲು ಸಮೀಕರಣಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IND vs PAK: 5 ಬಾರಿ ಇಂಡೋ-ಪಾಕ್ ಜಿದ್ದಾಜಿದ್ದಿ: ಐತಿಹಾಸಿಕ ಪಂದ್ಯಕ್ಕೆ ಅದೇ ಮೈದಾನ ಬೇಕೆಂದು ಹಠ ಹಿಡಿದ ಟೀಂ ಇಂಡಿಯಾ!

ಜೆಡಿಎಸ್ ಜೊತೆ ಮೈತ್ರಿಗೆ ಕಾರ್ಯಾಚರಣೆ!

ಮಾಧ್ಯಮ ವರದಿಗಳ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಮೈತ್ರಿಗೆ ಮುಂದಾಗಿವೆ ಎಂದು ಜೆಡಿಎಸ್ ಹೇಳಿಕೊಂಡಿದೆ. ಆದರೆ, ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಜೆಡಿಎಸ್ ವರಿಷ್ಠರೊಬ್ಬರು ಹೇಳಿದ್ದಾರೆ. ಜೆಡಿಎಸ್ ನಾಯಕ ತನ್ವೀರ್ ಅಹಮದ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ”ಪಕ್ಷವು ಮೈತ್ರಿ ಬಗ್ಗೆ ನಿರ್ಧರಿಸಿದೆ. ಅದನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು. ಜೆಡಿಎಸ್ ಬೆಂಬಲವಿಲ್ಲದೆ ಯಾವುದೇ ಪಕ್ಷ ಈ ಬಾರಿ ಸರ್ಕಾರ ರಚಿಸಲು ಸಾಧ್ಯವಿಲ್ಲ” ಎಂದು ಅಹಮದ್ ಹೇಳಿದ್ದಾರೆ.

ಬಹುತೇಕ ಎಕ್ಸಿಟ್ ಪೋಲ್‌ ಗಳನ್ನು ನೋಡಿ ಕರ್ನಾಟಕದಲ್ಲಿ ಜನಾದೇಶದ ಊಹಾಪೋಹವನ್ನು ಗಮನಿಸಿದರೆ, ಕಾಂಗ್ರೆಸ್ ಮತ್ತು ಬಿಜೆಪಿಯು ಮುಂದಿನ ವಿಧಾನಸಭೆಯ ಸಂದರ್ಭದಲ್ಲಿ ಸರ್ಕಾರ ರಚಿಸಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲೇ ಬೇಕು ಎಂಬ ಪರಿಸ್ಥಿತಿ ಇದೆ.

ಇನ್ನು ಕಳೆದ ಗುರುವಾರದಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮಾತುಕತೆ ನಡೆಸಿದರು.

ಇನ್ನೊಂದೆಡೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಿಜೆಪಿಯ ಕೇಂದ್ರ ನಾಯಕರ ಜತೆ ದೂರವಾಣಿ ಮೂಲಕ ಪಕ್ಷ ವಿಭಜನೆ ನಿರ್ಧಾರದ ವೇಳೆ ಸಂಭವನೀಯ ಸನ್ನಿವೇಶಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿಗೆ ಯಾವುದೇ ರೀತಿಯಲ್ಲಿ ಮ್ಯಾಜಿಕ್ ಫಿಗರ್ ಅನ್ನು ಮುಟ್ಟಲು ಸಾಧ್ಯವಾಗದಿದ್ದರೆ, ಅದು ಮುಂದೆ ಸ್ವತಂತ್ರ ನಾಯಕರು ಮತ್ತು ಜೆಡಿಎಸ್ ವಿಜೇತ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯಲು ಮುಂದಾಗುತ್ತದೆ.

ಇನ್ನು ಈ ಮಧ್ಯೆ ಬುಧವಾರದ ಮತದಾನದ ನಂತರ ಬಂದ ಪ್ರಾಥಮಿಕ ವರದಿಯಲ್ಲಿ ಪಕ್ಷವು ಸಂಪೂರ್ಣ ಬಹುಮತ ಪಡೆಯುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಎಕ್ಸಿಟ್ ಪೋಲ್‌ ಗಳನ್ನು ಪಕ್ಷವು ಸಂಪೂರ್ಣವಾಗಿ ನಂಬುವುದಿಲ್ಲ. ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ. ಯಾವುದೇ ರೀತಿಯ ಆಪರೇಷನ್ ಕಮಲ ನಡೆಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

2018 ರಲ್ಲಿ ಏನಾಗಿತ್ತು?

2018 ರ ಚುನಾವಣಾ ಫಲಿತಾಂಶಗಳ ಪ್ರಕಾರ, ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಆದರೆ ಬಹುಮತಕ್ಕೆ ಇನ್ನೂ ಕೆಲವು ಸ್ಥಾನಗಳ ಕೊರತೆಯಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಹೊಂದಿತ್ತು. ಬಿಜೆಪಿಯನ್ನು ಹೊರಗಿಡಲು ಕಾಂಗ್ರೆಸ್ ಜೆಡಿಎಸ್‌’ಗೆ ಸಿಎಂ ಸ್ಥಾನ ನೀಡಿ ಸಮ್ಮಿಶ್ರ ಸರ್ಕಾರವನ್ನು ಜಾರಿ ಮಾಡಿತು. ಇದಾದ ನಂತರ ಎಚ್.ಡಿ.ಕುಮಾರಸ್ವಾಮಿ ಸಿಎಂ ಆದರು.

ಇದನ್ನೂ ಓದಿ: ಶಿಕಾರಿಪುರ ಪಟ್ಟಣದ ಆಡಳಿತ ಸೌಧದಲ್ಲಿ ಮತದಾನ ಮಾಡಿದ ಬಿ.ಎಸ್ ಯಡಿಯೂರಪ್ಪ..!

ಆದರೆ ಇದೀಗ ಅತಂತ್ರ ವಿಧಾನಸಭೆ ಬಂದರೆ ಜೆಡಿಎಸ್ ಏನು ಮಾಡಲಿದೆ? ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ಅವರಿಗೆ ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೋ ಇಲ್ಲವೋ? ಭವಿಷ್ಯದ ರಾಜಕೀಯ ಲಾಭ-ನಷ್ಟ ನೋಡಿ ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಲಿದೆಯೇ? ಇಂತಹ ಹಲವು ಪ್ರಶ್ನೆಗಳು ಮತ್ತು ರಾಜಕೀಯ ಊಹಾಪೋಹಗಳು ಕರ್ನಾಟಕದ ರಾಜಕೀಯ ಬೀದಿಗಳಲ್ಲಿ ಭುಗಿಲೆದ್ದಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News