"ವರುಣಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣ ಇದೆ"

ವರುಣ ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಲು ಉತ್ಸಾಹಕರಾಗಿದ್ದಾರೆ.ನಮ್ಮ ಪಕ್ಷದ ಸಂಘಟನೆ ಅತ್ಯತ್ತುಮವಾಗಿದೆ.ಯಾರು ಏನೇ ಹೇಳಲ್ಲಿ ಬಿಜೆಪಿ ವರುಣದಲ್ಲಿ ಗೆಲ್ಲುತ್ತದೆ.ವಿಜಯೇಂದ್ರ ಮುಖ್ಯವಲ್ಲ,ಬಿಜೆಪಿ ಮಾತ್ರ ಮುಖ್ಯ ಎಂದು ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

Written by - Zee Kannada News Desk | Last Updated : Mar 31, 2023, 08:39 PM IST
  • ಕೆ.ಆರ್ ಪೇಟೆಯಲ್ಲಿ ನಾವು ಗೆಲ್ಲುತ್ತೇವೆ ಎಂಬುದು ಯಾರಿಗೆ ಗೊತ್ತಿತ್ತು.
  • ಸ್ವತಃ ನಮಗೆ ಗೆಲ್ಲುತ್ತೇವೆ ಅಂತ ಗೊತ್ತಿರಲಿಲ್ಲ.ಅಂತಹ ಕ್ಷೇತ್ರವನ್ನೇ ನಾವು ಗೆದಿದ್ದೇವೆ
  • ಮತದಾರನ ವಿಶ್ವಾಸವೇ ಮುಖ್ಯ.ಯಾವ ಕ್ಷೇತ್ರವೂ ಅಸಾಧ್ಯವಲ್ಲ
"ವರುಣಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣ ಇದೆ" title=
file photo

ಮೈಸೂರು: ವರುಣ ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಲು ಉತ್ಸಾಹಕರಾಗಿದ್ದಾರೆ.ನಮ್ಮ ಪಕ್ಷದ ಸಂಘಟನೆ ಅತ್ಯತ್ತುಮವಾಗಿದೆ.ಯಾರು ಏನೇ ಹೇಳಲ್ಲಿ ಬಿಜೆಪಿ ವರುಣದಲ್ಲಿ ಗೆಲ್ಲುತ್ತದೆ.ವಿಜಯೇಂದ್ರ ಮುಖ್ಯವಲ್ಲ,ಬಿಜೆಪಿ ಮಾತ್ರ ಮುಖ್ಯ ಎಂದು ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಕೆ.ಆರ್ ಪೇಟೆಯಲ್ಲಿ ನಾವು ಗೆಲ್ಲುತ್ತೇವೆ ಎಂಬುದು ಯಾರಿಗೆ ಗೊತ್ತಿತ್ತು.ಸ್ವತಃ ನಮಗೆ ಗೆಲ್ಲುತ್ತೇವೆ ಅಂತ ಗೊತ್ತಿರಲಿಲ್ಲ.ಅಂತಹ ಕ್ಷೇತ್ರವನ್ನೇ ನಾವು ಗೆದಿದ್ದೇವೆ.ಮತದಾರನ ವಿಶ್ವಾಸವೇ ಮುಖ್ಯ.ಯಾವ ಕ್ಷೇತ್ರವೂ ಅಸಾಧ್ಯವಲ್ಲ.ಬಿಜೆಪಿ ವರುಣ ಒಂದೇ ಅಲ್ಲ,224 ಕ್ಷೇತ್ರಗಳಲ್ಲೂ ಗೆಲ್ಲಲು ಸಶಕ್ತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: "ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಎಂದಿಗೂ ಬೇರೆಯವರ ತಟ್ಟೆಯ ಅನ್ನ ಕಿತ್ತು ತಿನ್ನುವುದಿಲ್ಲ"

ವರುಣ ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ.ಬಿಜೆಪಿ ಗೆಲ್ಲಲು ಎಲ್ಲ ಅವಕಾಶಗಳೂ ಇವೆ.ಸಿದ್ದರಾಮಯ್ಯ ಹೇಳಿಕೆ‌ ಬಗ್ಗೆ ನಾನು ಪ್ರತಿಕ್ರಿಸಲು ಹೋಗಲ್ಲ.ಆದರೆ ರಾಜ್ಯದ ಯಾವುದೇ ಕ್ಷೇತ್ರ ಬಿಜೆಪಿ ಅಸಾಧ್ಯವಲ್ಲ.ಮಂಡ್ಯ‌ ಜಿಲ್ಲೆ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲುತ್ತೆ ಅಂತಾ ನಾವೇ ನಿರೀಕ್ಷೆ ಮಾಡಿರಲಿಲ್ಲ.ಆದರೂ ಗೆಲ್ಲಲಿಲ್ಲವೇ,ಬೈ ಎಲೆಕ್ಷನ್ ನಲ್ಲಿ ಶಿರಾ ದಲ್ಲಿ ಗೆಲ್ಲಲಿಲ್ಲವೇ.ಶಿರಾದಲ್ಲಿಈ ಹಿಂದೆ ಬಿಜೆಪಿಗೆ ಠೇವಣಿ ಕೂಡ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ

ಇನ್ನೂ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ವರುಣ ಕ್ಷೇತ್ರದಲ್ಲಿ ನಿಲ್ಲಬೇಕೆ, ಬೇಡವೇ ಅದನ್ನು ಪಕ್ಷದ ಹಿರಿಯ ನಾಯಕರು ತೀರ್ಮಾನ ಮಾಡ್ತಾರೆ.ನನಗೆ ಮೊದಲು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಗಲಿ.ನಂತರ ಕ್ಷೇತ್ರದ ವಿಚಾರ.ಶಿಕಾರಿಪುರ ಅಥವಾ ವರುಣ ಎಲ್ಲಿ ನಿಲ್ಲಬೇಕೆಂಬುದನ್ನು ನಾನು ವೈಯಕ್ತಿಕವಾಗಿ ನಿರ್ಧರಿಸಲು ಆಗಲ್ಲ.ಮೊದಲು ರಾಜ್ಯ ಮಟ್ಟದಲ್ಲಿ ತೀರ್ಮಾಮವಾಗಿ, ನಂತರ ಕೇಂದ್ರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News