Karnataka Assembly Eelection: 2 ದಶಕದ ಬಳಿಕ ಕಮಲ‌ ಅರಳಿಸುವ ಸರ್ಕಸ್- ಚಾ.ನಗರಕ್ಕೆ ಸೋಮಣ್ಣ ಅಭ್ಯರ್ಥಿ!?

Karnataka Assembly Eelection: ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ವಿ. ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ, ಟಿಕೆಟ್ ಗಾಗಿ ಓಡಾಡುತ್ತಿದ್ದ  ವಿಜಯೇಂದ್ರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದ ಹೊಸ ಟರ್ನಿಂಗ್ ಪಾಯಿಂಟಾಗಿದ್ದು ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

Written by - Yashaswini V | Last Updated : Apr 3, 2023, 05:07 PM IST
  • ಹೊಸ ಜಾತಿ ಸಮೀಕರಣದ ಮೂಲಕ ತನಗೇ ಟಿಕೆಟ್ ಕೊಡಬೇಕೆಂದು ಸಾಕಷ್ಟು ಕಸರತ್ತು ನಡೆಸುತ್ತಿರುವ ವಾಲ್ಮೀಕಿ ಸಮುದಾಯದ ರಾಮಚಂದ್ರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
  • ಪ್ರಬಲ ನಾಯಕ ವಿ. ಸೋಮಣ್ಣ ಹಾಗೂ ಹೊಸ‌ ಜಾತಿ ಸಮೀಕರಣ, ಸೌಮ್ಯ ಸ್ವಭಾವದ ರಾಮಚಂದ್ರು ಇವರಿಬ್ಬರಿಗೇ ಟಿಕೆಟ್ ಸಿಗಬಹುದು.
  • ‌ಇಲ್ಲವೇ, ಹಳೇ ಮೈಸೂರು ಟಾರ್ಗೆಟ್ ಮಾಡಿರುವ ಬಿಜೆಪಿ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಕೊಟ್ಟು ಬೇರೆ ಕ್ಷೇತ್ರಗಳನ್ನೂ ಗೆಲ್ಲಿಸುವ ಗುರಿ ಕೊಡಬಹುದು ಎನ್ನಲಾಗಿದೆ.
Karnataka Assembly Eelection: 2 ದಶಕದ ಬಳಿಕ ಕಮಲ‌ ಅರಳಿಸುವ ಸರ್ಕಸ್-  ಚಾ.ನಗರಕ್ಕೆ ಸೋಮಣ್ಣ ಅಭ್ಯರ್ಥಿ!? title=

Karnataka Assembly Eelection 2023: ಬರೋಬ್ಬರಿ 2 ದಶಕದ ಬಳಿಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಲೇಬೇಕೆಂದು ಪಣ ತೊಟ್ಟಿರುವ ಕಮಲ‌ಪಾಳೇಯದ ಅಚ್ಚರಿ ಅಭ್ಯರ್ಥಿಯಾಗಿ ಸಚಿವ ವಿ. ಸೋಮಣ್ಣ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. 

ಹೌದು..., ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ವಿ. ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ, ಟಿಕೆಟ್ ಗಾಗಿ ಓಡಾಡುತ್ತಿದ್ದ  ವಿಜಯೇಂದ್ರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದ ಹೊಸ ಟರ್ನಿಂಗ್ ಪಾಯಿಂಟಾಗಿದ್ದು ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಇನ್ನು, ಸೋಮಣ್ಣ ಅವರು ಕೂಡ ಸ್ಥಳೀಯರಲ್ಲ, ಟಿಕೆಟ್ ಸಿಕ್ಕ ಬಳಿಕ ಹೇಗೆ ಎಲ್ಲರನ್ನೂ ಸಂಭಾಳಿಸುತ್ತಾರೆ ಎಂಬುದನ್ನು ಸಹ ಕಾದು ನೋಡಬೇಕಿದೆ. ಸೋಮಣ್ಣ ಹೆಸರಿನ ಜೊತೆ ರಾಮಚಂದ್ರು, ನಾಗಶ್ರೀ ಪ್ರತಾಪ್, ನೂರೊಂದು ಶೆಟ್ಟಿ, ಅಮ್ಮನಪುರ ಮಲ್ಲೇಶ್, ಆರ್.ಸುಂದರ್ ಹಾಗೂ ಡಾ.ಎ.ಆರ್.ಬಾಬು ಹೆಸರು ಪ್ರಸ್ತಾಪವಾಗಿದೆ. 

ಇದನ್ನೂ ಓದಿ- "ನೈತಿಕ ಪೊಲೀಸ್ ಗಿರಿ ಹತ್ಯೆಗೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆ"

ಹೊಸ ಜಾತಿ ಸಮೀಕರಣದ ಮೂಲಕ ತನಗೇ ಟಿಕೆಟ್ ಕೊಡಬೇಕೆಂದು ಸಾಕಷ್ಟು ಕಸರತ್ತು ನಡೆಸುತ್ತಿರುವ ವಾಲ್ಮೀಕಿ ಸಮುದಾಯದ ರಾಮಚಂದ್ರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪ್ರಬಲ ನಾಯಕ ವಿ. ಸೋಮಣ್ಣ ಹಾಗೂ ಹೊಸ‌ ಜಾತಿ ಸಮೀಕರಣ, ಸೌಮ್ಯ ಸ್ವಭಾವದ ರಾಮಚಂದ್ರು ಇವರಿಬ್ಬರಿಗೇ ಟಿಕೆಟ್ ಸಿಗಬಹುದು. ‌ಇಲ್ಲವೇ, ಹಳೇ ಮೈಸೂರು ಟಾರ್ಗೆಟ್ ಮಾಡಿರುವ ಬಿಜೆಪಿ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಕೊಟ್ಟು ಬೇರೆ ಕ್ಷೇತ್ರಗಳನ್ನೂ ಗೆಲ್ಲಿಸುವ ಗುರಿ ಕೊಡಬಹುದು ಎನ್ನಲಾಗಿದೆ.

ಬಹಿರಂಗವಾಗಿ ಸೋಮಣ್ಣ ತಾನು ಆಕಾಂಕ್ಷಿ, ಗಡಿಜಿಲ್ಲೆಯಲ್ಲಿ ಸ್ಪರ್ಧಿಸುವ ಇಂಗಿತ ಹೊರಹಾಕದಿದ್ದರೂ ತಮ್ಮ ಆಪ್ತ ಬಳಗದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ತಾನು ಸ್ಪರ್ಧೆ ಮಾಡುವ ಸಾಧಕ-ಬಾಧಕ ಚರ್ಚೆ ಮಾಡುತ್ತಿದ್ದುದು ಗುಟ್ಟಿನ ವಿಚಾರವೇನಲ್ಲ.‌ ಆದ್ದರಿಂದ, ಹೈ ಕಮಾಂಡ್ ಟಾರ್ಗೆಟ್ ಒಪ್ಪಿ ಚಾಮರಾಜನಗರ ಕಮಲ ಅಭ್ಯರ್ಥಿ ಸೋಮಣ್ಣ ಆಗುವ ಸಾಧ್ಯತೆ ತೀರಾ ದಟ್ಟವಾಗಿದೆ. 

ಇದನ್ನೂ ಓದಿ- ಕಾಂಗ್ರೆಸ್‌ಗೆ ಅಂಬೇಡ್ಕರ್‌ ಮೇಲಾಗಲಿ, ಸಂವಿಧಾನದ ಮೇಲಾಗಲಿ ಪ್ರೀತಿ ಇಲ್ಲ : ಸಿಎಂ ಬೊಮ್ಮಾಯಿ

1999 ರಲ್ಲಿ ಸಿ.ಗುರುಸ್ವಾಮಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ಅದಾದ ನಂತರ ವಾಟಾಳ್ ನಾಗರಾಜ್ ಬಳಿಕ ಕೈ ಶಾಸಕ ಸಿ.ಪುಟ್ಟರಂಗಶೆಟ್ಟಿ ಸತತ ಮೂರು ಬಾರಿಯಿಂದ ಆಯ್ಕೆಯಾಗುತ್ತಿದ್ದು 2 ದಶಕದ ಬಳಿಕ ಮತ್ತೇ ಬಿಜೆಪಿ ಗೆಲ್ಲಿಸುವ ಉಮೇದಿಗೆ ಬಿದ್ದಿದೆ ಕಮಲಪಡೆ. ಇದರಲ್ಲಿ ಸೋಮಣ್ಣ ಸ್ಪರ್ಧಿಸಿ ಸಕ್ಸಸ್ ಆಗ್ತಾರಾ ಎಂಬುದನ್ನು ಮತದಾರರ ನಿರ್ಧರಿಸಲಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News