ಮಧ್ಯಪ್ರದೇಶ #ZeeMahaExitPoll: ಇತಿಹಾಸ ನಿರ್ಮಿಸಲಿರುವ ಶಿವರಾಜ್ ಸಿಂಗ್ ಚೌಹಾನ್, ಮತ್ತೆ ಬಿಜೆಪಿ ಅಧಿಕಾರಕ್ಕೆ

ಟೈಮ್ಸ್ ನೌ ಮತ್ತು ಸಿಎನ್ಎಕ್ಸ್ ವಾಹಿನಿಗಳ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಇತಿಹಾಸ ನಿರ್ಮಿಸಲಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. 

Last Updated : Dec 7, 2018, 06:22 PM IST
ಮಧ್ಯಪ್ರದೇಶ #ZeeMahaExitPoll: ಇತಿಹಾಸ ನಿರ್ಮಿಸಲಿರುವ ಶಿವರಾಜ್ ಸಿಂಗ್ ಚೌಹಾನ್, ಮತ್ತೆ ಬಿಜೆಪಿ ಅಧಿಕಾರಕ್ಕೆ title=

ನವದೆಹಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ 2018ಕ್ಕೆ ನವೆಂಬರ್ 28ರಂದು ನಡೆದ ಮತದಾನದ ಬಳಿಕ ಟೈಮ್ಸ್ ನೌ ಮತ್ತು ಸಿಎನ್ಎಕ್ಸ್ ವಾಹಿನಿಗಳ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಇತಿಹಾಸ ನಿರ್ಮಿಸಲಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಈ ವಾಹಿನಿಗಳ ಮತದಾನೋತ್ತರ ಸಮೀಕ್ಷೆ ವರದಿಗಳ ಪ್ರಕಾರ ಬಿಜೆಪಿ 126, ಕಾಂಗ್ರೆಸ್ 89, ಬಿಎಸ್ಪಿ 6 ಮತ್ತು ಇತರೆ 9 ಸ್ಥಾನಗಳನ್ನು ಗಳಿಸಲಿವೆ. 

ಅಂತೆಯೇ, ಆಜ್ ತಕ್ ಮತ್ತು ಎಕ್ಸಿಸ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ ಎನ್ನಲಾಗಿದೆ. ಬಿಜೆಪಿ 111, ಕಾಂಗ್ರೆಸ್ 113 ಹಾಗೂ ಇತರ ಪಕ್ಷಗಳು 6 ಸ್ಥಾನಗಳನ್ನು ಗಳಿಸಲಿವೆ ಎನ್ನಲಾಗಿದೆ. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.75ಕ್ಕೂ ಅಧಿಕ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. 230 ವಿಧಾನಸಭೆ ಕ್ಷೇತ್ರಗಳಲ್ಲಿ 227ರಲ್ಲಿ ಶೇ.75ರಷ್ಟು ಮತದಾನವಾಗಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ.72.13 ಮತದಾನವಾಗಿತ್ತು. ಆದರೆ ಈ ಬಾರಿ ಶೇ.3ರಷ್ಟು ಹೆಚ್ಚುವರಿ ಮತದಾನವಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ನಡೆಯಲಿದ್ದು, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಕೂಡ ಚುನಾವಣಾ ಕಣದಲ್ಲಿವೆ. ಚುನಾವಣೋತ್ತರ ಸಮೀಕ್ಷೆ ವರದಿ ಏನೇ ಇರಲಿ, ಎಲ್ಲ ಪಕ್ಷಗಳ ಹಣೆಬರಹ ಡಿಸೆಂಬರ್ 11 ರಂದು ಬಹಿರಂಗವಾಗಲಿದೆ. ಎಲ್ಲಾ ಐದು ರಾಜ್ಯಗಳಿಗೆ ನಡೆದ ಚುನಾವಣೆಯ ಮತಎಣಿಕೆ ಡಿಸೆಂಬರ್ 11ರಂದು ನಡೆಯಲಿದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ತಿಳಿಯಲಿದೆ.

Trending News