'ನಿಮ್ಮ ಸೀಟು ಸ್ಲೀಪರ್ ಬರ್ತ್ ಅಲ್ಲ' ಎಂದು ವಿಮಾನಯಾನ ಸಚಿವಾಲಯ ಹೇಳಿದ್ದೇಕೆ?

ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕರೊಬ್ಬರು ತನ್ನ ಮುಂದೆ ಕುಳಿತಿದ್ದ ಮಹಿಳೆಯೊಬ್ಬರ ಆಸನಕ್ಕೆ ತಾಗುವಂತೆ ಒರಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈಗ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಹಾರುವ ಶಿಷ್ಟಾಚಾರವನ್ನು ಪ್ರಕಟಿಸಿದೆ.

Last Updated : Feb 22, 2020, 04:46 PM IST
'ನಿಮ್ಮ ಸೀಟು ಸ್ಲೀಪರ್ ಬರ್ತ್ ಅಲ್ಲ' ಎಂದು ವಿಮಾನಯಾನ ಸಚಿವಾಲಯ ಹೇಳಿದ್ದೇಕೆ? title=
PHOTO COURTESY: pixabay(ಸಾಂದರ್ಭಿಕ ಚಿತ್ರ)

ನವದೆಹಲಿ: ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕರೊಬ್ಬರು ತನ್ನ ಮುಂದೆ ಕುಳಿತಿದ್ದ ಮಹಿಳೆಯೊಬ್ಬರ ಆಸನಕ್ಕೆ ತಾಗುವಂತೆ ಒರಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈಗ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಹಾರುವ ಶಿಷ್ಟಾಚಾರವನ್ನು ಪ್ರಕಟಿಸಿದೆ.

"ಸ್ವಲ್ಪ ಮೂಲಭೂತ ಉತ್ತಮ ನಡತೆ ಮತ್ತು ಗೌರವವು ಯಾವಾಗಲೂ ಯೋಗ್ಯವಾಗಿರುತ್ತದೆ. ನಿಮ್ಮ ಆಸನವು ಸ್ಲೀಪರ್ ಬೆರ್ತ್ ಅಲ್ಲ. ವಿಮಾನದಲ್ಲಿ ಇತರ ಜನರ ಜಾಗವನ್ನು ಆವರಿಸಬೇಡಿ " ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಟ್ವೀಟ್ ಮಾಡಿದೆ.

ಸಚಿವಾಲಯವು ಪ್ರಯಾಣಿಕರಿಗೆ ಮತ್ತಷ್ಟು ಸಲಹೆ ನೀಡುತ್ತದೆ, "ನಿಮ್ಮಲ್ಲಿರುವ ಸೀಮಿತ ಸ್ಥಳಾವಕಾಶದೊಂದಿಗೆ, ನೀವು ಒರಗಿಕೊಳ್ಳಬೇಕಾದರೆ ಅದನ್ನು ಎಚ್ಚರಿಕೆಯಿಂದ ಮಾಡಿ. ನಿಮ್ಮ ಸುತ್ತಲಿನ ಜನರ ಬಗ್ಗೆ ಯಾವಾಗಲೂ ಯೋಚಿಸಿರಿ ಏಕೆಂದರೆ ಯಾರೂ ನಿಮ್ಮ ತಲೆಯನ್ನು ಅವರ ಮಡಿಲಲ್ಲಿ ಬಯಸುವುದಿಲ್ಲ." ಎಂದು ಟ್ವೀಟ್ ಮಾಡಿದೆ.

Trending News