PM ಆವಾಸ್ ಯೋಜನೆಯಡಿ ಮನೆ ಕಟ್ಟಲು ಈಗ ಪಡೆಯಬಹುದು ಮೂರು ಪಟ್ಟು ಅಧಿಕ ಹಣ , ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ

ಜಾರ್ಖಂಡ್ ವಿಧಾನಸಭೆಯ ಅಂದಾಜು ಸಮಿತಿಯು ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (PM awas yojana) ಮನೆಗಳ ನಿರ್ಮಾಣಕ್ಕಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಶಿಫಾರಸು ಮಾಡಿದೆ.

Written by - Ranjitha R K | Last Updated : Sep 14, 2021, 06:40 PM IST
  • ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ಸುದ್ದಿ
  • PM ಆವಾಸ್ ಯೋಜನೆಯ ಮೊತ್ತ ಹೆಚ್ಚಾಗಬಹುದು
  • ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಪ್ರಸ್ತಾಪವನೆ ನೀಡಿದ ಸಮಿತಿ
PM ಆವಾಸ್ ಯೋಜನೆಯಡಿ ಮನೆ ಕಟ್ಟಲು ಈಗ ಪಡೆಯಬಹುದು ಮೂರು ಪಟ್ಟು ಅಧಿಕ ಹಣ , ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ title=
PM ಆವಾಸ್ ಯೋಜನೆಯ ಮೊತ್ತ ಹೆಚ್ಚಾಗಬಹುದು (file photo)

ನವದೆಹಲಿ:  ಪ್ರಧಾನ ಮಂತ್ರಿ ಪಿಎಂ ಆವಾಸ್ ಯೋಜನೆಯ (PM awas yojana) ಫಲಾನುಭವಿಗಳಿಗೆ ಸಂತಸದ ಸುದ್ದಿಯಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಮನೆ ಕಟ್ಟಲು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುವ ಪ್ರಸ್ತಾಪವನ್ನು ಮಾಡಲಾಗಿದೆ. ಈಗ ಮನೆ ಕಟ್ಟುವ ವೆಚ್ಚವೂ ಹೆಚ್ಚಾಗಿದೆ ಎಂದು ಸಮಿತಿ ಹೇಳಿದೆ. ಈ ಪ್ರಸ್ತಾವನೆಯನ್ನು ಅನುಮೋದಿಸಿದರೆ, PM ಆವಾಸ್ ಯೋಜನೆಯಡಿ, ಇನ್ನು ಮುಂದೆ ಫಲಾನುಭವಿಗಳು 3 ಪಟ್ಟು ಹೆಚ್ಚು ಹಣವನ್ನು ಪಡೆಯಲಿದ್ದಾರೆ.  

ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊತ್ತ ಹೆಚ್ಚಾಗುವುದೇ?:

ಜಾರ್ಖಂಡ್ ವಿಧಾನಸಭೆಯ (Jharkhand assembly) ಅಂದಾಜು ಸಮಿತಿಯು ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (PM awas yojana) ಮನೆಗಳ ನಿರ್ಮಾಣಕ್ಕಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಶಿಫಾರಸು ಮಾಡಿದೆ. ಸಮಿತಿಯ ಅಧ್ಯಕ್ಷ ದೀಪಕ್ ಬಿರುವಾ (Deepak Birua) ಮುಂಗಾರು ಅಧಿವೇಶನದ ಕೊನೆಯ ದಿನದಂದು ಅಂದಾಜು ಸಮಿತಿಯ ವರದಿಯನ್ನು ಮಂಡಿಸಿದರು. ಮರಳು, ಸಿಮೆಂಟ್, ರಾಡ್‌ಗಳು, ಇಟ್ಟಿಗೆಗಳ ಬೆಲೆ ಏರಿಕೆಯಿಂದಾಗಿ (Price hike), ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ವೆಚ್ಚವೂ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : ಮಹಾರಾಷ್ಟ್ರದ ಅಮರಾವತಿಯಲ್ಲಿ ದೋಣಿ ಮಗುಚಿ 11 ಮಂದಿ ಸಾವು

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ :
ಬಿಪಿಎಲ್ (BPL) ಕುಟುಂಬಗಳು ತಮ್ಮ ಕಡೆಯಿಂದ 50 ಸಾವಿರದಿಂದ ಒಂದು ಲಕ್ಷ ರೂಪಾಯಿಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬಿರುವಾ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ (Central government) ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ನಿರ್ಮಿಸುತ್ತಿರುವ ಮನೆಗಳ ವೆಚ್ಚವನ್ನು ರೂ 1.20 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸಬೇಕು. ಇದರಿಂದ ಮನೆಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲು ಮತ್ತು ಜನರು ಮುಂದೆ ಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ರಾಜ್ಯದ ಪಾಲನ್ನು ಹೆಚ್ಚಿಸುವುದರ ಬಗ್ಗೆಯೂ ರಾಜ್ಯದ ಸರ್ಕಾರ ಪರಿಗಣಿಸಬಹುದು ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ :  Good News! Petrol-Diesel ನಿಂದ ಹೆಚ್ಚಾಗುತ್ತಿರುವ ಹಣದುಬ್ಬರಕ್ಕೆ ಬೀಳುತ್ತಾ ಕಡಿವಾಣ? ಸರ್ಕಾರದಿಂದ ಈ ಮಹತ್ವದ ನಿರ್ಧಾರ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News