ʼಮದುವೆ ಬಳಿಕವೂ ಕಿರುಕುಳ ನೀಡ್ತಿದ್ದಾರೆʼ.. ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!

 Kannada Actress Sensational Comment: ನಾಯಕಿ ಪ್ರಿಯಾಮಣಿ ಬಗ್ಗೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ನಟಿ ಕನ್ನಡ, ತೆಲುಗು, ತಮಿಳು ಹೀಗೆ ಹಲವು ಭಾಷೆಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.. ಇದೀನ ನಟಿ ಶಾಕಿಂಗ್‌ ಕಾಮೆಂಟ್‌ ಮಾಡುವ ಮೂಲಕ ಮುನ್ನಲೆಗೆ ಬಂದಿದ್ದಾರೆ..     

Written by - Savita M B | Last Updated : Jan 15, 2025, 07:27 PM IST
  • ಪ್ರಿಯಾಮಣಿ ದಕ್ಷಿಣ ಚಿತ್ರರಂಗದ ಪ್ರಮುಖ ನಟಿ.
  • ಪ್ರಿಯಾಮಣಿ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲೂ ಅಷ್ಟೇ ಕ್ರೇಜ್‌ ಗಳಿಸುತ್ತಿದ್ದಾರೆ.
ʼಮದುವೆ ಬಳಿಕವೂ ಕಿರುಕುಳ ನೀಡ್ತಿದ್ದಾರೆʼ.. ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!  title=

Priyamani react on marriage trolls: ತೆಲುಗಿನ ಹೊರತಾಗಿ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಿಯಾಮಣಿ ದಕ್ಷಿಣ ಚಿತ್ರರಂಗದ ಪ್ರಮುಖ ನಟಿ. ತಮಿಳಿನ "ಪರುತ್ತಿವೀರನ್" ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಿಯಾಮಣಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಒಂದಷ್ಟು ಕಾಲ ಚಿತ್ರಗಳಿಗೆ ಗ್ಯಾಪ್ ನೀಡಿದ ಪ್ರಿಯಾಮಣಿ, ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಮಿಂಚಿದರು.. ಶೋನಲ್ಲಿ ಆಕೆಯ ಎಕ್ಸ್‌ಪ್ರೆಶನ್‌ಗಳನ್ನು ನೋಡದ ಅಭಿಮಾನಿಗಳಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಪ್ರಿಯಾಮಣಿ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲೂ ಅಷ್ಟೇ ಕ್ರೇಜ್‌ ಗಳಿಸುತ್ತಿದ್ದಾರೆ. 

 ಅವರು 'ಜವಾನ್, ಮೈದಾನ್, ಆರ್ಟಿಕಲ್ 370, ಭಾಮಾಕಲಾಪಂ 2' ಚಿತ್ರಗಳಲ್ಲಿ ನಟಿಸಿದ್ದಾರೆ. 2022ರಲ್ಲಿ ತೆರೆಕಂಡ ‘ಭಾಮಾಕಲಾಪಂ’ ಚಿತ್ರದ ಮುಂದುವರಿದ ಭಾಗ ‘ಭಾಮಾಕಲಾಪಂ 2’ ಇದೇ ಫೆಬ್ರವರಿ 16ರಂದು ಬಿಡುಗಡೆಯಾಗಿ ಪಾಸಿಟಿವ್‌ ಟಾಕ್‌ ಪಡೆದುಕೊಂಡಿದೆ. ಇದೆಲ್ಲದರ ಮಧ್ಯೆ ಪ್ರಿಯಾಮಣಿ ಅವರ ವೈಯಕ್ತಿಕ ಜೀವನವು ಕೆಲವು ಸಮಯಗಳಿಂದ ಟ್ರೋಲ್ ಆಗುತ್ತಿದೆ. 

ಇದನ್ನೂ ಓದಿ-2025: ನಿಜವಾಗುತ್ತಿದೆ ಬಾಬಾ ವಂಗಾ ನುಡಿದ ವಿನಾಶದ ಭವಿಷ್ಯ?! ಒಂದೆಡೆ HMPV ವೈರಸ್‌.. ಮತ್ತೊಂದೆಡೆ ಹೊತ್ತಿ ಉರಿಯುತ್ತಿದೆ ಲಾಸ್‌ ಏಂಜಲೀಸ್‌! 

ಪ್ರಿಯಾಮಣಿ 2016 ರಲ್ಲಿ ಮುಸ್ತಫಾ ರಾಜ್ ಅವರನ್ನು ವಿವಾಹವಾದರು. ಪ್ರಿಯಾಮಣಿ ಮುಸ್ತಫಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಅವರಿಬ್ಬರ ಧರ್ಮಗಳು ಬೇರೆ ಬೇರೆಯಾಗಿರುವುದರಿಂದ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಪ್ರಿಯಾಮಣಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ನೆಟಿಜನ್‌ಗಳ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

 ಈ ಬಗ್ಗೆ ಇತ್ತೀಚೆಗೆ ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ. 2016 ರಲ್ಲಿ ನಮ್ಮ ನಿಶ್ಚಿತಾರ್ಥದ ನಂತರ, ನಾನು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದೇನೆ. ಬೇರೆ ಧರ್ಮದವರನ್ನು ಮದುವೆಯಾಗಿದ್ದಕ್ಕೆ ಅನೇಕರು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಟೀಕೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಇಂಡಸ್ಟ್ರಿಯಲ್ಲಿ ಜಾತಿ ಬೇಧವಿಲ್ಲದೆ ಮದುವೆಯಾಗಿರುವ ಅನೇಕ ತಾರೆಯರಿದ್ದಾರೆ. ಆದರೆ, ಈ ವಿಚಾರದಲ್ಲಿ ನನ್ನನ್ನು ಟೀಕಿಸುವುದು ಕೆಟ್ಟದ್ದು ಎಂದು ಪ್ರಿಯಾಮಣಿ ದೂರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News