Income Tax Rules On cash transaction: ಆದಾಯ ತೆರಿಗೆ ನೋಟಿಸ್ ಒಮ್ಮೊಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತದೆ. ಆದರೆ ಅದು ಯಾಕೆ ಬಂತೆಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರವೂ ಸಿಗದಿರಬಹುದು. ನೀವು ಮಾಡುವ ಕೆಲವು ತಪ್ಪುಗಳೇ ಇದಕ್ಕೆ ಕಾರಣವಾಗಿರುತ್ತದೆ. ಆದಾಯ ತೆರಿಗೆ ನಿಯಮಗಳನ್ನು ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಳ್ಳುವುದು ಮುಖ್ಯ.
ತೆರಿಗೆ ಇಲಾಖೆಯ ಅನುಮಾನಾಸ್ಪದ ವಹಿವಾಟುಗಳ ಮೇಲೆ ಸದಾ ಒಂದು ಕಣ್ಣನ್ನು ಇಟ್ಟಿರುತ್ತದೆ. ಈ ರೀತಿ ತೆರಿಗೆ ವಂಚನೆ ಮಾಡುತ್ತಿರುವ ಅನುಮಾನ ಏನಾದರೂ ಬಂದರೆ ಕೂಡಲೇ ಇಲಾಖೆಯು ನಿಮಗೆ ನೋಟಿಸ್ ಕಳುಹಿಸಬಹುದು. ತೆರಿಗೆ ವಂಚನೆ ಮಾಡುವವರು ನಿರಂತರವಾಗಿ ಆದಾಯ ತೆರಿಗೆ ಇಲಾಖೆಯ ಕಣ್ಗಾವಲಿನಲ್ಲಿರುತ್ತಾರೆ. ಅಂತಹ ಜನರ ಬ್ಯಾಂಕಿಂಗ್ ವಹಿವಾಟುಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಮತ್ತು ಪರಿಶೀಲಿಸಲಾಗುತ್ತದೆ. ನೀವು ಒಂದು ಹಣಕಾಸು ವರ್ಷದಲ್ಲಿ ಈ 6 ದೊಡ್ಡ ವಹಿವಾಟುಗಳನ್ನು ಮಾಡಿದರೆ ನಿಮ್ಮ ಮನೆ ಬಾಗಿಲಿದೆ ಆದಾಯ ತೆರಿಗೆ ಇಲಾಖೆ ನೋಟಿಸ್ ಬರುವುದು ಖಚಿತ.
1) FD ಮೇಲೆ ಆದಾಯ ತೆರಿಗೆ ನೋಟಿಸ್: ಸ್ಥಿರ ಠೇವಣಿಗಳಿಂದ ಗಳಿಸಿದ ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಬ್ಯಾಂಕ್ನಲ್ಲಿ ನೀವು ಇಡುವ ಎಫ್ಡಿ ಮೇಲೆಯೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಒಂದು ಹಣಕಾಸು ವರ್ಷದಲ್ಲಿ ನೀವು 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಎಫ್ಡಿ ಮಾಡಿದರೆ ಆಗ ನಿಮಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಬರಬಹುದಾಗಿದೆ.
ಇದನ್ನೂ ಓದಿ: Bank Rules: ಚೆಕ್ ಮೇಲೆ ಒಟ್ಟು ಹಣದ ಮುಂದೆ ''Only'' ಪದ ಬರೆಯೋದು ಯಾಕೆ ಗೊತ್ತಾ?
2) ಉಳಿತಾಯ ಖಾತೆಗಳಲ್ಲಿನ ವಹಿವಾಟು: ಹಣಕಾಸು ತಜ್ಞರ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿನ ಒಟ್ಟು ಠೇವಣಿ ಮೊತ್ತ 10 ಲಕ್ಷ ರೂ.ಗಳನ್ನು ಮೀರಬಾರದು. ಒಂದೇ ಅಕೌಂಟ್ ಅಥವಾ ಬೇರೆ ಬೇರೆ ಖಾತೆಗಳಲ್ಲಿ ಠೇವಣಿ ಮೊತ್ತ 10 ಲಕ್ಷ ರೂ.ಗಳನ್ನು ಮೀರಬಾರದು. ಈ ಮಿತಿಯನ್ನು ಮೀರಿದರೆ ಅದರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತದೆ. ಅದೇ ಸಮಯದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ST ಪ್ರಕಾರ, ಖಾತೆದಾರರು ಒಂದು ದಿನದಲ್ಲಿ 2 ಲಕ್ಷ ರೂ.ಗಳವರೆಗೆ ವಹಿವಾಟು ನಡೆಸಬಹುದು. ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ನಿಮಗೆ IT Notice ಬರಬಹುದಾಗಿದೆ.
3) 30 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಸ್ಥಿರ ಆಸ್ತಿ: ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತಂದ ನಂತರ, ಪ್ರತಿ ದೊಡ್ಡ ಖರೀದಿಗೆ ಪ್ಯಾನ್ ಕಡ್ಡಾಯವಾಗಿದೆ. 30 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಸ್ಥಿರ ಆಸ್ತಿ ಖರೀದಿ ಮಾಡಿದಾಗ ಅದರ ಬಗ್ಗೆ ಮಾಹಿತಿಯು ಆದಾಯ ತೆರಿಗೆ ಇಲಾಖೆಗೆ ತಲುಪುತ್ತದೆ. ಈ ವೇಳೆ ತೆರಿಗೆ ಇಲಾಖೆಗೆ ನಿಮ್ಮ ಆದಾಯದ ಬಗ್ಗೆ ಏನಾದರೂ ಅನುಮಾನ ಬಂದರೆ ನಿಮಗೆ ಐಟಿ ನೋಟಿಸ್ ತಲುಪಬಹುದು.
4) ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ: ಅನೇಕ ಬಾರಿ ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ನಗದು ರೂಪದಲ್ಲಿ ಪಾವತಿಸುತ್ತಾರೆ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಒಂದೇ ಬಾರಿಗೆ 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ, ಆದಾಯ ತೆರಿಗೆ ಇಲಾಖೆಗೆ ತಿಳಿಸಲಾಗುತ್ತದೆ. ಮತ್ತೊಂದೆಡೆ, ನೀವು ಯಾವುದೇ ರೀತಿಯಲ್ಲಿ (ನಗದು/ಚೆಕ್/ವರ್ಗಾವಣೆ) ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ, ವರದಿಯು ಆದಾಯ ತೆರಿಗೆ ಇಲಾಖೆಗೆ ಹೋಗುತ್ತದೆ. ಆಗ ನಿಮ್ಮ ಹಣದ ಮೂಲದ ಬಗ್ಗೆ ತೆರಿಗೆ ಇಲಾಖೆ ನೋಟಿಸ್ ಬರಬಹುದು.
5) ಷೇರುಗಳು, ಮ್ಯೂಚುವಲ್ ಫಂಡ್ಗಳ ಖರೀದಿ: ನೀವು ಷೇರುಗಳು, ಮ್ಯೂಚುವಲ್ ಫಂಡ್ಗಳು, ಡಿಬೆಂಚರ್ಗಳು ಮತ್ತು ಬಾಂಡ್ಗಳಲ್ಲಿ ದೊಡ್ಡ ನಗದು ವಹಿವಾಟು ನಡೆಸಿದರೆ ಸಮಸ್ಯೆ ಎದುರಿಸಬಹುದು. ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಷೇರುಗಳು, ಮ್ಯೂಚುವಲ್ ಫಂಡ್ಗಳು, ಡಿಬೆಂಚರ್ಗಳು ಮತ್ತು ಬಾಂಡ್ಗಳನ್ನು ಖರೀದಿಸಿದರೆ ಅದರ ಬಗ್ಗೆ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತದೆ.
6) ವಿದೇಶಿ ಕರೆನ್ಸಿ ಖರೀದಿ: ವಿದೇಶಿ ಕರೆನ್ಸಿ ಖರೀದಿಯಲ್ಲಿ ನಡೆಯುವ ವಹಿವಾಟುಗಳ ಮೇಲೂ ಆದಾಯ ತೆರಿಗೆ ಇಲಾಖೆ ನಿಗಾ ಇಡುತ್ತದೆ. ಒಬ್ಬ ವ್ಯಕ್ತಿಯು 10 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಖರೀದಿಸಿದರೆ ಅದರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಹೋಗುತ್ತದೆ. ವಿದೇಶಿ ಕರೆನ್ಸಿಯಲ್ಲಿ ಪ್ರಯಾಣಿಕರ ಚೆಕ್ಗಳು ಮತ್ತು ವಿದೇಶಿ ಕರೆನ್ಸಿ ಕಾರ್ಡ್ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳು ಸೇರಿವೆ. ಆದ್ದರಿಂದ, ವಿದೇಶಿ ಕರೆನ್ಸಿಯನ್ನು ಖರೀದಿಸುವಾಗಲೂ ಜಾಗರೂಕರಾಗಿರಬೇಕು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.