ಸುಂದರ್ ಪಿಚೈ, ಮಸ್ಕ್ ಸೇರಿ ಟಾಪ್‌ ಕಂಪನಿಗಳ ಸಿಇಒ ಸಂಬಳ ತಿಳಿದರೆ ಶಾಕ್ ಆಗುತ್ತೀರಿ..!

Top CEOs' Salary : ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡ ನಂತರ ಸತ್ಯ ನಾಡೆಲ್ಲಾ ಅವರ ಸಂಬಳ ಎಷ್ಟು..? ಭಾರತೀಯರ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸಂಭಾವನೆ ಸೇರಿದಂತೆ ಹಲವು ಟಾಪ್‌ ಕಂಪನಿಗಳ ಸ್ಯಾಲರಿ ತಿಳಿಯಲು ಎಲ್ಲರಿಗೂ ಆಸಕ್ತಿ ಇರುತದೆ. ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.. ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : May 7, 2023, 07:39 PM IST
  • ಜಗತ್ತಿನ ಹಲವು ಟಾಪ್‌ ಕಂಪನಿಗಳ ಸಿಇಒಗಳ ವೇತನವನ್ನು ತಿಳಿದುಕೊಳ್ಳುವ ಬಯಕೆ ಎಲ್ಲರಿಗೂ ಇರುತ್ತದೆ.
  • ಸಾವಿರಾರು ಕೋಟಿ ಗಳಿಕೆ ಕಾಣುವ ಪ್ರಪಂಚದ ಟಾಪ್‌ ಕಂಪನಿಗಳ ಸಿಇಒ ಸಂಬಂಳ ಎಷ್ಟಿರಬೇಕು ಎಂಬ ಪ್ರಶ್ನೆ ಎಲ್ಲರದು.
  • ಪ್ರಪಂಚದ ಟಾಪ್‌ ಕಂಪನಿಗಳ ಸಿಇಒ ಸ್ಯಾಲರಿ ತಿಳಿಯಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಸುಂದರ್ ಪಿಚೈ, ಮಸ್ಕ್ ಸೇರಿ ಟಾಪ್‌ ಕಂಪನಿಗಳ ಸಿಇಒ ಸಂಬಳ ತಿಳಿದರೆ ಶಾಕ್ ಆಗುತ್ತೀರಿ..! title=

Top CEOs' Salary : ಮೈಕ್ರೋಸಾಪ್ಟ್‌ ಸತ್ಯ ನಾಡೆಲ್ಲ, ಆಪಲ್ ಕಂಪನಿ ಸಿಇಒ ಟಿಮ್ ಕುಕ್, ಟ್ಟಿಟರ್‌ ಎಲೋನ್‌ ಮಸ್ಕ್‌, ಗೂಗಲ್‌ ಸುಂದರ್‌ ಪಿಚೈ ಸೇರಿದಂತೆ ಜಗತ್ತಿನ ಹಲವು ಟಾಪ್‌ ಕಂಪನಿಗಳ ಸಿಇಒಗಳ ವೇತನವನ್ನು ತಿಳಿದುಕೊಳ್ಳುವ ಬಯಕೆ ಎಲ್ಲರಿಗೂ ಇರುತ್ತದೆ. ಸಾವಿರಾರು ಕೋಟಿ ಗಳಿಕೆ ಕಾಣುವ ಪ್ರಪಂಚದ ಟಾಪ್‌ ಕಂಪನಿಗಳ ಸಿಇಒ ಸಂಬಂಳ ಎಷ್ಟಿರಬೇಕು ಎಂಬ ಪ್ರಶ್ನೆ ನಿಮ್ಮ ತಲೆಗೂ ಬಂದಿದ್ರೆ.. ಈ ಕೆಳಗೆ ಮಾಹಿತಿ ನೀಡಲಾಗಿದೆ ಓದಿ..

ಎಲೋನ್ ಮಸ್ಕ್ : ಕಾರ್ಪೊರೇಟ್ ಕಂಪನಿ ಪ್ರಪಂಚದಲ್ಲಿ ಎಲೋನ್ ಮಸ್ಕ್ ತಮ್ಮ ನಿರ್ಧಾರಗಳಿಂದ ಹೆಸರುವಾಸಿಯಾಗಿದ್ದಾರರೆ. ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್ ಸೇರಿದಂತೆ ಹಲವು ಐಟಿ ಕಂಪನಿಗಳ ಸಿಇಒ ಆಗಿರುವ ಎಲೋನ್ ಮಸ್ಕ್ ಅವರು 2023 ರ ಅಂಕಿಅಂಶಗಳ ಪ್ರಕಾರ 23.5 ಬಿಲಿಯನ್ ಡಾಲರ್‌ಗಳ ಸಂಬಳವನ್ನು ಪಡೆಯುತ್ತಿದ್ದಾರೆ ಎಂದು ವರದಿ ಇದೆ. 

ಇದನ್ನೂ ಓದಿ:ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದಾ.. ಇಲ್ಲವೇ ಕೆಟ್ಟದ್ದಾ..? ಶಾಸ್ತ್ರ ಏನ್‌ ಹೇಳುತ್ತೆ ಗೊತ್ತಾ..!

ಸುಂದರ್ ಪಿಚೈ : ಕಾರ್ಪೊರೇಟ್ ವಿಶ್ವ ಭೂಪಟದಲ್ಲಿ ಭಾರತೀಯರನ್ನು ಅಗ್ರಸ್ಥಾನದಲ್ಲಿಟ್ಟವರಲ್ಲಿ ಸುಂದರ್ ಪಿಚೈ ಒಬ್ಬರು. ಇಡೀ ವಿಶ್ವವೇ ಗೂಗಲ್ ಬೆನ್ನತ್ತಿರುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೂಗಲ್ ಸುಂದರ್ ಪಿಚೈ ಅವರಿಗೆ ಆದ್ಯತೆ ನೀಡಿ ಸಿಇಒ ಆಗಿ ನೇಮಕ ಮಾಡಿದ್ದರಿಂದ ಇಡೀ ವಿಶ್ವವೇ ಮತ್ತೊಮ್ಮೆ ಭಾರತದತ್ತ ಗಮನ ಹರಿಸಿದೆ. 2022 ರ ಅಂಕಿಅಂಶಗಳ ಪ್ರಕಾರ, ಸುಂದರ್ ಪಿಚೈ ಅವರು ಗೂಗಲ್ ಕಂಪನಿಯ ಸಿಇಒ ಆಗಿ 226 ಮಿಲಿಯನ್ ಅಮೆರಿಕನ್ ಡಾಲರ್‌ಗಳ ಸಂಭಾವನೆ ಪಡೆಯುತ್ತಿದ್ದಾರೆ.

ಟಿಮ್ ಕುಕ್ : ಆಪಲ್ ಮ್ಯಾಕ್ ಸಿಸ್ಟಮ್‌ಗಳು, ಐಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಸಖತ್‌ ಕ್ರೇಜ್ ಇದೆ. ಬೆಲೆ ಹೆಚ್ಚಾದರೂ ಸಹ ಆಪಲ್ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಗ್ರಾಹಕರು ಯೋಚಿಸುವ ಮಟ್ಟಕ್ಕೆ ಇಂದು ಕಂಪನಿ ಬೆಳೆದು ನಿಂತಿದೆ. ಆಪಲ್ ಸಿಇಒ ಟಿಮ್ ಕುಕ್ ಅವರ ಸಂಬಳ 133.7 ಮಿಲಿಯನ್ ಯುಎಸ್ ಡಾಲರ್. ಇದು 2019 ರ ಮಾಹಿತಿ ಮಾತ್ರ. ಇತ್ತೀಚಿನ ಮಾಹಿತಿಯನ್ನು ನವೀಕರಿಸಬೇಕಾಗಿದೆ.

ಇದನ್ನೂ ಓದಿ: ನಿಮ್ಮ ʼಸಂಗಾತಿʼ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದರೆ ಅವರ ವರ್ತನೇ ಹೀಗೆ ಇರುತ್ತದೆ..!

ಮಾರ್ಕ್ ಹರ್ಡ್ ಮತ್ತು ಸಫ್ರಾ ಕೇಜ್ : ಮಾರ್ಕ್ ಹರ್ಡ್ ಮತ್ತು ಸಫ್ರಾ ಕೇಜ್ ಇಬ್ಬರೂ ವಿಶ್ವದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಒರಾಕಲ್‌ನ ಸಹ-ಸಿಇಒಗಳು. 2016 ರಲ್ಲಿ, ಮಾರ್ಕ್ ಅವರ ಸಂಬಳ 41.1 ಮಿಲಿಯನ್ ಡಾಲರ್ ಆಗಿದ್ದರೆ, ಸಫ್ರಾ ಅವರ ಸಂಬಳ 40.9 ಮಿಲಿಯನ್ ಡಾಲರ್ ಆಗಿತ್ತು. 

ಬಾಬಿ ಕೋಟಿಕ್ : ಬಾಬಿ ಕೋಟಿಕ್ ಅವರು ಆಕ್ಟಿವಿಸನ್ ಬ್ಲಿಝಾರ್ಡ್‌ನ ಸಿಇಒ. 2016 ರಲ್ಲಿ, CEO ಆಗಿ ಬಾಬಿ ಅವರ ಸಂಬಳ 33.1 ಮಿಲಿಯನ್ ಡಾಲರ್ ಆಗಿತ್ತು.

ಸತ್ಯ ನಾಡೆಲ್ಲಾ : ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿ 2020 ಸತ್ಯ ನಾಡೆಲ್ಲಾ ನೇಮಕವಾದರು, 44.3 ಮಿಲಿಯನ್ ಡಾಲರ್ ವೇತನವನ್ನು ಪಡೆಯುತ್ತಿದ್ದಾರೆ. 

ಇದನ್ನೂ ಓದಿ: Benefits Banana Leaf Meal: ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೇಲ್ಲಾ ಪ್ರಯೋಜನಗಳು ಇವೆ ಗೊತ್ತಾ...?

ರೀಡ್ ಹೇಸ್ಟಿಂಗ್ಸ್ : ಮನರಂಜನಾ ಉದ್ಯಮದಲ್ಲಿ ವಿಶ್ವಾದ್ಯಂತ ಕ್ಲಿಕ್ ಮಾಡಿದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನ ಸಿಇಒ ಆಗಿರುವ ರೀಡ್ ಹೇಸ್ಟಿಂಗ್ಸ್, 2020 ರಲ್ಲಿ 38.6 ಮಿಲಿಯನ್ ಡಾಲರ್‌ಗಳ ಸಂಬಳವನ್ನು ಪಡೆಯುತ್ತಿದ್ದಾರೆ.

ಬ್ರಿಯಾನ್ ರಾಬರ್ಟ್ಸ್ : ಕಾಮ್‌ಕ್ಯಾಸ್ಟ್ ಕಂಪನಿಯ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2020 ರಲ್ಲಿ, ಬ್ರಿಯಾನ್ ರಾಬರ್ಟ್ಸ್ ಈ ಕಂಪನಿಯ CEO ಆಗಿ 32.7 ಮಿಲಿಯನ್ ಡಾಲರ್ ಸಂಭಾವನೆ ಪಡೆದರು.

ಶಂತನು ನಾರಾಯಣ್ : ವೀಡಿಯೋ, ಆಡಿಯೋ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಡೋಬ್‌ನ ಸಿಇಒ ಶಾಂತನು ನಾರಾಯಣ್ ಅವರು 2022 ರಲ್ಲಿ 45.9 ಮಿಲಿಯನ್ ಡಾಲರ್‌ಗಳ ಸಂಬಳವನ್ನು ಪಡೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News