World Environment Day 2021: ರೈತರಿಗೆ ಇಂದು PM Modi ನೀಡಲಿದ್ದಾರೆಯೇ ಈ ಸಂತಸದ ಸುದ್ದಿ!

World Environment Day 2021: ಇಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು (World Environmental Day) ಆಚರಿಸಲಾಗುತ್ತಿದೆ. ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಪರಿಸರವನ್ನು ರಕ್ಷಿಸಲು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

Written by - Nitin Tabib | Last Updated : Jun 5, 2021, 11:27 AM IST
  • ಇಂದು ವಿಶ್ವ ಪರಿಸರ ದಿನ 2021 ನ್ನು ಆಚರಿಸಲಾಗುತ್ತಿದೆ.
  • ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವುದು ಈ ದಿನ ಆಚರಣೆಯ ಹಿಂದಿನ ಉದ್ದೇಶ.
  • 1972ರಲ್ಲಿ ನಡೆದ ವಿಶ್ವ ಪರಿಸರ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನಾಚರಣೆ ಮೊದಲ ಬಾರಿಗೆ ಘೋಷಿಸಲಾಗಿತ್ತು.
World Environment Day 2021: ರೈತರಿಗೆ ಇಂದು PM Modi ನೀಡಲಿದ್ದಾರೆಯೇ ಈ ಸಂತಸದ ಸುದ್ದಿ! title=
World Environment Day 2021(File Photo)

World Environment Day 2021: ಇಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು (World Environmental Day) ಆಚರಿಸಲಾಗುತ್ತಿದೆ. ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಪರಿಸರವನ್ನು ರಕ್ಷಿಸಲು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ  (Globally) ಪರಿಸರದ ಬಗ್ಗೆ ರಾಜಕೀಯ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು, ವಿಶ್ವಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನ ಆಚರಿಸುವ ಘೋಷಣೆ ಮಾಡಿತ್ತು(When World Environment Day Celebration Started).  1972ರ ಜೂನ್ 5 ರಿಂದ ಜೂನ್ 16 ರವರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ  (United Nations General Assembly ಆಯೋಜಿಸಿದ್ದ ವಿಶ್ವ ಪರಿಸರ ಸಮ್ಮೇಳನದಲ್ಲಿ (World Environment Conference) ಚರ್ಚೆಯ ನಂತರ ಇದನ್ನು ಪ್ರಾರಂಭಿಸಲಾಯಿತು.

PM Modi ಸಂಬೋಧನೆ
ವಿಶ್ವ ಪರಿಸರ ದಿನಾಚಂರನೆಯ ಅಂಗವಾಗಿ ಆಯೋಜಿಸಲಾಗುವ ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ದೇಶ ಹಾಗೂ ಇಡೀ ವಿಶ್ವಕ್ಕೆ ಮಾಹಿತಿ ನೀಡಲಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿ ತಮ್ಮ ನಿತ್ಯದ ಕೃಷಿ ಕೆಲಸಗಳಲ್ಲಿ ಇಥೆನಾಲ್(Ethanol) ಹಾಗೂ ಜೈವಿಕ ಇಂಧನವನ್ನು (Biofuel) ಬಳಸುವ ರೈತರೊಂದಿಗೆ ವರ್ಚುವಲ್ ಸಂವಾದ ನಡೆಸಲಿದ್ದಾರೆ.  LIVE: https://t.co/fCzHRBbeWj https://t.co/6GEkfQ5CHo

ಥೀಮ್ ಪ್ರಮೋಶನ್ ಆಫ್ ಬಯೋ ಫ್ಯುಯೆಲ್
ಈ ವರ್ಷದ ಕುರಿತು ಹೇಳುವುದಾದರೆ, ಈ ಬಾರಿ ಉತ್ತಮ ಪರಿಸರಕ್ಕಾಗಿ ಬಯೋ ಫ್ಯುಯೆಲ್ ಬಳಕೆ (Promotion Of Biofuels For Better Environment)ಥೀಮ್ ಅಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿವೆ. ಪರಿಸರ ಸಂರಕ್ಷಣೆಗಾಗಿ ವಿಶ್ವದಾದ್ಯಂತದ ಕೆಲವು ಸಕಾರಾತ್ಮಕ ಚಟುವಟಿಕೆಗಳ ಬಗ್ಗೆ ಜನರನ್ನು ಪ್ರೋತ್ಸಾಹಿಸಲು ಮತ್ತು ಅರಿವು ಮೂಡಿಸಲು ಈ ದಿನವು ವಿಶ್ವಸಂಸ್ಥೆಯ ಪ್ರಮುಖ ದಿನಗಳಲ್ಲಿ ಒಂದಾಗಿದೆ. ಇಂದು ಇದು 100 ಕ್ಕೂ ಹೆಚ್ಚು ದೇಶಗಳ ಜನರನ್ನು ತಲುಪಲು ಪ್ರಮುಖ ಜಾಗತಿಕ ವೇದಿಕೆಯಾಗಿದೆ. 

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಜನರು ಪರಸ್ಪರ ಸಂದೇಶಗಳನ್ನು (World Envoronment Day 2021 Quotes) ಕಳುಹಿಸುತ್ತಾರೆ. ಇದಲ್ಲದೆ ಜನರಿಗೆ ಅರಿವು ಮೂಡಿಸಲು ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಇದೇ ವೇಳೆ ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ಜಗತ್ತು ಹಾಗೂ ಓಡಾಟದ ನಡುವೆ ಭೂಮಿಯ ಮೇಲೆ ಮಾಲಿನ್ಯದ (Pollution Increase) ಪ್ರಮಾಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಲೇ ಇದೆ. ಪರಿಸರದಲ್ಲಿ ಮಾಲಿನ್ಯದ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ, ತಾಪಮಾನವೂ (Global Warming) ಹೆಚ್ಚುತ್ತಿದೆ. ಆದರೆ, ಈ ಮಾಲಿನ್ಯ ಹೆಚ್ಚಳದಿಂದಾಗಿ ಹಲವು ರೀತಿಯ ಗಂಭೀರ ಕಾಯಿಲೆಗಳು ಸಹ ವೇಗವಾಗಿ ಹೆಚ್ಚುತ್ತಿವೆ, ಇದಲ್ಲದೆ ಅನೇಕ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು  ನಶಿಸಿ ಹೋಗುತ್ತಿವೆ.

ಇದನ್ನೂ ಓದಿ-ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಕೊರೊನಾ ಮಹಾಮಾರಿಯ ಕಾರಣ ಹಲವೆಡೆ ಸಂಕಷ್ಟಗಳು ಎದುರಾಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳ ಕುರಿತು ಹೇಳುವುದಾದರೆ. ಪ್ರಕೃತಿಯನ್ನು ಹಾಳುಮಾಡಿದರ ಪರಿಣಾಮವೇ ಇಂದು ನಾವು ಕಾಣುತ್ತಿದ್ದು, ಮರಗಳು ಕಂಮಿಯಾಗುತ್ತಿವೆ ಜನರು ಉಸಿರಾಡಲು ಪರದಾಡುತ್ತಿದ್ದಾರೆ. ಆಮ್ಲಜನಕದ (Oxygen) ಬೇಡಿಕೆ ಹಚ್ಚಾಗಿದೆ. ಜನರು ಆಕ್ಸಿಜನ್ ಸಿಲಿಂಡರ್ ಗಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಇದನ್ನೂ ಓದಿ-Corona Third Wave: ಈ ತಿಂಗಳಿನಿಂದ ಆರಂಭವಾಗಲಿದೆಯಂತೆ ಕರೋನ ಮೂರನೇ ತರಂಗ

ತಿ ವರ್ಷ ವಿಶ್ವ ಪರಿಸರ ದಿನಾಚರಣೆಯ ಆಚರಣೆಗಾಗಿ ಒಂದು ಥೀಮ್ ಆಯ್ಕೆ ಮಾಡಲಾಗುತ್ತದೆ. ವರ್ಷ 2021ರ ವಿಶ್ವ ಪರಿಸರ ದಿನಾಚರಣೆಯ ಥೀಮ್ 'Ecosystem Restoration' ಆಗಿದೆ. ಇದರ ಅಡಿಯಲ್ಲಿ ವೃಕ್ಷಾರೋಪನ, ನಗರಗಳನ್ನು ಹಸಿರಾಗಿಸುವುದು, ಆಹಾರ ಬದಲಾವಣೆ ಅಥವಾ ನದಿ ಮತ್ತು ಕಡಲು ತೀರಗಳ ಸ್ವಚ್ಚತೆ ಇತ್ಯಾದಿಗಳು ಶಾಮೀಲಾಗಿವೆ. 

ಇದನ್ನೂ ಓದಿ-ಇನ್ನೆರಡು ದಿನ ರಾಜ್ಯದೆಲ್ಲೆಡೆ ಭಾರೀ ಮಳೆ : ಕರಾವಳಿ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News