Cyberattack: ಸೈಬರ್ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ..!

Cyberattack Crime: ಅಥಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್​ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನೆಂದು ಹೇಳಲಾಗಿದೆ.

Written by - Puttaraj K Alur | Last Updated : May 3, 2023, 05:32 PM IST
  • ಸೈಬರ್​ ದಾಳಿಗೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
  • ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತ ಯುವತಿಯ ಮಾಜಿ ಬಾಯ್​ಫ್ರೆಂಡ್​ ವಿರುದ್ಧ ಪ್ರಕರಣ
  • ಫೇಸ್​ಬುಕ್ ಮೂಲಕ ಯುವತಿ ವಿರುದ್ಧ ಸೈಬರ್ ದಾಳಿ ನಡೆಸಿದ್ದ ಆರೋಪಿ ಎಸ್ಕೇಪ್
Cyberattack: ಸೈಬರ್ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ..! title=
ಸೈಬರ್​ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ!

ಕೊಟ್ಟಾಯಂ: ಸೈಬರ್​ ದಾಳಿಗೆ ಮನನೊಂದು ಯುವತಿಯೊಬ್ಬಳು ತನ್ನ ಬದುಕನ್ನೇ ಅಂತ್ಯಗೊಳಿಸಿದ್ದಾಳೆ. ಕೇರಳದ ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತ ಯುವತಿಯ ಮಾಜಿ ಬಾಯ್​ಫ್ರೆಂಡ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಯುವತಿಯನ್ನು ಕೊತ್ತನಲ್ಲೂರಿನ ನಿವಾಸಿ ಅಥಿರಾ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಈಕೆ ಶವವಾಗಿ ಪತ್ತೆಯಾಗಿದ್ದಳು. ಈಕೆಯ ಮಾಜಿ ಬಾಯ್​ಫ್ರೆಂಡ್​ ಅರುಣ್​ ವಿದ್ಯಾಧರಣ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Sharad Pawar Resigns: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ!

ಅಥಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್​ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನೆಂದು ಹೇಳಲಾಗಿದೆ. ಹೀಗಾಗಿ ಆಥಿರಾ ಅವರು ಅರುಣ್​ ಜೊತೆಗಿನ ಸ್ನೇಹವನ್ನು ತ್ಯಜಿಸಿದ್ದರು. ಅಥಿರಾಗೆ ಮದುವೆ ಪ್ರಸ್ತಾಪ ಬರುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದ ಅರುಣ್, ಸೋಷಿಯಲ್ ಮೀಡಿಯಾ ಮೂಲಕ ಅಥಿರಾಳನ್ನು ನಿಂದಿಸಿದ್ದನಂತೆ. ಫೇಸ್​ಬುಕ್​ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್​ ಮಾಡಿ ಮಾನಹಾನಿಕರವಾಗಿ ಬರಹಗಳನ್ನು ಹಾಕಿದ್ದನಂತೆ.

ಇದರ ಬಗ್ಗೆ ಅಥಿರಾ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತುಂಬಾ ಬೇಸರಗೊಂಡಿದ್ದ ಆಕೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಥಿರಾಳ ಸಾವಿನ ಸುದ್ದಿ ಕೇಳಿದ ಅರುಣ್ ವಿದ್ಯಾಧರನ್ ಸದ್ಯ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  

ಇದನ್ನೂ ಓದಿ: Sharad Pawar Resigns: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News