ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಲಿದೆ : ರಾಮ್ ಮಾಧವ್

ಈಶಾನ್ಯದ ಜನರು ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬದಲಾವಣೆ ಬಯಸಿ ಮತ ಚಲಾಯಿಸಿದ್ದಾರೆ. ಅಂತೆಯೇ ಮೇಘಾಲಯದಲ್ಲಿಯೂ ನಡೆಸಿದ ಪ್ರಯತ್ನವು ಕಾಂಗ್ರೆಸ್ ಅಲ್ಲದ ಸರ್ಕಾರ ರಚನೆಗೆ ಉತ್ತೇಜನ ನೀಡಲಿದೆ ಎಂದು ಬಿಜೆಪಿ ಶನಿವಾರ ಹೇಳಿದೆ. 

Last Updated : Mar 3, 2018, 01:19 PM IST
ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಲಿದೆ : ರಾಮ್ ಮಾಧವ್ title=

ಅಗರ್ತಲಾ: ಈಶಾನ್ಯದ ಜನರು ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬದಲಾವಣೆ ಬಯಸಿ ಮತ ಚಲಾಯಿಸಿದ್ದಾರೆ. ಅಂತೆಯೇ ಮೇಘಾಲಯದಲ್ಲಿಯೂ ನಡೆಸಿದ ಪ್ರಯತ್ನವು ಕಾಂಗ್ರೆಸ್ ಅಲ್ಲದ ಸರ್ಕಾರ ರಚನೆಗೆ ಉತ್ತೇಜನ ನೀಡಲಿದೆ ಎಂದು ಬಿಜೆಪಿ ಶನಿವಾರ ಹೇಳಿದೆ. 

"ತ್ರಿಪುರಾದಲ್ಲಿ ಬಿಜೆಪಿಯು 40 ಅಥವಾ ಹೆಚ್ಚಿನ ಸ್ಥಾನಗಳನ್ನು (60 ಸದಸ್ಯರ ವಿಧಾನಸಭೆಯಲ್ಲಿ) ಗಳಿಸುವ ನಿರೀಕ್ಷೆಯಿದ್ದು ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೀವೆ. `ಬದಲಾವಣೆಗೆ ಮುಂದಾಗಿ' ಎಂಬ ಅಭಿಯಾನಕ್ಕೆ ಜನತೆ ಬೆಂಬಲ ನೀಡಿದ್ದಾರೆ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

"ನಾವು ಒಂದು ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದು, ಇದು ಐತಿಹಾಸಿಕ ತೀರ್ಪು" ಎಂದು ರಾಮ್ ಮಾಧವ್ ಹೇಳಿದ್ದಾರೆ. ಈ ತೀರ್ಪಿನ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮ ಬಹಳಷ್ಟಿದೆ. ಅವರು ಕೇವಲ ನಾಲ್ಕು ಚುನಾವಣಾ ಸಭೆಗಲಲ್ಲಿ ಭಾಗವಹಿಸಿಲ್ಲ, ಆದರೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ತ್ರಿಪುರದಲ್ಲಿ ಬಿಜೆಪಿ ಕಾರ್ಯತಂತ್ರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.

ಅಲ್ಲದೆ, ನಾಗಾಲ್ಯಾಂಡ್ನಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಉತ್ತಮ ಮುನ್ನಡೆ ಸಾಧಿಸಿವೆ. ನಾಗಾಲ್ಯಾಂಡ್ನಲ್ಲಿ ಬಿಜೆಪಿ ಮತ್ತು ಎನ್ಡಿಪಿಪಿಗಳ ಪೂರ್ವಭಾವಿ ಚುನಾವಣೆ ಮೈತ್ರಿಕೂಟವು ಸರ್ಕಾರವನ್ನು ರಚಿಸುವಂತೆ ಮಾಡಲಿವೆ ಎಂದರು. 

ಇನ್ನುಳಿದಂತೆ, ಮೇಘಾಲಯದಲ್ಲಿ ಇಬ್ಬಗೆಯ ಫಲಿತಾಂಶಗಳು ಹೊರಬೀಳಲಿದ್ದು, ಮೇಘಾಲಯದಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ನಾವೂ ಪ್ರಯತ್ನಿಸಿದ್ದೇವೆ ಎಂದು ಮಾಧವ್ ಹೇಳಿದರು.

Trending News