“ಚೀನಾ ಬಳಿಕ ಅಮೆರಿಕಾದಿಂದ ಕೋವಿಡ್ ತರಹದ ವೈರಸ್ ಹರಡುತ್ತದೆ”: ಶಾಕಿಂಗ್ ವರದಿ ಬಹಿರಂಗ

Covid Virus Disease: ಚೀನಾದ ವುಹಾನ್ ಲ್ಯಾಬ್ ಮತ್ತು ಮಾಂಸ ಮಾರುಕಟ್ಟೆಯಿಂದ ಈ ವೈರಸ್ ಉದ್ಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಅದಕ್ಕೆ ಇದುವರೆಗೆ ಸ್ಪಷ್ಟ ಪುರಾವೆ ಸಿಕ್ಕಿಲ್ಲ.

Written by - Bhavishya Shetty | Last Updated : Jul 23, 2023, 12:40 PM IST
    • ಚೀನಾದ ವುಹಾನ್ ಲ್ಯಾಬ್ ಮತ್ತು ಮಾಂಸ ಮಾರುಕಟ್ಟೆಯಿಂದ ಈ ವೈರಸ್ ಉದ್ಭವಿಸಿದೆ
    • ಹೊವಾರ್ಡ್ ಲಾ ಸ್ಕೂಲ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ವರದಿಯು ಈ ಬಗ್ಗೆ ಹೇಳಿಕೊಂಡಿದೆ
    • ಹೆಚ್ಚಿನ ಮಟ್ಟದ ಎಚ್ಚರಿಕೆಯ ಅಗತ್ಯವಿರುತ್ತದೆ ಎಂದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವರದಿ
“ಚೀನಾ ಬಳಿಕ ಅಮೆರಿಕಾದಿಂದ ಕೋವಿಡ್ ತರಹದ ವೈರಸ್ ಹರಡುತ್ತದೆ”: ಶಾಕಿಂಗ್ ವರದಿ ಬಹಿರಂಗ title=
Covid America Virus

Covid Virus Disease: 2019ರ ಕೊನೆಯ ತಿಂಗಳಿನಿಂದ ಅಂದರೆ ಡಿಸೆಂಬರ್‌ ನಿಂದ ಪ್ರಪಂಚದ ವಿವಿಧ ಭಾಗಗಳಲ್ಲಿ ಕೋವಿಡ್ ಸುದ್ದಿ ಬರಲು ಪ್ರಾರಂಭಿಸಿತು. ಇನ್ನೊಂದೆಡೆ 2020 ಮತ್ತು 2021 ರ ವರ್ಷಗಳನ್ನು ಮರೆಯಲಾಗದು, ಲಕ್ಷಾಂತರ ಜನರು ಪ್ರಾಣ ತೆತ್ತರೆ, ಕೋಟ್ಯಾಂತರ ಮಂದಿ ಅಸೌಖ್ಯದಿಂದ ಕಂಗಾಲಾದರು.

ಇದನ್ನೂ ಓದಿ: Vivek Oberoi Fraud Case: ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ!

ಚೀನಾದ ವುಹಾನ್ ಲ್ಯಾಬ್ ಮತ್ತು ಮಾಂಸ ಮಾರುಕಟ್ಟೆಯಿಂದ ಈ ವೈರಸ್ ಉದ್ಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಅದಕ್ಕೆ ಇದುವರೆಗೆ ಸ್ಪಷ್ಟ ಪುರಾವೆ ಸಿಕ್ಕಿಲ್ಲ. ಇದೆಲ್ಲದರ ನಡುವೆ ಇದೀಗ ಅಮೆರಿಕದಲ್ಲಿ ಮಾಂಸಾಹಾರ ಪೂರೈಕೆಯಿಂದಾಗಿ ಕೋವಿಡ್‌ ನಂತಹ ಮತ್ತೆ ವಕ್ಕರಿಸಬಹುದು ಎಂಬ ಆತಂಕ ವ್ಯಕ್ತವಾಗಿರುವ ವರದಿಯೊಂದು ಹೊರಬಿದ್ದಿದೆ.

ಹೊವಾರ್ಡ್ ಲಾ ಸ್ಕೂಲ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ವರದಿಯು ಈ ಬಗ್ಗೆ ಹೇಳಿಕೊಂಡಿದೆ. ಅಮೆರಿಕನ್ನರು ತಮ್ಮ ದೇಶದಲ್ಲಿ ಅಂತಹದ್ದೇನೂ ಸಂಭವಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅಮೆರಿಕದಲ್ಲಿ ನಿಯಮಗಳು ಮತ್ತು ನಿಬಂಧನೆಗಳ ಸಡಿಲಿಕೆಯಿಂದಾಗಿ, ವೈರಸ್ ಪ್ರಾಣಿಗಳಿಂದ ಮನುಷ್ಯರನ್ನು ಸುಲಭವಾಗಿ ಪ್ರವೇಶಿಸಬಹುದು, ಇದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ನಂಬಿದ್ದಾರೆ.

ಇದನ್ನೂ ಓದಿ: ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಗಳಿಕೆ ಮಾಡ್ತಾಳೆ ಈ 'ಲೋನ್ಲಿ ಮ್ಯಾನ್ಸ್ ಗರ್ಲ್ ಫ್ರೆಂಡ್'!

ವರದಿಯ ಪ್ರಮುಖ ಲೇಖಕ ಆನ್ ಲಿಂಡರ್ ಪ್ರಕಾರ, ಅಮೆರಿಕನ್ನರು ತಮ್ಮ ದೇಶವನ್ನು ಹೊರತುಪಡಿಸಿ ಪ್ರಪಂಚದ ಯಾವುದೇ ಭಾಗದಲ್ಲಿ ಪ್ರಾಣಿಗಳಿಂದ ಹರಡುವ ರೋಗಗಳು ಉದ್ಭವಿಸುತ್ತವೆ ಎಂದು ಸುಳ್ಳು ಭದ್ರತೆಯ ಪ್ರಜ್ಞೆಯನ್ನು ಹೊಂದಿದ್ದಾರೆ. ಆದರೆ ಸತ್ಯವೆಂದರೆ ನಾವು ಹೆಚ್ಚು ಅಪಾಯದಲ್ಲಿದ್ದೇವೆ. ವರದಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಪ್ರಾಣಿಗಳನ್ನು ಸಾಕುತ್ತಿರುವ ಕೃಷಿ ಪ್ರದೇಶಗಳಿಂದ ಅಪಾಯ ಹೆಚ್ಚು. ಆ ಸ್ಥಳಗಳಲ್ಲಿ ಪ್ರಾಣಿಗಳು ಮತ್ತು ಅವುಗಳ ಪಾಲಕರು ನೇರ ಸಂಪರ್ಕದಲ್ಲಿ ವಾಸಿಸುತ್ತಾರೆ ಎಂದು ವರದಿ ವಾದಿಸುತ್ತದೆ. ಇದರೊಂದಿಗೆ, ಪ್ರಾಣಿಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಜನರು ಸಹ ರೋಗವನ್ನು ಹರಡುತ್ತಾರೆ. ಹೆಚ್ಚಿನ ಮಟ್ಟದ ಎಚ್ಚರಿಕೆಯ ಅಗತ್ಯವಿರುತ್ತದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News