ಯುದ್ಧ ವಿಮಾನದಿಂದ ಜಿಗಿದ ಬಳಿಕ ಯಾಕೆ ಪೈಲಟ್ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ?

Written by - Girish Linganna | Edited by - Manjunath N | Last Updated : May 20, 2023, 09:40 PM IST
  • ವಿಮಾನದ ಇಜೆಕ್ಷನ್ ಸೀಟ್ ಹಾನಿಗೊಳಗಾದ ವಿಮಾನದಿಂದ ಪೈಲಟ್ ಅನ್ನು ಶೀಘ್ರವಾಗಿ, ಸುರಕ್ಷಿತವಾಗಿ ಹೊರತರಲು ನಿರ್ಮಾಣಗೊಂಡಿದೆ
  • ಆದರೆ ಇದೂ ಸಹ ಒಂದಷ್ಟು ಗಾಯಗಳನ್ನು ಉಂಟುಮಾಡಬಲ್ಲದು
  • ಅತ್ಯಂತ ವೇಗವಾಗಿ ಹೊರಬರುವಾಗ ಪೈಲಟ್ ಬೆನ್ನುಹುರಿಗೆ, ತಲೆಗೆ ಏಟಾಗಬಹುದು. ಮೂಳೆಗಳು ಮುರಿಯುವ ಅಪಾಯಗಳೂ ಎದುರಾಗಬಹುದು.
 ಯುದ್ಧ ವಿಮಾನದಿಂದ ಜಿಗಿದ ಬಳಿಕ ಯಾಕೆ ಪೈಲಟ್ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ? title=
Source Martin-Baker

ಒಂದು ವೇಳೆ, ಪೈಲಟ್ ಏನಾದರೂ ವಿಮಾನದಿಂದ ಜಿಗಿಯುವ ಪರಿಸ್ಥಿತಿ ಎದುರಾದರೆ, ಆತನಿಗೆ ವೈದ್ಯಕೀಯ ಗಮನ ನೀಡುವ ಅವಶ್ಯಕತೆ ಮಹತ್ವದ್ದಾಗಿದೆ. ವೈದ್ಯಕೀಯ ಸಿಬ್ಬಂದಿಗಳು ಪೈಲಟ್‌ಗೆ ಏನಾದರೂ ಗಾಯವಾಗಿದೆಯೇ, ತೊಂದರೆ ಎದುರಾಗಿದೆಯೇ, ಎಂದು ಗಮನಿಸಿ, ಆರೋಗ್ಯ  ಅದಕ್ಕೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಅದರೊಡನೆ, ಏನಾದರೂ ಮಾನಸಿಕ ತೊಂದರೆ ಉಂಟಾಗಿದ್ದರೂ ಅದಕ್ಕೆ ತಕ್ಕ ಪರಿಹಾರ, ಬೆಂಬಲ ಒದಗಿಸಬಹುದು.

ಕಳೆದ ಸೋಮವಾರ (ಮೇ 8ರಂದು) ಭಾರತೀಯ ವಾಯುಪಡೆಯ ಮಿಗ್ - 21 ವಿಮಾನ ರಾಜಸ್ಥಾನದ ಹನುಮಾನ್ ಘರ್ ಎಂಬಲ್ಲಿ ಪತನವಾಯಿತು. ಅದರ ಪರಿಣಾಮವಾಗಿ, ಇಬ್ಬರು ಮಹಿಳೆಯರೂ ಸೇರಿದಂತೆ, ಮೂವರು ನಾಗರಿಕರು ಅಸುನೀಗಿ, ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದರು. ಆದರೆ ವಿಮಾನದ ಪೈಲಟ್ ಯಾವುದೇ ಗಾಯಕ್ಕೊಳಗಾಗದೆ ವಿಮಾನದಿಂದ ಜಿಗಿದಿದ್ದು, ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಈ ವರ್ಷಾರಂಭದಲ್ಲಿ, ಜನವರಿ 28ರಂದು ಭಾರತೀಯ ವಾಯುಪಡೆಯ ಮಿರೇಜ್ 2000 ಹಾಗೂ ಸುಖೋಯಿ ಸು-30 ವಿಮಾನಗಳು ಮಧ್ಯ ಪ್ರದೇಶದ ಗ್ವಾಲಿಯರ್ - ಚಂಬಲ್ ಪ್ರದೇಶದ ಪಹಾರ್ ಘರ್ ಅರಣ್ಯದ ಮಾನ್‌ಪುರ್ ಗ್ರಾಮದ ಮೇಲೆ ಅಭ್ಯಾಸ ಹಾರಾಟ ನಡೆಸುತ್ತಿದ್ದಾಗ ಆಕಾಶದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದು, ಪತನಗೊಂಡವು. ಮಿರೇಜ್ 2000 ವಿಮಾನದ ಪೈಲಟ್ ಗಂಭೀರ ಗಾಯಗೊಂಡ ಪರಿಣಾಮವಾಗಿ ಸಾವನ್ನಪ್ಪಿದರು. ಸುಖೋಯಿ ಸು-30 ವಿಮಾನದ ಇಬ್ಬರು ಪೈಲಟ್‌ಗಳು ತುರ್ತು ನಿರ್ಗಮನದ ಮೂಲಕ ಹೊರ ಜಿಗಿದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು.

ದೈಹಿಕ ಗಾಯಗಳ ಸಾಧ್ಯತೆಗಳು

ಯುದ್ಧ ವಿಮಾನದಿಂದ ಜಿಗಿದ ಬಳಿಕ, ಪೈಲಟ್‌ಗಳ ಆರೋಗ್ಯ ತಪಾಸಣೆ ಯಾಕೆ ನಡೆಸುತ್ತಾರೆ ಎನ್ನುವುದಕ್ಕೆ ಹಲವು ಕಾರಣಗಳಿವೆ.

• ವಿಮಾನದ ಇಜೆಕ್ಷನ್ ಸೀಟ್ ಹಾನಿಗೊಳಗಾದ ವಿಮಾನದಿಂದ ಪೈಲಟ್ ಅನ್ನು ಶೀಘ್ರವಾಗಿ, ಸುರಕ್ಷಿತವಾಗಿ ಹೊರತರಲು ನಿರ್ಮಾಣಗೊಂಡಿದೆ. ಆದರೆ ಇದೂ ಸಹ ಒಂದಷ್ಟು ಗಾಯಗಳನ್ನು ಉಂಟುಮಾಡಬಲ್ಲದು. ಅತ್ಯಂತ ವೇಗವಾಗಿ ಹೊರಬರುವಾಗ ಪೈಲಟ್ ಬೆನ್ನುಹುರಿಗೆ, ತಲೆಗೆ ಏಟಾಗಬಹುದು. ಮೂಳೆಗಳು ಮುರಿಯುವ ಅಪಾಯಗಳೂ ಎದುರಾಗಬಹುದು.

• ಪೈಲಟ್ ವಿಮಾನದಿಂದ ಹೊರಬರುವ ಸನ್ನಿವೇಶ ನಿರ್ಮಿಸಿದ ಅಪಘಾತದಲ್ಲೂ ಪೈಲಟ್ ಗಾಯಗೊಂಡಿರುವ ಸಾಧ್ಯತೆಗಳಿವೆ. ಉದಾಹರಣೆಗೆ, ವಿಮಾನವೇನಾದರೂ ಅಪಘಾತಕ್ಕೊಳಗಾದರೆ, ಆ ಅವಶೇಷಗಳ ಹೊಡೆತದಿಂದ, ಅಪಘಾತದ ತೀವ್ರತೆಯಿಂದಲೂ ಪೈಲಟ್ ಗಾಯಗೊಂಡಿರುವ ಸಾಧ್ಯತೆಗಳಿವೆ.

• ವಿಮಾನದಿಂದ ಹೊರ ಜಿಗಿಯುವಾಗ ಪೈಲಟ್ ಅತ್ಯಂತ ಎತ್ತರ ಮತ್ತು ಅತ್ಯಂತ ತಂಪಾದ ವಾತಾವರಣವನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ಆಲ್ಟಿಟ್ಯೂಡ್ ಸಿಕ್‌ನೆಸ್, ಅಥವಾ ಹೈಪೋಥರ್ಮಿಯಾದಂತಹ ಸಮಸ್ಯೆಗಳು ಉಂಟಾಗಬಹುದು.

ಪೈಲಟ್ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳು ಗಾಯಗಳು ಅಥವಾ ಆರೋಗ್ಯ ಸಮಸ್ಯೆಗಳನ್ನು ಗಮನಿಸಬಹುದು. ಇದು ಪೈಲಟ್ ಪೂರ್ಣವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಮಾನಸಿಕ ಸಮಸ್ಯೆಗಳು

ವಿಮಾನದಿಂದ ಹೊರ ಜಿಗಿಯುವ ಸಂದರ್ಭದಲ್ಲಿ ಉಂಟಾಗುವ ದೈಹಿಕ ಗಾಯಗಳ ಜೊತೆಗೆ, ಪೈಲಟ್‌ಗಳಿಗೆ ಮಾನಸಿಕ ಕ್ಷೋಭೆಗಳೂ ಕಾಡುವ ಸಾಧ್ಯತೆಗಳಿವೆ. ವಿಮಾನದಿಂದ ಹೊರ ಜಿಗಿಯುವ ಅನುಭವವೂ ಅತ್ಯಂತ ಭಯ ಉಂಟುಮಾಡಬಲ್ಲದು ಮತ್ತು ಅಪಾರ ಒತ್ತಡ ಸೃಷ್ಟಿಸಬಲ್ಲದು. ಪೈಲಟ್‌ಗಳು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) ಅಥವಾ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳೂ ಇವೆ.

ಆದ್ದರಿಂದ, ಪೈಲಟ್ ವಿಮಾನದಿಂದ ಜಿಗಿದ ಬಳಿಕ ಅವದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯನ್ನೂ ಗಮನಿಸಬೇಕಾಗುತ್ತದೆ. ಅವರಿಗೆ ಬೆಂಬಲ ಮತ್ತು ಚಿಕಿತ್ಸೆ ಒದಗಿಸುವ ಮೂಲಕ ಅವರಿಗೆ ಚೇತರಿಸಿಕೊಳ್ಳಲು ನೆರವಾಗುತ್ತಾರೆ.

ವಿಮಾನದಿಂದ ಹೊರ ಹಾರುವಾಗ ಉಂಟಾಗಬಹುದಾದ ದೈಹಿಕ ಗಾಯಗಳು

• ಬೆನ್ನುಹುರಿ ಗಾಯಗಳು

• ತಲೆಯ ಗಾಯಗಳು

• ಮೂಳೆ ಮುರಿತ

• ಆಂತರಿಕ ಗಾಯಗಳು

• ಸುಟ್ಟ ಗಾಯಗಳು

• ಹೈಪೋಥರ್ಮಿಯಾ

• ಆಲ್ಟಿಟ್ಯೂಡ್ ಸಿಕ್‌ನೆಸ್

ವಿಮಾನದಿಂದ ಜಿಗಿದ ಬಳಿಕ ಉಂಟಾಗುವ ಮಾನಸಿಕ ಸಮಸ್ಯೆಗಳು

• ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ)

• ಆತಂಕ 

• ಖಿನ್ನತೆ

• ನಿದ್ರಾಹೀನತೆ, ನಿದ್ದೆಗೆ ತೊಂದರೆ

• ದುಸ್ವಪ್ನ

ನೀವೇನಾದರೂ ಪೈಲಟ್ ಆಗಿದ್ದು, ವಿಮಾನದಿಂದ ಹೊರ ಜಿಗಿದಿದ್ದೀರಾದರೆ, ನೀವು ತಕ್ಷಣವೇ ವೈದ್ಯಕೀಯ ಸಹಾಯ ಪಡೆಯುವುದು ಅತ್ಯವಶ್ಯಕವಾಗಿದೆ. ವೈದ್ಯಕೀಯ ಸಿಬ್ಬಂದಿಗಳು ನಿಮಗಾಗಿರುವ ಗಾಯಗಳನ್ನು ಗುರುತಿಸಲು, ಚಿಕಿತ್ಸೆ ಪಡೆಯಲು ನೆರವಾಗುತ್ತಾರೆ. ಅದರೊಡನೆ, ಏನಾದರೂ ಮಾನಸಿಕ ಖಿನ್ನತೆ, ಸಮಸ್ಯೆಗಳು ಎದುರಾಗಿದ್ದರೆ, ಅದನ್ನು ಪರಿಹರಿಸಲು ಕಾರ್ಯಾಚರಿಸುತ್ತಾರೆ.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News