ಎಡಭಾಗಕ್ಕೆ ಸೆರಗು ಹಾಕಿ ಸೀರೆ ಉಡುವ ಕ್ರಮ ಹುಟ್ಟಿದ್ದು ಹೇಗೆ : ರೋಚಕ ಕಥೆ ಹೇಳಿದ ಮೋದಿ

ಎಡಭಾಗಕ್ಕೆ ಸೆರಗು ಹಾಕಿ ಸೀರೆ ಉಡುವ ಕ್ರಮ ಹುಟ್ಟಿದ್ದು ಹೇಗೆ ಎನ್ನುವ ರೋಚಕ ಕಥೆಯನ್ನು ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ. 

Written by - Zee Kannada News Desk | Last Updated : Dec 24, 2020, 03:09 PM IST
  • ಎಡಭಾಗಕ್ಕೆ ಸೆರಗು ಹಾಕಿ ಸೀರೆ ಉಡವ ಕ್ರಮ ವಿವರಿಸಿದ ಮೋದಿ
  • ಜ್ಞಾನಾಂದಿನಿ ದೇವಿಯವರೇ ಎಡಭುಜಕ್ಕೆ ಸೆರಗು ಹಾಕುವ ಪದ್ದತಿ ಕಂಡು ಹಿಡಿದದ್ದು ಎಂದ ಮೋದಿ
  • ಠಾಗೂರ್ ಮತ್ತು ಗುಜರಾತ್ ನಡುವಿನ ಸಂಬಂಧದ ಬಗ್ಗೆ ಪ್ರಧಾನಿ ಮಾತು
ಎಡಭಾಗಕ್ಕೆ ಸೆರಗು ಹಾಕಿ ಸೀರೆ ಉಡುವ ಕ್ರಮ ಹುಟ್ಟಿದ್ದು ಹೇಗೆ : ರೋಚಕ ಕಥೆ ಹೇಳಿದ  ಮೋದಿ  title=
ವಿಶ್ವಭಾರತಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ (file hotoe)ನರೇಂದ್ರ ಮೋದಿ ಸಂವಾದ (

ನವದೆಹಲಿ: ವಿಶ್ವಭಾರತಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi) ಭಾಗವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ, ವಿಶ್ವ ಭಾರತಿ ವಿಶ್ವವಿದ್ಯಾಲಯ ಭಾರತದಲ್ಲಿ ಗುರುವಿನ ಚಿಂತನೆ, ದರ್ಶನ ಮತ್ತು ಪರಿಶ್ರಮವನ್ನು ನಿರೂಪಿಸುತ್ತದೆ  ಎಂದು ಹೇಳಿದರು.  ಈ ಸಂದರ್ಭದಲ್ಲಿ ಮಹಿಳೆಯರು ಉಲ್ಟಾ ಸೀರೆ (Saree) ಉಡುವ ಕ್ರಮ ಆರಂಭವಾಗಿದ್ದು ಹೇಗೆ ಎನ್ನುವ ರೋಚಕ ಮಾಹಿತಿಯನ್ನು ಹಂಚಿಕೊಂಡಿದ್ದು  ವಿಶೇಷವಾಗಿತ್ತು.

ಎಡ ಬದಿಗೆ ಸೆರಗು ಹಾಕಿ ಸೀರೆ ಉಡುವ ಕ್ರಮ ಹುಟ್ಟಿದ್ದು ಹೇಗೆ? :
ಗುರುದೇವ್ ರವೀಂದ್ರನಾಥ ಠಾಗೂರ್ (Ravindranath Tagore) ಅವರ ಸಹೋದರ, ದೇಶದ ಪ್ರಥಮ ಐಸಿಎಸ್ ಅಧಿಕಾರಿ ಸತ್ಯೇಂದ್ರ ಠಾಗೂರ್ ಪತ್ನಿ ಜ್ಞಾನಾಂದಿನಿ ದೇವಿ (Jnanandini Devi) ಅವರು, ಎಡ ಭಾಗದಿಂದ ಸೆರಗು ಹಾಕಿ ಸೀರೆ ಉಡುವುದು ಹೇಗೆ ಎನ್ನುವುದನ್ನು ಮಹಿಳೆಯರಿಗೆ ಕಲಿಸಿಕೊಟ್ಟರು ಎಂಬ ಮಾಹಿತಿಯನ್ನು ಪ್ರಧಾನಿ  ಸಂವಾದದಲ್ಲಿ ಹಂಚಿಕೊಂಡರು.  ಐಸಿಎಸ್ ಅಧಿಕಾರಿಯಾದ ಸತ್ಯೇಂದ್ರ ಠಾಗೂರ್ ಅವರ ಪೋಸ್ಟಿಂಗ್ ಗುಜರಾತ್ ನ ಅಹಮದಾಬಾದ್ ನಲ್ಲಿ ಆಗಿತ್ತು. ಈ ಸಂದರ್ಭದಲ್ಲಿ ಜ್ಞಾನಾಂದಿನಿ ದೇವಿಕೂಡಾ ಅಹಮದಾಬಾದ್ ನಲ್ಲಿ  ನೆಲೆಸಿದ್ದರು.  ಆ ಸಂದರ್ಭದಲ್ಲಿ ಇಲ್ಲಿನ  ಸ್ಥಳೀಯ ಮಹಿಳೆಯರು ಬಲ ಭಾಗದಲ್ಲಿ ಸೆರಗು ಹಾಕಿ ಸೀರೆ  ಉಡುತ್ತಿದ್ದರು. ಇದರಿಂದ ಮಹಿಳೆಯರಿಗೆ ತಮ್ಮ ಕೆಲಸ ಕಾರ್ಯಗಳನ್ನು ನಡೆಸಲು ಬಹಳ ಕಷ್ಟವಾಗುತ್ತಿತ್ತು. ಇದನ್ನು ನೋಡಿದ  ಜ್ಞಾನಾಂದಿನಿ ದೇವಿಗೆ  ಸೀರೆಯ  ಸೆರಗನ್ನು ಬಲಭಾಗದ ಬದಲು ಎಡಭಾಗದಲ್ಲಿ ಹಾಕಿದರೆ ಹೇಗೆ ಎಂಬ ಯೋಚನೆ ಬಂತಂತೆ.

ALSO READ: PM Narendra Modi: ಡಿ.25ರಂದು ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ..!

ಈ ವಿಚಾರದ ಬಗ್ಗೆ ಅಧ್ಯಯನ ಮಡುವ ಅಗತ್ಯವಿದೆ ಎಂದ ಪ್ರಧಾನಿ:
ನನಗೆ ಗೊತ್ತಿದ್ದ ವಿಚಾರವನ್ನು ನಾನು ತಿಳಿಸಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿಲ್ಲ.  ಮಹಿಳಾ ಸಬಲೀಕರಣದ (Women Empowerment) ಜೊತೆ ಗುರುತಿಸಿಕೊಂಡ ಸಂಘಟನೆಗಳು ಈ ಬಗ್ಗೆ ಅಧ್ಯಯನ ನಡೆಸಬೇಕಿದೆ  ಎಂದು ಪ್ರಧಾನಿ ಹೇಳಿದರು. 

ALSO READ: PM Kisan: ನಾಳೆಯಿಂದ ರೈತರ ಖಾತೆಗೆ ಸೇರಲಿದೆ 2000 ರೂಪಾಯಿ

ಠಾಗೂರ್ ಮತ್ತು ಗುಜರಾತ್ ನಡುವಿನ ಸಂಬಂಧದ ನೆನಪು:
ಇದೇ ವೇಳೆ ರವೀಂದ್ರನಾಥ್ ಠಾಗೂರ್ ಮತ್ತು ಗುಜರಾತ್ ನಡುವಿನ ಸಂಬಂಧದ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. ಗುರುದೇವ್ ಬಗ್ಗೆ ಮಾತಿಗೆ ಇಳಿದರೆ ಅವರ ಮತ್ತು ಗುಜರಾತ್ (Gujrath) ನಡುವಿನ ಆತ್ಮೀಯ ಸಂಬಂಧದ ಬಗ್ಗೆ ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಈ ನೆನಪುಗಳು ನಮ್ಮಲ್ಲಿ  ಒಂದು ಭಾರತ ಶ್ರೇಷ್ಟ ಭಾರತೆಂಬ ಭಾವನೆ ಗಟ್ಟಿಗೊಳ್ಳಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಮತ್ತೆ ಮತ್ತೆ ಈ ಬಗ್ಗೆ  ಹೇಳಬೇಕಾಗಿದೆ. ನಮ್ಮಲ್ಲಿ ಬೇರೆ ಬೇರೆ ಭಾಷೆಯನ್ನಾಡುವವರಿದ್ದೇವೆ. ನಮ್ಮಆಹಾರ ಪದ್ದತಿಯಲ್ಲಿ ವೈವಿಧ್ಯತೆಯಿದೆ. ಆದರೂ ನಾವು ಒಗ್ಗಟ್ಟಾಗಿದ್ದೇವೆ.ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ನಮ್ಮದು ಎಂದು ಪ್ರಧಾನಿ ವಿವರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News