Shashi Tharoor : ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ತರೂರ್ ಮನವೊಲಿಸಿದವರು ಯಾರು? ರಹಸ್ಯ ಬಿಚ್ಚಿಟ್ಟ ಶಶಿ

ಪಕ್ಷದಲ್ಲಿ ಚುನಾವಣೆ ಏಕೆ ಬೇಕು ಎಂದು ನಾನು ಲೇಖನ ಬರೆದಿದ್ದೆ, ನಂತರ ಪಕ್ಷದ ಅನೇಕ ಜನರು ಮತ್ತು ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ಸ್ಪರ್ಧಿಸುವಂತೆ ಕೇಳಿಕೊಂಡರು ಎಂದರು.

Written by - Channabasava A Kashinakunti | Last Updated : Oct 1, 2022, 03:55 PM IST
  • ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್
  • ಶಶಿ ತರೂರ್ ಮನವೊಲಿಸಿದವರು ಯಾರು?
  • ಮಹಾರಾಷ್ಟ್ರದಿಂದ ಚುನಾವಣಾ ಪ್ರಚಾರ ಆರಂಭ
Shashi Tharoor : ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ತರೂರ್ ಮನವೊಲಿಸಿದವರು ಯಾರು? ರಹಸ್ಯ ಬಿಚ್ಚಿಟ್ಟ ಶಶಿ title=

Congress President Election : ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಮನವೊಲಿಸಿದವರು ಯಾರು? ಎಂಬುವುದನ್ನ ಕುದ್ದು ಅವರೆ ರಹಸ್ಯ ಬಿಚ್ಚಿಟ್ಟಿದ್ದಾರೆ. 

ಈ ಬಗ್ಗೆ ಮಾತನಾಡಿದ ಶಶಿ ತರೂರ್, ಕಾಂಗ್ರೆಸ್ ಪಕ್ಷದೊಳಗಿದ್ದ ಪ್ರಜಾಪ್ರಭುತ್ವವನ್ನು ನಾವು ತೋರಿಸುತ್ತಿದ್ದೇವೆ, ಅದು ಬೇರೆ ಯಾವ ಪಕ್ಷದಲ್ಲೂ ಇಲ್ಲ. ಪಕ್ಷದಲ್ಲಿ ಚುನಾವಣೆ ಏಕೆ ಬೇಕು ಎಂದು ನಾನು ಲೇಖನ ಬರೆದಿದ್ದೆ, ನಂತರ ಪಕ್ಷದ ಅನೇಕ ಜನರು ಮತ್ತು ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ಸ್ಪರ್ಧಿಸುವಂತೆ ಕೇಳಿಕೊಂಡರು ಎಂದರು.

ಇದನ್ನೂ ಓದಿ : BOB Recruitment 2022 : ಬ್ಯಾಂಕ್ ಆಫ್ ಬರೋಡಾದಲ್ಲಿ 346 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ನೋಡಿ ಮಾಹಿತಿ

ಮಹಾರಾಷ್ಟ್ರದಿಂದ ಚುನಾವಣಾ ಪ್ರಚಾರ ಆರಂಭ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಇಂದು (ಶನಿವಾರ) ಮಹಾರಾಷ್ಟ್ರದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದ ದೀಕ್ಷಾಭೂಮಿಗೆ ಭೇಟಿ ನೀಡುವ ಮೂಲಕ ಶಶಿ ತರೂರ್ ಅವರು ಮೊದಲು ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಆಶಿಶ್ ದೇಶಮುಖ್ ಹೇಳಿದ್ದಾರೆ. ದೇಶಮುಖ್ ಅವರು ತಿರುವನಂತಪುರಂ ಸಂಸದ ತರೂರ್ ಅವರ ಭೇಟಿಗೆ ಇಲ್ಲಿಗೆ ವ್ಯವಸ್ಥೆ ಮಾಡಿದ್ದಾರೆ.

ದೀಕ್ಷಾಭೂಮಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದನ್ ತರೂರ್

66 ವರ್ಷದ ಶಶಿ ತರೂರ್ ಅವರು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಶಶಿ ತರೂರ್ ಅವರು ಶನಿವಾರ ಸಂಜೆ 4:50ಕ್ಕೆ ನಾಗ್ಪುರ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ದೀಕ್ಷಾಭೂಮಿಗೆ ತೆರಳಿ ಅಲ್ಲಿ ಡಾ.ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಶಶಿ ತರೂರ್ ತಮ್ಮ ಪ್ರಯಾಣದ ವಿವರದಲ್ಲಿ ತಿಳಿಸಿದ್ದಾರೆ.

ತರೂರ್ ಕಾಂಗ್ರೆಸ್ ಕಾರ್ಯಕರ್ತರ ಭೇಟಿ

ನಂತರ ಭಾನುವಾರ ಬೆಳಗ್ಗೆ 9 ಗಂಟೆಗೆ ವಾರ್ಧಾದಲ್ಲಿರುವ ಮಹಾತ್ಮ ಗಾಂಧಿ ಅವರ ಸೇವಾಗ್ರಾಮ ಆಶ್ರಮಕ್ಕೆ ಭೇಟಿ ನೀಡಲಿರುವ ಶಶಿ ತರೂರ್ ನಂತರ ಪವನರ್‌ನಲ್ಲಿರುವ ವಿನೋಬಾ ಭಾವೆ ಅವರ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾಗ್ಪುರಕ್ಕೆ ವಾಪಸಾಗಲಿದ್ದು, ಹಿರಿಯ ಕಾಂಗ್ರೆಸ್ ನಾಯಕರು, ಪಕ್ಷದ ರಾಜ್ಯ ಘಟಕದ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ : Rajasthan Political Crisis: ಸಚಿನ್ ಪೈಲಟ್ ವಿರುದ್ಧ ಸೋನಿಯಾ ಗಾಂಧಿಗೆ ಗೆಹಲೋಟ್ ದೂರು! ಬಹಿರಂಗಗೊಂಡ ಪತ್ರದಲ್ಲೆನಿದೆ?

ಇನ್ನೂ ಆಶಿಶ್ ದೇಶಮುಖ್ ಮಾತನಾಡಿ, 'ಶಶಿ ತರೂರ್ ಅವರು ಜನಪ್ರಿಯ ಕಾಂಗ್ರೆಸ್ ಸಂಸದರಾಗಿದ್ದು, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾಗಿ ಗಮನಾರ್ಹ ಕೆಲಸ ಮಾಡಿದ್ದಾರೆ. 12 ರಾಜ್ಯಗಳ ಕಾಂಗ್ರೆಸ್ ಪ್ರತಿನಿಧಿಗಳು ಶಶಿ ತರೂರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಮತ್ತು ಅವರು ದೇಶಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಗಮನಾರ್ಹವೆಂದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಮತ್ತು ಕೆ. ಎನ್. ತ್ರಿಪಾಠಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News