ಸಿಎಂ ಆಗಿದ್ದಾಗ ಗುಜರಾತನ್ನು ದ.ಕೊರಿಯಾ ಮಾಡಲು ಬಯಸಿದ್ದೆ- ಪ್ರಧಾನಿ ಮೋದಿ

ಪ್ರಧಾನಿ ಮೋದಿ ಡೆಹ್ರಾಡೂನ್ ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಸಿಎಂ ಆಗಿದ್ದಾಗ ತಾವು ಗುಜರಾತನ್ನು ದಕ್ಷಿಣ ಕೊರಿಯಾ ಮಾಡಲು ಬಯಸಿದ್ದಾಗಿ ತಿಳಿಸಿದರು. 

Last Updated : Oct 7, 2018, 06:50 PM IST
ಸಿಎಂ ಆಗಿದ್ದಾಗ ಗುಜರಾತನ್ನು ದ.ಕೊರಿಯಾ ಮಾಡಲು ಬಯಸಿದ್ದೆ- ಪ್ರಧಾನಿ ಮೋದಿ  title=

ನವದೆಹಲಿ: ಪ್ರಧಾನಿ ಮೋದಿ ಡೆಹ್ರಾಡೂನ್ ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಸಿಎಂ ಆಗಿದ್ದಾಗ ತಾವು ಗುಜರಾತನ್ನು ದಕ್ಷಿಣ ಕೊರಿಯಾ ಮಾಡಲು ಬಯಸಿದ್ದಾಗಿ ತಿಳಿಸಿದರು. 

ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ"  ನಮ್ಮ ರಾಜ್ಯಗಳು ಜಗತ್ತಿನ ಹಲವು ದೇಶಗಳಿಗಿಂತ ಅಧಿಕ ಶಕ್ತಿ ಸಾಮರ್ಥ್ಯವನ್ನು ಹೊಂದಿವೆ. ನನಗೆ ಇನ್ನು ನೆನಪಿದೆ 2001 ರಲ್ಲಿ ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದಾಗ ನನಗೆ ಸರ್ಕಾರವೆಂದರೆ ಏನು ಎಂದು ತಿಳಿದಿರಲಿಲ್ಲ ಆಗ ಅನುಭವದ ಕೊರತೆ ಇತ್ತು, ಆಗ ನಾನು ಹೊಸಬ. ಒಬ್ಬ ಪತ್ರಕರ್ತ ಬಂದು ಅಭಿವೃದ್ದಿಯಲ್ಲಿ ಗುಜರಾತಿಗೆ ಯಾರು ಮಾದರಿ ಎಂದು ಕೇಳಿದ, ಈ ರೀತಿ ಕೇಳಿದಾಗ ಬಹುತೇಕರು ತಾವು ಅಮೇರಿಕಾ ಅಥವಾ ಇಂಗ್ಲೆಂಡ್  ಮಾಡುವುದಾಗಿ ಹೇಳುತ್ತಾರೆ. ಆದರೆ ನಾನು ಅವನಿಗೆ ಭಿನ್ನ ಉತ್ತರ ನೀಡಿದೆ. ಅದು ಏನೆಂದರೆ ನಾನು ಗುಜರಾತನ್ನು ದಕ್ಷಿಣ ಕೊರಿಯಾ ಮಾಡುವುದಾಗಿ ಹೇಳಿದೆ. ಆದರೆ ಆ ಪತ್ರಕರ್ತನಿಗೆ ಇದು ಅರ್ಥವಾಗಲಿಲ್ಲ, ಅನಂತರ ಅವನಿಗೆ ವಿವರಿಸುತ್ತಾ ಗುಜರಾತ್ ಮತ್ತು ದಕ್ಷಿಣ ಕೊರಿಯಾ ಜನಸಂಖ್ಯೆ ಪ್ರಮಾಣದಲ್ಲಿ ಸಮಾನವಾಗಿವೆ ಎಂದು ಹೇಳಿದೆ" ಎಂದು ಮೋದಿ ಸಮಾವೇಶದಲ್ಲಿ ತಿಳಿಸಿದರು.

ಈ ಸಮಾವೇಶದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ,ಪಿಯುಶ್ ಗೋಯಲ್,ರವಿ ಶಂಕರ್ ಪ್ರಸಾದ ಇನ್ನು ಮುಂತಾದವರು ಹಲವು ವಿಷಯಗಳ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
 

Trending News