ನವದೆಹಲಿ: ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ನ ಸ್ವಾಮ್ಯದ WhatsApp ತನ್ನ ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊರತರಲಿದೆ.
ಈ ಗ್ರೂಪ್ ಕಾಲಿಂಗ್ ಸೌಲಭ್ಯವು ಏಕಕಾಲಕ್ಕೆ ನಾಲ್ಕು ಜನರ ಕರೆ ಮಾಡುವ ಮತ್ತು ಧ್ವನಿ ಮತ್ತು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡುತ್ತಿದೆ.
"ಕಳೆದ ಎರಡು ವರ್ಷಗಳಲ್ಲಿ, ವಾಟ್ಸಾಪ್ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡುವ ಸಂಖ್ಯೆ ಅಧಿಕವಾಗಿದ್ದು.ವಾಸ್ತವವಾಗಿ, ನಮ್ಮ ಬಳಕೆದಾರರು ದಿನಕ್ಕೆ 2 ಮಿಲಿಯನ್ಗಿಂತಲೂ ಹೆಚ್ಚು ನಿಮಿಷಗಳ ಕಾಲ ವ್ಯಯ ಮಾಡುತ್ತಾರೆ.ಈಗ ನಾವು ಆ ಗ್ರೂಪ್ ಕರೆಗಳು WhatsApp ಗೆ ಬರುತ್ತಿವೆ ಎಂದು ತಿಳಿಸಲು ನಮಗೆ ಸಂತಸವಾಗುತ್ತಿದೆ ಎಂದು WhatsApp ತನ್ನ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದೆ.
ಈ ವೈಶಿಷ್ಟ್ಯವು WhatsApp ಆಂಡ್ರಾಯ್ಡ್ ಬೀಟಾ ಆವೃತ್ತಿ 2.18.216 ಗೆ ಲಭ್ಯವಿದೆ.ಇತ್ತೀಚಿಗೆ ವಾಟ್ಸ್ ಅಪ್ ಬಳಕೆದಾರರ ಬೇಡಿಕೆಗಳಿಗನುಗುಣವಾಗಿ ಹೊಸ ಫೀಚರ್ ಗಳನ್ನ ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.