ಸೆಕ್ಷನ್ 377 ಎಂದರೇನು? ಈ ಕಾಯ್ದೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು

ಸುಪ್ರೀಂಕೋರ್ಟ್ ಇಂದು ಸೆಕ್ಷನ್ 377 ಕುರಿತಾಗಿ ಮಹತ್ವದ ತೀರ್ಪನ್ನು ನೀಡಿದೆ.ಈ ಹಿಂದೆ ಕಾಯ್ದೆ ಪ್ರಕಾರ ಸಲಿಂಗಕಾಮ ಕಾನೂನು ಅಪರಾಧವಾಗಿತ್ತು ಈಗ ಈ ಕಾಯ್ದೆಯನ್ನು ಅಮಾನ್ಯಗೊಳಿಸಿರುವ ಸುಪ್ರಿಂಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪನ್ನು ನೀಡಿದೆ.

Last Updated : Sep 6, 2018, 01:58 PM IST
ಸೆಕ್ಷನ್ 377 ಎಂದರೇನು? ಈ ಕಾಯ್ದೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು title=

ನವದೆಹಲಿ: ಸುಪ್ರೀಂಕೋರ್ಟ್ ಇಂದು ಸೆಕ್ಷನ್ 377 ಕುರಿತಾಗಿ ಮಹತ್ವದ ತೀರ್ಪನ್ನು ನೀಡಿದೆ.ಈ ಹಿಂದೆ ಈ ಕಾಯ್ದೆ ಪ್ರಕಾರ ಸಲಿಂಗಕಾಮ ಕಾನೂನು ಅಪರಾಧವಾಗಿತ್ತು ಈಗ ಈ ಕಾಯ್ದೆಯನ್ನು ಅಮಾನ್ಯಗೊಳಿಸಿರುವ ಸುಪ್ರಿಂಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪನ್ನು ನೀಡಿದೆ.ಆ ಮೂಲಕ ಸುಮಾರು 158 ವರ್ಷಗಳ ಈ ಬ್ರಿಟಿಷರ ವಸಾಹತು ಕಾನೂನಿಗೆ ಅಂತಿಮ ತೆರೆಬಿದ್ದಿದೆ.

ಈ ವಿಚಾರವಾಗಿ ನಾಲ್ಕು ದಿನಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನೋಳಗೊಂಡ ಐದು ನ್ಯಾಯಾಧೀಶರ ಪೀಠ ಈ ಕಾಯ್ದೆಯನ್ನು ಅಮಾನ್ಯ ಮಾಡಿದೆ.

ಹಾಗಾದರೆ ಸೆಕ್ಷನ್ 377 ಎಂದರೇನು? ಏನು ಹೇಳುತ್ತೆ ಕಾನೂನು?

ಭಾರತೀಯ ದಂಡ ಸಂಹಿತೆ ಸೆಕ್ಷನ್ 377 ಸಲಿಂಗಕಾಮವು ಅಪರಾಧ ಎಂದು ಹೇಳುತ್ತದೆ. ಈ ಕಾಯ್ದೆ ವ್ಯಾಖ್ಯಾನಿಸುವಂತೆ " ಯಾರಾದರೂ ಸ್ವಯಂಕೃತವಾಗಿ ಮಹಿಳೆ,ಪುರುಷ,ಪ್ರಾಣಿ ಜೊತೆ ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆ ನಡೆಸಿದ್ದೆ ಆದಲ್ಲಿ ಅಂತವರಿಗೆ ಜೀವಾವಧಿ ಶಿಕ್ಷೆ ಅಥವಾ10 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ"ಎಂದು ಕಾಯ್ದೆ ಹೇಳುತ್ತದೆ. ಈ ಕಾನೂನು ಬ್ರಿಟಿಷರ ಕಾಲಾವಧಿಯಲ್ಲಿ ಮೊದಲ ಬಾರಿಗೆ 1862 ರಲ್ಲಿ ಜಾರಿಗೆ ಬಂದಿತು.ಅಂದಿನಿಂದ ಭಾರತದಲ್ಲಿ ಸಲಿಂಗ ಕಾಮದ ವಿಚಾರವಾಗಿ ಈ ಹಳೆಯ ಕಾನೂನನ್ನೇ ಮುಂದುವರೆಸಿಕೊಂಡು ಬರಲಾಗಿತ್ತು.

ದೆಹಲಿ ಹೈಕೋರ್ಟ್ ನಲ್ಲಿ ಆಗಿದ್ದೇನು?

ಸಲಿಂಗಕಾಮದ ವಿಚಾರವಾಗಿ ಮೊದಲ ಬಾರಿಗೆ ಸರ್ಕಾರೇತರ ಸಂಸ್ಥೆ ನಾಜ್ ಫೌಂಡೆಶನ್  2001 ರಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿತು.ಆದರೆ 2009 ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವನ್ನು ಅಕ್ರಮ ಎಂದು ತೀರ್ಪು ನೀಡಿತು. ಆದರೆ 2013 ರಲ್ಲಿ  ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ನೀಡುತ್ತಾ ಈ ಕಾಯ್ದೆಯನ್ನು ರದ್ದುಪಡಿಸುವುದು ಅಥವಾ ಈ ಕುರಿತಾಗಿ ನಿರ್ಧರಿಸುವುದು ಸಂಸತ್ತಿಗೆ ಬಿಟ್ಟದ್ದು ಎಂದು ತೀರ್ಪನ್ನು ನೀಡಿತು. 

ಸಂವಿಧಾನದ ಹಲವು ವಿಧಿಗಳಿಗೆ ವಿರೋಧ 

 ಲಿಂಗ ಕಾರ್ಯಕರ್ತರು ಹೇಳುವಂತೆ ಸೆಕ್ಷನ್ 377 ಸಂವಿಧಾನದಲ್ಲಿ ಹಲವು ವಿಧಿಗಳನ್ನು ವಿರೋಧಿಸುತ್ತದೆ ಎನ್ನಲಾಗಿದೆ.ಅವುಗಳಲ್ಲಿ ಪ್ರಮುಖವಾಗಿ-

* ವಿಧಿ 14 ಸಮಾನತೆಯ ಹಕ್ಕಿಗೆ ವಿರುದ್ದವಾಗಿದೆ. 
* ವಿಧಿ 15  ಯಾವುದೇ ವ್ಯಕ್ತಿಯನ್ನು ಜಾತಿ ಲಿಂಗ,ವರ್ಣ ಆಧಾರದ ಮೇಲೆ ತಾರತಮ್ಯ ಮಾಡುವ ಹಾಗಿಲ್ಲ ಎಂದು ಹೇಳುತ್ತದೆ.
*ವಿಧಿ 21 ವ್ಯಕ್ತಿಗೆ ಬದುಕುವ ಹಕ್ಕು ವೈಯಕ್ತಿಕ  ಹಕ್ಕಿನ ಸ್ವಾತಂತ್ರ್ಯವನ್ನು ನೀಡುತ್ತದೆ. 

ಸೆಕ್ಷನ್ 377ನ್ನು ವಿರೋಧಿಸಿ ಭರತನಾಟ್ಯ ನೃತ್ಯಗಾರ್ತಿ ನವತೇಜ್ ಸಿಂಗ್ ಜೋಹರ್, ಪತ್ರಕರ್ತ ಸುನಿಲ್ ಮೆಹ್ರಾ, ರಿತು ಡಾಲ್ಮಿಯಾ, ನೆಮ್ರಾನಾ ಹೊಟೇಲ್ ಚೈನ್ ಸಹ-ಸಂಸ್ಥಾಪಕ ಅಮನ್ ನಾಥ್ ಮತ್ತು  ಆಯಿಷಾ ಕಪೂರ್. ಸುರ್ಪಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. 

Trending News