ಪಶ್ಚಿಮ ಬಂಗಾಳದಲ್ಲಿ ಬಂದ್‌ಗಳಿಗೆ ಅವಕಾಶವಿಲ್ಲ: ಮಮತಾ ಬ್ಯಾನರ್ಜಿ

34 ವರ್ಷಗಳ ಕಾಲ ಅವರು (ಎಡಪಕ್ಷಗಳು) ಬಂದ್‌ಗಳನ್ನು ನಡೆಸಿ ರಾಜ್ಯವನ್ನು ಸರ್ವನಾಶಮಾಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ಬಂದ್ ನಡೆಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Last Updated : Jan 8, 2019, 04:14 PM IST
ಪಶ್ಚಿಮ ಬಂಗಾಳದಲ್ಲಿ ಬಂದ್‌ಗಳಿಗೆ ಅವಕಾಶವಿಲ್ಲ: ಮಮತಾ ಬ್ಯಾನರ್ಜಿ title=

ಕೋಲ್ಕತ್ತಾ: ಕೇಂದ್ರ ಸರ್ಕಾರದ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಯಿಂದ ರಾಜ್ಯದಲ್ಲಿ ಯಾವುದೇ ಪರಿಣಾಮವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿಧಾನಸಭಾ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಾ, ಬಂದ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, 'ಪಶ್ಚಿಮ ಬಂಗಾಳದಲ್ಲಿ ಯಾವುದೇ ಬಂದ್‌ಗೂ ಬೆಂಬಲ ನೀಡದಿರಲು ನಾವು ನಿರ್ಧರಿಸಿದ್ದೇವೆ. ಬಂದ್ ನಡೆಸಿದ್ದು ಸಾಕು. 34 ವರ್ಷಗಳ ಕಾಲ ಅವರು (ಎಡಪಕ್ಷಗಳು) ಬಂದ್‌ಗಳನ್ನು ನಡೆಸಿ ರಾಜ್ಯವನ್ನು ಸರ್ವನಾಶಮಾಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ಬಂದ್ ನಡೆಯುವುದಿಲ್ಲ' ಎಂದರು.

ಅಲ್ಲದೆ, ರಾಜ್ಯದಲ್ಲಿ ಬಂದ್ ಪ್ರಯುಕ್ತ ಮಂಗಳವಾರ ಮತ್ತು ಬುಧವಾರ ರಾಜ್ಯ ಸರಕಾರಿ ನೌಕರರು ಯಾವುದೇ ರಜೆ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಳೆದ ವಾರವೇ ರಾಜ್ಯ ಸರಕಾರ ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಿದೆ ಎಂದು ಮಮಟಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. 

Trending News