ಪ್ರಧಾನಿ ಮೋದಿಗೆ ಸ್ಥಿರ ಸರ್ಕಾರ ನೀಡುವುದಾಗಿ ಹೇಳಿದ ಅಜಿತ್ ಪವಾರ್...!

ಶನಿವಾರ ನಡೆದ ಅಚ್ಚರಿಯ ಸಮಾರಂಭದಲ್ಲಿ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿ ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದಾಗಿ ಭರವಸೆ ನೀಡಿದರು.

Last Updated : Nov 24, 2019, 05:18 PM IST
 ಪ್ರಧಾನಿ ಮೋದಿಗೆ ಸ್ಥಿರ ಸರ್ಕಾರ ನೀಡುವುದಾಗಿ ಹೇಳಿದ ಅಜಿತ್ ಪವಾರ್...!   title=
file photo

ನವದೆಹಲಿ: ಶನಿವಾರ ನಡೆದ ಅಚ್ಚರಿಯ ಸಮಾರಂಭದಲ್ಲಿ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿ ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದಾಗಿ ಭರವಸೆ ನೀಡಿದರು.

“ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಜಿಯವರೇ.ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸ್ಥಿರ ಸರ್ಕಾರವನ್ನು ನಾವು ನೀಡುತ್ತೇವೆ ”ಎಂದು ನೂತನ ಡಿಸಿಎಂ ಅಜಿತ್ ಪವಾರ್ ಟ್ವೀಟ್ ಮಾಡಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ ಬಿಜೆಪಿ ನಾಯಕರಾದ ಸ್ಮೃತಿ ಇರಾನಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರಿಗೆ ಸರಣಿ ಟ್ವೀಟ್ ಗಳಲ್ಲಿ ಅಜಿತ್ ಪವಾರ್ ಧನ್ಯವಾದ ಅರ್ಪಿಸಿದ್ದಾರೆ.

ಇಂದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದ ಪತ್ರವನ್ನು ಸೋಮವಾರ ಬೆಳಿಗ್ಗೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶಿಸಿದೆ. ಸೋಮವಾರ ಬೆಳಿಗ್ಗೆ 10.30 ಕ್ಕೆ ರಾಜ್ಯಪಾಲರ ಪತ್ರಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ. ಮೆಹ್ತಾ ಎರಡು ದಿನಗಳ ಸಮಯವನ್ನು ಕೋರಿದರು, ಆದರೆ ಅದನ್ನು ನ್ಯಾಯಾಲಯ ನಿರಾಕರಿಸಿತು.

ಶನಿವಾರ ಸಂಜೆ, ಎನ್‌ಸಿಪಿ ಅಜಿತ್ ಪವಾರ್ ಅವರನ್ನು ಪಕ್ಷದ ಶಾಸಕಾಂಗ ಘಟಕದ ಮುಖ್ಯಸ್ಥರನ್ನಾಗಿ ತೆಗೆದುಹಾಕಿತು, ಫಡ್ನವಿಸ್ ಸರ್ಕಾರವನ್ನು ಬೆಂಬಲಿಸುವ ಅವರ ನಿರ್ಧಾರವು ಪಕ್ಷದ ನೀತಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದರು.  
 

Trending News