Airtel, Jio ಬಳಿಕ VI ಗ್ರಾಹಕರಿಕ್ ಶಾಕ್, ಮೊಬೈಲ್ ಟ್ಯಾರಿಫ್ ಪ್ಲಾನ್‌ಗಳ ಬೆಲೆ ಹೆಚ್ಚಳ

Vodafone-Idea Recharge Plans: ಏರ್‌ಟೆಲ್, ಜಿಯೋ ಬೆನ್ನಲ್ಲೇ ಇದೀಗ ವೊಡಾಫೋನ್-ಐಡಿಯಾ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹಚ್ಚಿಸಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಗಮನಾರ್ಹವಾಗಿ, 2021 ರ ನಂತರ ಟೆಲಿಕಾಂ ಕಂಪನಿಗಳಿಂದ ಟ್ಯಾರಿಫ್  ಪ್ಲಾನ್ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಇದೇ ಮೊದಲು.

Written by - Yashaswini V | Last Updated : Jul 1, 2024, 10:14 AM IST
  • ಜುಲೈ 3 ರಿಂದ ಜಿಯೋ ಮೊಬೈಲ್ ಸೇವೆಗಳ ದರವನ್ನು ಶೇಕಡಾ 12 ರಿಂದ 27 ರಷ್ಟು ಹೆಚ್ಚಿಸಲಿದೆ
  • ಅದೇ ಸಮಯದಲ್ಲಿ, ಗ್ರಾಹಕರಿಗೆ ಅನಿಯಮಿತ ಉಚಿತ 5G ಸೇವೆಗಳಿಗೆ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ
  • ಜಿಯೋ 47 ಕೋಟಿಗೂ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿದೆ ಮತ್ತು ಅದರ ಮಾರುಕಟ್ಟೆ ಪಾಲು ಶೇಕಡಾ 41 ರಷ್ಟಿದೆ.
Airtel, Jio ಬಳಿಕ VI ಗ್ರಾಹಕರಿಕ್ ಶಾಕ್, ಮೊಬೈಲ್ ಟ್ಯಾರಿಫ್ ಪ್ಲಾನ್‌ಗಳ ಬೆಲೆ ಹೆಚ್ಚಳ  title=

Vodafone-Idea Recharge Plan: ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟ ಎಂಬಂತಾಗಿದೆ.  ಈ ಮಧ್ಯೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಿಗೆ ಬಿಸಿತುಪ್ಪದಂತಾಗಿದೆ. ಇದೀಗ ಟೆಲಿಕಾಂ ಕಂಪನಿಗಳೂ ಕೂಡ ಜನರ ಹೊರೆ ಹೆಚ್ಚಿಸುತ್ತಿರುವುದು ಗ್ರಾಹಕರಲ್ಲಿ ನಿರಾಸೆ ಉಂಟು ಮಾಡುತ್ತಿದೆ. 

ಹೌದು, ರಿಲಯನ್ಸ್ ಜಿಯೋ (Reliance Jio) ಮತ್ತು ಏರ್‌ಟೆಲ್ (Airtel) ನಂತರ, ಇದೀಗ ವೊಡಾಫೋನ್-ಐಡಿಯಾ (VI) ಸಹ ತನ್ನ  ಮೊಬೈಲ್ ಟ್ಯಾರಿಫ್ ಪ್ಲಾನ್‌ಗಳ ಬೆಲೆಗಳನ್ನು ಹೆಚ್ಚಿಸಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ತಮ್ಮ ಸುಂಕದ ದರಗಳನ್ನು ಹೆಚ್ಚಿಸಿದ ಒಂದು ದಿನದ ನಂತರ  VI ಕೂಡ ಬೆಲೆ ಹೆಚ್ಚಳವನ್ನು ಘೋಷಿಸಿದೆ. 

ಜೂನ್ 28ರಂದು  ವೊಡಾಫೋನ್-ಐಡಿಯಾ (Vodafone-Idea)ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ದರಗಳು ಜುಲೈ 4 ರಿಂದ ಅನ್ವಯವಾಗುತ್ತವೆ.

ಇದನ್ನೂ ಓದಿ- Google Translateನಲ್ಲಿ 110 ಹೊಸ ಭಾಷೆಗಳ ಸೇರ್ಪಡೆ, ಅದರಲ್ಲಿ ದಕ್ಷಿಣ ಕನ್ನಡದ ತುಳು ಭಾಷೆಯೂ ಒಂದು!

ರೀಚಾರ್ಜ್ ದರ ಹೆಚ್ಚಳಕ್ಕೆ ಇದೇ ಪ್ರಮುಖ ಕಾರಣ: 
ಮೂರು ವರ್ಷಗಳ ಬಳಿಕ ರೀಚಾರ್ಜ್ ದರಗಳನ್ನು ಹೆಚ್ಚಿಸಿರುವ ಟೆಲಿಕಾಂ ದೈತ್ಯ ವೊಡಾಫೋನ್-ಐಡಿಯಾ 5G ಸೇವೆಗಳನ್ನು ಪ್ರಾರಂಭಿಸಲು ಹೂಡಿಕೆ ಮಾಡುವ ಉದ್ದೇಶದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. 

"4G ಅನುಭವವನ್ನು ಇನ್ನಷ್ಟು ಸುಧಾರಿಸಲು ಮತ್ತು 5G ಸೇವೆಗಳನ್ನು ಪ್ರಾರಂಭಿಸಲು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಲು Vi ಯೋಜಿಸಿದೆ" ಎಂದು ಟೆಲಿಕಾಂ ಕಂಪನಿ ಮಾಹಿತಿ ನೀಡಿದೆ.  ಗಮನಾರ್ಹವಾಗಿ, 2021ರ ನಂತರ ಟೆಲಿಕಾಂ ಕಂಪನಿಗಳಿಂದ ಟ್ಯಾರಿಫ್ ಪ್ಲಾನ್ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಇದೇ ಮೊದಲು. 

ಲಭ್ಯವಿರುವ ಮಾಹಿತಿಯ ಪ್ರಕಾರ, ವೋಡಾಫೋನ್-ಐಡಿಯಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೊಸ ಪ್ಲಾನ್ ಬೆಲೆಗಳು ಈ ಕೆಳಕಂಡಂತಿದೆ:- 
28 ದಿನಗಳ  ಪ್ರಿಪೇಯ್ಡ್ ಯೋಜನೆ: 

199 ರೂ. (ಹಳೆಯ ಬೆಲೆ - 179ರೂ .)
ಈ ಯೋಜನೆಯಲ್ಲಿ ಈಗ 2ಜಿಬಿ ಡೇಟಾ, ಅನಿಯಮಿತ ಕರೆ ಮತ್ತು 300 ಉಚಿತ ಎಸ್ಎಂಎಸ್ ಲಭ್ಯವಾಗಲಿದೆ.  

ಇದನ್ನೂ ಓದಿ- Whatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ

28 ದಿನಗಳ ಪೋಸ್ಟ್‌ಪೇಯ್ಡ್  ಯೋಜನೆ: 
ವೋಡಾಫೋನ್-ಐಡಿಯಾದ ಈ ಯೋಜನೆಯು 459 ರೂ.ಗಳಿಂದ 509 ರೂ.ಗೆ ಹೆಚ್ಚಾಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು 300 ಎಸ್‌ಎಂಎಸ್ ಜೊತೆಗೆ 6ಜಿಬಿ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. 

ಪ್ರಿಪೇಯ್ಡ್  ವಾರ್ಷಿಕ ಯೋಜನೆ:
ವೋಡಾಫೋನ್-ಐಡಿಯಾದ ವಾರ್ಷಿಕ ಪ್ರಿಪೇಯ್ಡ್ ಯೋಜನೆಯನ್ನು ಪಡೆಯಲು ಈಗ 1799 ರೂ. ಬದಲಿಗೆ ಹೆಚ್ಚುವರಿಯಾಗಿ 200ರೂ.ಗಳನ್ನು ಪಾವತಿಸಬೇಕು. ಎಂದರೆ,  ಇದರ ಶುಲ್ಕ 1999ಕ ರೂ.ಗೆ ಏರಿಕೆಯಾಗಿದೆ. ಇದರಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಜೊತೆಗೆ, 300 ಉಚಿತ ಎಸ್ಎಂಎಸ್, 24GB ಡೇಟಾ ಕೂಡ ಲಭ್ಯವಾಗಲಿದೆ. 
 
ಇದಲ್ಲದೆ, 1-ದಿನದ ಆಡ್-ಆನ್: 1GB ಹೆಚ್ಚುವರಿ ಡೇಟಾಗೆ ಹೊಸ ಬೆಲೆ 22 ರೂ.  (ರೂ. 19 ರಿಂದ).
3-ದಿನದ ಆಡ್-ಆನ್ ಯೋಜನೆಯು ಈಗ 48 (ರೂ. ಹಿಂದಿನ ರೂ. 39) ಗೆ ಲಭ್ಯವಾಗಲಿದೆ. ಇದರಲ್ಲಿ 6GB ಡೇಟಾ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News