ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ

ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ, ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. 

Last Updated : Jun 7, 2018, 04:42 PM IST
ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ title=

ಮುಂಬೈ: ನಗರದಾದ್ಯಂತ ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ, ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. 

ಮಳೆಯ ಬಗ್ಗೆ ಜೀ ವಾಹಿನಿಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಆಗಲಿದ್ದು, ಜೂನ್ 9 ರಿಂದ 11ರವರೆಗೆ ಮಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ.

ಅಲ್ಲದೆ, ತೀವ್ರ ಮಳೆಯಿಂದಾಗಿ ಜೆಟ್ ಏರ್ ವೇಸ್'ನ ಲಂಡನ್-ಮುಂಬೈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಬೇಕಾಯಿತು. ಒಟ್ಟು 9 ವಿಮಾನಗಳು ಹವಾಮಾನ ಬದಲಾವಣೆಯಿಂದಾಗಿ ಮಾರ್ಗ ಬದಲಾಯಿಸಿರುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.  

ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ನಿಂತ ಕಾರಣ ದಾದರ್ ಬಳಿಯ ಹಿಂದ್ ಮಠ ಪ್ರದೇಶ, ಧಾರಾವಿ, ಬೈಕುಲ್ಲ, ದಾದರ್ ಟಿಟಿ, ಕಬುತರ್ ಖಾನ, ಕಿಂಗ್ ಸರ್ಕಲ್, ನಾಗ್ಪಡ ಮತ್ತು ಮರೋಳ್ ಮರೋಷಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. 

Trending News