Watch: 'ಬಸ್ ಡೇ' ಆಚರಿಸಲು ಚಲಿಸುತ್ತಿದ್ದ ಬಸ್ ಮೇಲೆ ಹತ್ತಿದ ಸ್ಟೂಡೆಂಟ್ಸ್! ಮುಂದೆ ಆಗಿದ್ದೇನು?

ಬಸ್ ದಿನಾಚರಣೆ ಸಂದರ್ಭದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಹತ್ತಿ ವಿಚಿತ್ರವಾಗಿ ಕೂಗಾಡುತ್ತಿದ್ದ 24 ಕಾಲೇಜು ವಿದ್ಯಾರ್ಥಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

Last Updated : Jun 18, 2019, 02:15 PM IST
Watch: 'ಬಸ್ ಡೇ' ಆಚರಿಸಲು ಚಲಿಸುತ್ತಿದ್ದ ಬಸ್ ಮೇಲೆ ಹತ್ತಿದ ಸ್ಟೂಡೆಂಟ್ಸ್! ಮುಂದೆ ಆಗಿದ್ದೇನು? title=

ಚೆನ್ನೈ: ಬಸ್ ದಿನಾಚರಣೆ ಸಂದರ್ಭದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಹತ್ತಿ ವಿಚಿತ್ರವಾಗಿ ಕೂಗಾಡುತ್ತಿದ್ದ 24 ಕಾಲೇಜು ವಿದ್ಯಾರ್ಥಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನಲ್ಲಿ ಕಾಲೇಜಿನ ಮೊದಲ ದಿನ ವಿದ್ಯಾರ್ಥಿಗಳು ಬಸ್ ದಿನ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಇತರರಿಗೆ ಕಿರಿಕಿರಿಯಾಗುವಂತೆ, ತೊಂದರೆಯಾಗುವಂತೆ ವಿದ್ಯಾರ್ಥಿಗಳು ವರ್ತಿಸುವುದು ಹೊಸದೇನಲ್ಲ. ಆದರೆ, ಈ ವರ್ಷ ಬಸ್ ಡೇ ಆಚರಣೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಾರದು ಎಂದು ಚೆನೈ ಪೊಲೀಸರು ಹಲವು ದಿನಗಳಿಂದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ವಿದ್ಯಾರ್ಥಿಗಳು ಚಲಿಸುತ್ತಿದ್ದ ಬಸ್ ಮೇಲೆ ಹತ್ತಿ ಮತ್ತು ರಸ್ತೆ ಮಧ್ಯದಲ್ಲಿ ಸಾಹಸಗಳನ್ನು ಮಾಡಿದರಲ್ಲದೆ, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದರು.  

ಬಸ್ ದಿನ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚಲಿಸುತ್ತಿದ್ದ ಬಸ್ಸಿನ ಮೇಲೆ ಹತ್ತಿ ಘೋಷಣೆಗಳನ್ನು ಕೂಗುತ್ತಿರುವ ಮತ್ತು ಗ್ರೂಪ್ ಫೋಟೋಗಳನ್ನೂ ತೆಗೆಯಲು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ, ಬಸ್ ಚಾಲಕ ಬ್ರೇಕ್ ಹಾಕಿದ ಸಂದರ್ಭದಲ್ಲಿ ಬಸ್ ಮೇಲೆ ಹತ್ತಿ ಕುಳಿತಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ನೆಲಕ್ಕೆ ಬಿದ್ದ ದೃಶ್ಯಗಳನ್ನು ವೀಡಿಯೋದಲ್ಲಿ ಕಾಣಬಹುದು.

ಬಂಧಿತ ವಿದ್ಯಾರ್ಥಿಗಳನ್ನು ಪಚಾಯಪ್ಪ ಕಾಲೇಜು ಮತ್ತು ಚೆನ್ನೈನ ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜಿನವರು ಎಂದು ಹೇಳಲಾಗಿದೆ. ಬಸ್ ದಿನವನ್ನು ಆಚರಿಸಲು ಮತ್ತು ಸ್ಟಂಟ್ ಮಾಡುವಂತೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡುತ್ತಿದ್ದರು ಎನ್ನಲಾಗಿದೆ.

Trending News